ಮನಕಲುಕುವ ವಿಡಿಯೋ, ಅನಾರೋಗ್ಯ ಪೀಡಿತ ತಂದೆಯನ್ನು ತಳ್ಳೋ ಗಾಡಿಯಲ್ಲಿ ಆಸ್ಪತ್ರೆಗೆ ಕರೆತಂದ ಬಾಲಕ

Published : Apr 15, 2025, 02:41 PM ISTUpdated : Apr 15, 2025, 02:45 PM IST
ಮನಕಲುಕುವ ವಿಡಿಯೋ, ಅನಾರೋಗ್ಯ ಪೀಡಿತ ತಂದೆಯನ್ನು ತಳ್ಳೋ ಗಾಡಿಯಲ್ಲಿ ಆಸ್ಪತ್ರೆಗೆ ಕರೆತಂದ ಬಾಲಕ

ಸಾರಾಂಶ

ಆ್ಯಂಬುಲೆನ್ಸ್‌ಗೆ ದುಡ್ಡಿಲ್ಲ, ಯಾರಿಗೆ ಕರೆ ಮಾಡಬೇಕು ಅನ್ನೋದು ಗೊತ್ತಿಲ್ಲ. ಇತ್ತ ತಂದೆಯ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ತಳ್ಳೋ ಸೈಕಲ್ ಗಾಡಿಯಲ್ಲಿ ಮಲಗಿಸಿ ತಂದೆಯನ್ನು ಆಸ್ಪತ್ರೆಗೆ ಬಾಲಕ ಕರೆ ತಂದ ವಿಡಿಯೋ ಹಲವು ಪ್ರಶ್ನೆ ಹುಟ್ಟು ಹಾಕಿದೆ.  

ರಾಯ್‌ಬರೇಲಿ(ಏ.15) ಭಾರತದ ಆರೋಗ್ಯ ಕ್ಷೇತ್ರದಲ್ಲಿ ಹಲವು ಬದಲಾವಣೆಗಳಾಗಿದೆ. ಆಯುಷ್ಮಾನ್ ಮೂಲಕ ಆರೋದ್ಯ ಸುವಿಧಾ ಪ್ರತಿಯೊಬ್ಬರಿಗೆ ಸಿಗುವಂತೆ ಮಾಡಲಾಗಿದೆ.ಇಷ್ಟಾದರೂ ಕೆಲವರಿಗೆ ಈ ಆರೋಗ್ಯ ಸೌಲಭ್ಯಗಳು ಇನ್ನೂ ತಲುಪಿಲ್ಲ. ಇಷ್ಟೇ ಅಲ್ಲ ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲು ಸರಿಯಾದ ಆ್ಯಂಬುಲೆನ್ಸ್ ವ್ಯವಸ್ಥೆ, ಹತ್ತಿರದಲ್ಲಿ ಆಸ್ಪತ್ರೆ, ಸೂಕ್ತ ಚಿಕಿತ್ಸೆಗಳು ಲಭ್ಯವಾಗದೆ ಹಲವು ಜೀವಗಳು ಪರಿತಪಿಸುವಂತಾಗಿದೆ. ಇದೀಗ ಉತ್ತರ ಪ್ರದೇಶದ ರಾಯಬರೇಲಿಯಲ್ಲಿನ ಘಟನೆ ವಿಡೋಯ ಹಲವು ವೇದಿಕೆಗಳಲ್ಲಿ ಚರ್ಚೆಯಾಗುತ್ತಿದೆ.  ಅಪ್ರಾಪ್ತ ಬಾಲಕ ತಂದೆಯನ್ನು ತಳ್ಳೋ ಸೈಕಲ್ ಗಾಡಿ  ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದ ಈ ವಿಡಿಯೋ ವ್ಯವಸ್ಥೆ ಕುರಿತು ಹಾಗೂ ಜಾಗೃತಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ಹುಟ್ಟು ಹಾಕಿದೆ.

ಆಸ್ಪತ್ರೆಗೆ ಕರೆತರಲೂ ಹಣವಿಲ್ಲ
ಉಂಚಹಾರ್ ವಲಯದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋದಲ್ಲಿ ರೋಗಿಯನ್ನು ಆಸ್ಪತ್ರೆ ಕರೆತರುವ ದೃಶ್ಯವಿದೆ. ಸೈಕಲ್ ರೀತಿಯ ತಳ್ಳೋ ಗಾಡಿಯಲ್ಲಿ ರೋಗಿಯನ್ನು ಮಲಗಿಸಿದ್ದಾರೆ. ಕೆಲ ಬಟ್ಟೆಗಳನ್ನು ಹಾಸಿ ಇದರ ಮೇಲೆ ರೋಗಿಯನ್ನು ಮಲಗಿಸಲಾಗಿದೆ. ಬಳಿಕ ಅಪ್ರಾಪ್ತ ಬಾಲಕ ಸೈಕಲ್ ತಳ್ಳುತ್ತಾ ಸಾಗಿದ್ದಾರೆ. ರೋಗಿಯ ಆಪ್ತ ಸಂಬಂಧಿಕರೊಬ್ಬರು ಇವರ ಜೊತೆಗೆ ನಡೆದುಕೊಂಡು ಸಾಗಿದ್ದಾರೆ. ರೋಗಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರುವ ದೃಶ್ಯವಿದೆ. 

ತಾಯಿ ನಿಧನದಿಂದ ಆಘಾತ, ಮೃತದೇಹ ಜೊತೆ 1 ವಾರ ಕಳೆದ ಮಕ್ಕಳ ಕರುಣಾಜನಕ ಘಟನೆ

ಹಲವು ಭಾಗದಲ್ಲೂ ಈಗಲೂ ವ್ಯವಸ್ಥೆ ಸರಿಯಾಗಿಲ್ಲ
ಏಪ್ರಿಲ್ 12 ರಂದು ಈ ಘಟನೆ ನಡೆದಿದೆ. ಈ ವಿಡಿಯೋವನ್ನು ಸ್ಥಳೀಯರು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸತ್ಯಾಸತ್ಯತೆ ಕುರಿತು ಯಾವುದೇ ಸ್ಪಷ್ಟತೆ ಲಭ್ಯವಾಗಿಲ್ಲ. ಆದರೆ ಈ ವಿಡಿಯೋ ಹಲವು ಗ್ರಾಮೀಣ ಹಾಗೂ ಸರಿಯಾದ ವ್ಯವಸ್ಥೆಗಳು ತಲುಪಿಲ್ಲದ ಹಲವು ಗ್ರಾಮಗಳ ಪರಿಸ್ಥಿತಿಯನ್ನು ವಿವರಿಸುತ್ತದೆ. ಹಲವು ಬಾರಿ ಮೃತೇದಹ ಸಾಗಿಸಲು ಆ್ಯಂಬುಲೆನ್ಸ್‌ಗೆ ನೀಡಲು ಹಣವಿಲ್ಲದೆ ಹೊತ್ತುಕೊಂಡೆ ಸಾಗಿದ, ಬೈಕ್ ಮೇಲೆ ಮೃತದೇಹ ಸಾಗಿಸದ ಘಟನೆಗಳು ನಡೆದಿದೆ. ಇದೀಗ ಅನಾರೋಗ್ಯ ಪೀಡಿತ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಹಣವಿಲ್ಲದೆ ತಳ್ಳೋ ಗಾಡಿ ಮೂಲಕ ಕರೆತಂದ ದೃಶ್ಯ ಕೂಡ ಇದೇ ರೀತಿ ಹಲವರ ಗಮನ ಸೆಳೆದಿದೆ. ಉಂಚಹಾರ್ ಹಲವು ಭಾಗದಲ್ಲಿ ಈಗಲೂ ವಾಹನ ತೆರಳು ದಾರಿಗಳಿಲ್ಲ. ಜನರು ನಡೆದುಕೊಂಡೇ ಸಾಗಬೇಕು. ಇನ್ನು ಇಲ್ಲಿಗೆ ಸರಿಯಾದ ವಾಹನ ವ್ಯವಸ್ಥೆಗಳೂ ಇಲ್ಲ. ಈ ವಿಡಿಯೋದಲ್ಲಿರುವ ಮಾಹಿತಿ ಪ್ರಕಾರ ಬಾಲಕ ಅನಾರೋಗ್ಯ ಪೀಡಿತ ತಂದೆಯ್ನು ತಳ್ಳೋ ಗಾಡಿ ಮೂಲಕ ಕರೆತಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿಗಳು ಖಚಿತಗೊಂಡಿಲ್ಲ. 

 

 

ಪ್ರತಿ ಭಾರಿ ಈ ರೀತಿಯ ವಿಡಿಯೋಗಳು ವೈರಲ್ ಆದಾಗ ಹಲವು ಚರ್ಚೆಗಳು ನಡೆಯುತ್ತದೆ. ಇದೀಗ ರಾಯ್‌ಬರೇಲಿ ಜಿಲ್ಲೆಯಲ್ಲಿನ ವ್ಯವಸ್ಥೆಗಳ ಕುರಿತು ಭಾರಿ ಚರ್ಚೆ ಶುರುವಾಗಿದೆ. ಒಂದೆಡೆ ಯೋಗಿ ಆದಿತ್ಯನಾಥ್ ಸರ್ಕಾರ ಕಳೆದ 8 ವರ್ಷಗಳಿಂದ ಆಡಳಿತ ನಡೆಸುತ್ತಿದ್ದರೂ ವ್ಯವಸ್ಥೆಗಳು ಸರಿಯಾಗಿ ತಲುಪಿಲ್ಲ ಅನ್ನೋ ಆರೋಪ ಕೇಳಿಬಂದಿದ್ದರೆ, ರಾಯಬರೇಲಿ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಪ್ರಮುಖರು ಇಲ್ಲಿಂದಲೇ ಗೆದ್ದು ಬಂದಿದ್ದಾರೆ. ಆದರೆ ಕಳೆದ 70 ವರ್ಷಗಳಲ್ಲಿ ರಾಯಬರೇಲಿಯ ಪರಿಸ್ಥಿತಿ ಹಾಗೇ ಇದೆ ಎಂದು ಆರೋಪ ಮಾಡಿದ್ದಾರೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ