ಕಾಂಗ್ರೆಸ್ ಕೇಳಿದ್ದು 181 ಸೀಟು, 26 ಕೊಡ್ತೀವಿ ಎಂದ ಎಸ್‌ಪಿ, ಕುಚುಕು ದೋಸ್ತಿಯಲ್ಲಿ ಕುಚ್ ಕುಚ್

Published : Nov 24, 2026, 02:15 PM IST
up election 2027 congress sp seat sharing 150 seats rahul gandhi akhilesh yadav

ಸಾರಾಂಶ

ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಾರ್ಟಿ ಸೀಟು ಹಂಚಿಕೆ ಮಾತುಕತೆ ತೀವ್ರಗೊಂಡಿದೆ. 181 ಸೀಟು ಕೇಳಿದ ಕಾಂಗ್ರೆಸ್‌ಗೆ ಮೊದಲ ಹಂತದಲ್ಲಿ 26 ಸೀಟು ಆಫರ್ ನೀಡಿದೆ ಎಂದು ವರದಿಯಾಗಿದೆ. ಏನಿದು ದೋಸ್ತಿಯಲ್ಲಿ ಕುಚ್ ಕುಚ್.

ನವದೆಹಲಿ (ನ.24) ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಾರ್ಟಿ ಇದೀಗ ಉತ್ತರ ಪ್ರದೇಶ ಚುನಾವಣೆಯ ಸೀಟು ಹಂಚಿಕೆ ಮಾತುಕತೆಯಲ್ಲಿದೆ. ಉತ್ತರ ಪ್ರದೇಶದಲ್ಲಿ 403 ಕ್ಷೇತ್ರಗಳ ಪೈಕಿ 181 ಸ್ಥಾನಕ್ಕೇ ಕಾಂಗ್ರೆಸ್ ಬೇಡಿಕೆ ಇಟ್ಟಿತ್ತು. ಈ ಕುರಿತು ವೇದಿಕೆಯಲ್ಲೇ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಬಹಿರಂಗವಾಗಿ ಹೇಳಿದ್ದರು. ಆದರೆ ಮಾತುಕತೆ ವೇಳೆ 120 ಸೀಟು ನೀಡುವಂತೆ ಕಾಂಗ್ರೆಸ್ ಮನವಿ ಮಾಡಿದೆ. ಆದರೆ ಮೊಹಲ ಹಂತದಲ್ಲಿ 26 ಸೀಟು ನೀಡುವುದಾಗಿ ಸಮಾಜವಾದಿ ಪಾರ್ಟಿ ಆಫರ್ ಮಾಡಿದೆ ಎಂದು ವರದಿಯಾಗಿದೆ.

ಮೊದಲ ಸುತ್ತಿನ ಮಾತುಕತೆಯಲ್ಲಿ ಕಾಂಗ್ರೆಸ್‌ಗೆ ನಿರಾಸೆ

ಕಾಂಗ್ರೆಸ್ ರಾಜ್ಯಸಭಾ ನಿವಾಸ ಪ್ರಮೋದ್ ತಿವಾರಿ ನಿವಾಸದಲ್ಲಿ ಸೀಟು ಹಂಚಿಕೆ ಕುರಿತು ಮಹತ್ವದ ಸಭೆ ನಡೆದಿದೆ. ಸಭೆ ಬಳಿಕ ಹೊರಬಂದ ಸಮಾಜವಾದಿ ಪಾರ್ಟಿ ನಾಯಕ,ರಾಜ್ಯಸಭಾ ಸಂಸದ ರಾಮ್ ಗೋಪಾಲ್ ಯಾದವ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. 403 ಕ್ಷೇತ್ರಗಳ ಪೈಕಿ 120 ಸೀಟು ನೀಡುವಂತೆ ಕಾಂಗ್ರೆಸ್ ಬೇಡಿಕೆ ಇಟ್ಟಿತ್ತು. ಕ್ಷೇತ್ರ, ಗೆಲುವಿನ ಸಾಧ್ಯತೆ ಸೇರಿದಂತೆ ಎಲ್ಲಾ ಆಯಾಮವನ್ನು ಪರಿಗಣಿಸಿ ಮೊದಲ ಹಂತದಲ್ಲಿ 26 ಸೀಟು ನೀಡುವಾದಿಗ ಸಮಾಜವಾದಿ ಪಾರ್ಟಿ ಆಫರ್ ನೀಡಿದೆ ಎಂದು ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ.

2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದ ರಾಂಪುರ ಖಾಸ್, ಫೆರೆಂಡಾ ಕ್ಷೇತ್ರ, ಎರಡನೇ ಸ್ಥಾನ ಪಡೆದಿದ್ದ ಮಥುರಾ, ಖೇರಾಗಢ, ಜಗದೀಶಪುರ, ಕಿದ್ವಾಯಿ ನಗರ ಕ್ಷೇತ್ರ ಸೇರಿದಂತೆ 26 ಸೀಟುಗಳನ್ನು ನೀಡುವುದಾಗಿ ಸಮಾಜವಾದಿ ಪಾರ್ಟಿ ಆಫರ್ ಮಾಡಿದೆ. ಮಾತುಕತೆ ಮುಂದುವರಿದಿದೆ. ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

ಪ್ರತಿ ಜಿಲ್ಲೆಯಲ್ಲಿ ಒಂದು ಸೀಟು

ಸೀಟು ಹಂಚಿಕೆ ಕುರಿತು ಕಾಂಗ್ರೆಸ್ ನಾಯಕ ರಾಜೇಂದ್ರ ಪಾಲ್ ಗೌತಮ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಸಂಸದರು ಆಯ್ಕೆಯಾಗಿರುವ ರಾಯ್‌ಬರೇಲಿ, ಸಹರಾನ್‌ಪುರ, ಬಾರಾಬಂಕಿ, ಸೀತಾಪುರ, ಅಮೆಥಿ, ಪ್ರಯಾಗರಾಜ್ ಲೋಕಸಭಾ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರ ಹಾಗೂ ಉತ್ತರ ಪ್ರದೇಶಧ 75 ಜಿಲ್ಲೆಯಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ಸೀಟು ನೀಡಬೇಕು ಎಂದು ಬೇಡಿಕೆ ಮುಂದಿಟ್ಟಿದೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಮಾತೇ ಅಂತಿಮ

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಪ್ರಬಲ ವಿರೋಧ ಪಕ್ಷವಾಗಿದೆ. ಜೊತೆಗೆ ಇತ್ತೀಚೆಗೆ ನಡೆದ ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಮಾಜವಾದಿ ಪಾರ್ಟಿ ಬಿಜೆಪಿ ಆತಂಕ ಹೆಚ್ಚಿಸಿದೆ. ಈ ಬಾರಿ ಉತ್ತರ ಪ್ರದೇಶ ಗೆಲ್ಲಲು ಮಾಸ್ಟರ್ ಪ್ಲಾನ್ ರೂಪಿಸಿಕೊಂಡಿದೆ. ಇತ್ತ ಕಾಂಗ್ರೆಸ್ ಸೀಟುಗಳ ಬೇಡಿಕೆಯನ್ನು 3 ರಿಂದ 4 ದಿನದಲ್ಲಿ ಅಂತಿಮಗೊಳಿಸುವುದಾಗಿ ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ. ಕಾಂಗ್ರೆಸ್ ಸೀಟು ಬೇಡಿಕೆ, ಎಸ್‌ಪಿ ಬೇಡಿಕೆಗಳು ಮುಖ್ಯವಲ್ಲ. ಗೆಲುವಿನ ಸಾಮರ್ಥ್ಯವೇ ಮುಖ್ಯ. ಯಾವ ಕ್ಷೇತ್ರ ಯಾರು ಗೆಲ್ಲುತ್ತಾರೆ ಅನ್ನೋ ಆಧಾರದಲ್ಲಿ ಸೀಟು ಹಂಚಿಕೆಯಾಗಲಿದೆ. ಒಂದೊಂದು ಕ್ಷೇತ್ರದಲ್ಲಿನ ಗೆಲುವು ಅತೀ ಮುಖ್ಯ ಎಂದು ರಾಮ್ ಗೋಪಾಲ್ ಯಾದವ್ ಹೇಳಿದ್ದಾರೆ.

2022ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 255 ಸ್ಥಾನ ಗೆಲ್ಲುವ ಮೂಲಕ ಯೋಗಿ ಆದಿತ್ಯನಾಥ್ ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರು. ಇತ್ತ ಸಮಾಜವಾದಿ ಪಾರ್ಟಿ 111 ಸ್ಥಾನ ಗೆದ್ದಿತ್ತು. ಆದರೆ ಕಾಂಗ್ರೆಸ್ ಕೇವಲ 2 ಸ್ಥಾನ ಗೆದ್ದುಕೊಂಡಿತ್ತು. 2024ರ ಚುನಾವಣೆ ವೇಳೆಗೆ ಇಂಡಿಯಾ ಒಕ್ಕೂಟದಡಿ ಸ್ಪರ್ಧೆ ನಡೆಸಿತ್ತು. ಈ ವೇಳೆ ಸಮಾಜವಾದಿ ಪಾರ್ಟಿ 37 ಸ್ಥಾನ ಗೆದ್ದು ಸಂಚಲನ ಸೃಷ್ಟಿಸಿತ್ತು. ಇತ್ತ ಕಾಂಗ್ರೆಸ್ 6 ಸ್ಥಾನ ಗೆಲ್ಲುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಪ್ಪನಿಲ್ಲದ ಕೊರಗು ನೀಗಿಸಿದ ಭಾರತೀಯ ಸೇನೆ; ಸಹೋದ್ಯೋಗಿಯ ಮಗಳ ಮದುವೆಯಲ್ಲಿ ತಂದೆಯಂತೆ ನಿಂತು ಹರಸಿದ ಯೋಧರು
ಪ್ರತಿ ದಿನ ಅನ್ನ ನೀಡುತ್ತಿದ್ದ ವೃದ್ಧನ ಅಂತ್ಯಕ್ರಿಯೆವರೆಗೆ ಹಿಂಬಾಲಿಸಿ ಮೌನವಾಗಿ ಕುಳಿತ ಬೀದಿ ನಾಯಿ