ಮಹತ್ವದ ಬೆಳವಣಿಗೆ, ಎಲ್ಲಾ ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದೆಹಲಿಗೆ ಮರಳಿದ ಅಮಿತ್ ಶಾ!

By Chethan Kumar  |  First Published Nov 17, 2024, 3:22 PM IST

ಮಹಾರಾಷ್ಟ್ರ, ಜಾರ್ಖಂಡ್ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಅಮಿತ್ ಶಾ ದಿಢೀರ್ ಎಲ್ಲಾ ರ್‍ಯಾಲಿ ರದ್ದುಗೊಳಿಸಿ ದೆಹಲಿಗೆ ಮರಳಿದ್ದಾರೆ. ಅಮಿತ್ ಶಾ ಈ ಕ್ಷಿಪ್ರ ನಡೆಗೆ ಕಾರಣವೇನು?
 


ನವದೆಹಲಿ(ನ.17) ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣಾ ಕಾವು ಜೋರಾಗಿದೆ. ಪ್ರಮುಖ ನಾಯಕರು ಎರಡು ರಾಜ್ಯಗಳ ಚುನಾವಣೆಯಲ್ಲಿ ಸಕ್ರಿಯವಾಗಿದ್ದಾರೆ. ಅಬ್ಬರದ ಪ್ರಚಾರ, ರ್‍ಯಾಲಿ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಬಿಜೆಪಿ ಕೂಡ ಭರ್ಜರಿ ಪ್ರಚಾರ ನಡೆಸುತ್ತಿದೆ. ಪ್ರಧಾನಿ ಮೋದಿ, ಅಮಿತ್ ಶಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಈ ಪೈಕಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲಾ ಚುನಾವಣಾ ಪ್ರಚಾರ, ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ಮರಳಿದ್ದಾರೆ.

ಮಹಾರಾಷ್ಟ್ರದ  ಗದ್‌ಚಿರೋಲಿ, ವಾರ್ಧಾ ಹಾಗೂ ಕಟೋಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಅಮಿತ್ ಶಾ ಚುನಾವಣೆ ಪ್ರಚಾರ ನಡೆಸುವುದು ನಿಗದಿಯಾಗಿತ್ತು. ಬೃಹತ್ ರ್‍ಯಾಲಿ ಆಯೋಜಿಸಲಾಗಿತ್ತು. ಆದರೆ ಮೂರು ಕ್ಷೇತ್ರಗಳ ಚುನಾವಣಾ ಪ್ರಚಾರವನ್ನು ಅಮಿತ್ ಶಾ ರದ್ದುಗೊಳಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮಣಿಪುರದಲ್ಲಿ ನಡೆಯುತ್ತಿರುವ ಭಾರಿ ಹಿಂಸಾಚಾರ. ಮಣಿಪುರ ಮತ್ತೊಮ್ಮೆ ಉದ್ವಿಘ್ನಗೊಂಡಿದೆ. ಹಿಂಸಾಚಾರ ಸೇರಿದಂತೆ ಆತಂಕದ ಘಟನೆಗಳು ಮಣಿಪುರದಲ್ಲಿ ನಡೆಯುತ್ತಿದೆ. ಇದರ ಹಿನ್ನಲೆಯಲ್ಲಿ ಅಮಿತ್ ಶಾ ತನ್ನ ಎಲ್ಲಾ ಚುನಾವಣಾ ರ್‍ಯಾಲಿ ಮೊಟಕುಗೊಳಿಸಿ ದೆಹಲಿಗೆ ಮರಳಿದ್ದಾರೆ.

Tap to resize

Latest Videos

ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ಇಂರ್ಟನೆಟ್ ಸ್ಥಗಿತ, ಮತ್ತೆ ಕರ್ಫ್ಯೂ ಜಾರಿ!

ಮಣಿಪುರ ಸರ್ಕಾರ ಜೊತೆ ಮಾತನಾಡಿರುವ ಅಮಿತ್ ಶಾ ಶಾಂತಿ ಸುವ್ಯವಸ್ಥೆ ಕಾಪಾಡಲು ಕೇಂದ್ರ ಎಲ್ಲಾ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ. ಮಣಿಪುರದಲ್ಲಿ ಈಗಾಗಲೇ ಪ್ರತಿಭಟನೆ ಹಿಂಸಾರೂಪ ತಾಳಿದ್ದು ಹತ್ತಿಕ್ಕುವಂತೆ ಸೂಚಿಸಿದ್ದಾರೆ. ಇದೇ ವೇಳೆ ಹೆಚ್ಚುವರಿ ಸೇನಾ ತುಕುಡಿಯನ್ನು ಮಣಿಪುರಕ್ಕೆ ನಿಯೋಜಿಸುವ ಕುರಿತು ಮಾಚುಕತೆ ನಡೆದಿದೆ.

ಮಣಿಪುರದ ಒಂದ ಸಮುದಾದ 6 ಮಂದಿಯನ್ನು ಅಪಹರಣ ಘಟನೆ ಭಾರಿ ಪ್ರತಿಭಟನೆಗೆ ಕಾರಣಾಗಿದೆ. ಅಪಹರಣ ಬಳಿಕ ಒತ್ತೆಯಾಳಾಗಿಟ್ಟುಕೊಂಡಿದ್ದ 6 ಮಂದಿಯ ಮೃತದೇಹ ಪತ್ತೆಯಾಗಿದೆ. ಈ ಪೈಕಿ ಮಹಿಳೆಯರು , ಮಗು ಸೇರಿದೆ. ಜಿರಿಬಾಮ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಮತ್ತೊಂದು ಸಮುದಾಯವನ್ನು ಆಕ್ರೋಶಗೊಳ್ಳುವಂತೆ ಮಾಡಿದೆ. ಸ್ಥಳೀಯ ಉಗ್ರರ ಗುಂಪು ಈ ಕೃತ್ಯ ಎಸಗಿದೆ. ಇದು ಎರಡು ಸಮುದಾಯಗಳ ನಡುವಿನ ವೈಮನಸ್ಸಿಗೆ ಕಾರಣವಾಗಿದೆ. 

 

Union Home Minister Amit Shah cancels his election rallies in Maharashtra, returns to Delhi as situation in Manipur remains volatile: Sources

— Press Trust of India (@PTI_News)

 

ಅಪಹರಣ ಹಾಗೂ ಹತ್ಯೆ ವಿರುದ್ದ ಆರಂಭಿಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಮಣಿಪುರ ಶಾಸಕರು ಹಾಗೂ  ಸಚಿವರ ಮನೆಗೆ ನುಗ್ಗಿದ ಪ್ರತಿಭಟನಾಕಾರರು ದಾಂಧಲೆ ನಡೆಸಿದ್ದಾರೆ. ಇತ್ತ ಎರಡು ದಿನಗಳ ಕಾಲ ಮಣಿಪುರದ 7 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಕರ್ಫ್ಯೂ ವಿಧಿಸಾಗಿದೆ. ಆದರೆ ಶನಿವಾರ ರಾತ್ರಿ ಉದ್ರಿಕ್ತರ ಗುಂಪು ಕರ್ಫ್ಯೂ ಲೆಕ್ಕಿಸಿದ ಹಿಂಸಾಚಾರ ನಡೆಸಿದ್ದಾರೆ. ಈ ವೇಳೆ ಮೂವರು ಬಿಜೆಪಿಯ ನಾಯಕರು, ಓರ್ವ ಹಿರಿಯ ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ಮನೆಗೆ ನುಗ್ಗಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ನಾಯಕರ ಮನೆಗಳು ಪೀಠೋಪಕರಣಗಳು ಪುಡಿ ಮಾಡಲಾಗಿದೆ.

ಮಣಿಪುರದಲ್ಲಿ ಈಗಾಲೇ ಸೇನೆ, ಅರೆಸೇನಾ ತುಕಡಿಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಎಲ್ಲಾ ಭದ್ರತೆ ನೀಡಲಾಗಿದೆ. ಆದರೆ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ನಿಯಂತ್ರಣ ಕಷ್ಟವಾಗುತ್ತಿದೆ. ಇಷ್ಟೇ ಅಲ್ಲ ಇದ್ದಕ್ಕಿದ್ದಂತೆ ಎಲ್ಲೆಂದರಲ್ಲಿ ಪ್ರತಿಭಟನೆಗಳು ಆರಂಭಗೊಳ್ಳುತ್ತಿದೆ. ಇದೀಗ ಅಮಿತ್ ಶಾ ಮಣಿಪುರದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಕಳೆದ ವರ್ಷ ಮಣಿಪುರದಲ್ಲಿ ನಡೆದ ಘಟನೆ ವಿಶ್ವಾದ್ಯಂತ ಸದ್ದು ಮಾಡಿತ್ತು. ಹಿಂಸಾರೂಪ ತಾಳಿದ್ದ ಪ್ರತಿಭಟನೆ ಹತ್ತಿಕ್ಕಲು ಸುದೀರ್ಘ ದಿನಗಳೇ ಬೇಕಾಯಿತು. ಸಂಸತ್ತು ಸೇರಿದಂತೆ ಎಲ್ಲೆಡೆ ಮಣಿಪುರ ಘಟನೆ ಮಾರ್ದನಿಸಿತ್ತು. ಇಡೀ ದೇಶವೇ ಮಣಿಪುರದ ಶಾಂತಿಗಾಗಿ ಪ್ರಾರ್ಥಿಸಿತ್ತು.

ಭಾರತದ ಈ 5 ತಾಣಗಳಿಗೆ ಹೋಗ್ಬೇಕು ಅಂದ್ರೆ ಸ್ಪೆಷಲ್‌ ಪರ್ಮಿಷನ್‌ ಬೇಕು!
 

click me!