ಗೆಳೆಯನ ಮನವಿಯಂತೆ ತನ್ನ ಫಸ್ಟ್ ನೈಟ್ ವಿಡಿಯೋ ರೆಕಾರ್ಡ್, ಮರುದಿನವೇ ಉಲ್ಟಾ ಹೊಡೆದ ಆಪ್ತ!

Published : Oct 25, 2024, 07:33 PM IST
ಗೆಳೆಯನ ಮನವಿಯಂತೆ ತನ್ನ ಫಸ್ಟ್ ನೈಟ್ ವಿಡಿಯೋ ರೆಕಾರ್ಡ್, ಮರುದಿನವೇ ಉಲ್ಟಾ ಹೊಡೆದ ಆಪ್ತ!

ಸಾರಾಂಶ

ಆಪ್ತ ಗೆಳೆಯನ ಮನವಿಯಂತೆ ಪತ್ನಿಗೆ ಗೊತ್ತಿಲ್ಲದಂತೆ ತನ್ನ ಫಸ್ಟ್ ನೈಟ್ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ್ದಾನೆ. ವಿಡಿಯೋ ಕೈಸೇರುತ್ತಿದ್ದಂತೆ ಆಪ್ತ ಗೆಳೆಯನೇ ಕೊಳ್ಳಿ ಇಟ್ಟಿದ್ದಾನೆ.

ಶಹಜಾನಪುರ(ಅ.25) ಪ್ರಿ ವೆಡ್ಡಿಂಗ್, ಮದುವೆ ಮಾತ್ರವಲ್ಲ ಫಸ್ಟ್ ನೈಟ್ ವರೆಗೂ ವಿಡಿಯೋ ಮಾಡುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬ ತನ್ನ ಫಸ್ಟ್ ನೈಟ್ ವಿಡಿಯೋವನ್ನೂ ರೆಕಾರ್ಡ್ ಮಾಡಿದ್ದಾನೆ. ಅಷ್ಟಕ್ಕೂ ಈತ ತನ್ನ ಪತ್ನಿಗೆ ಗೊತ್ತಿಲ್ಲದಂತೆ ಈ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಇದು ಈ ಭೂಪನ ಆಪ್ತ ಗೆಳೆಯ ಮಾಡಿದ ಮನವಿ. ಫಸ್ಟ್ ನೈಟ್ ವಿಡಿಯೋ ಮಾಡಿ ಕಳುಹಿಸು ಎಂದು ಆಪ್ತ ಗೆಳೆಯ ಮನವಿ ಮಾಡಿದ್ದಾನೆ. ಇದಕ್ಕೆ ಒಕೆ ಎಂದ ಈತ ಮೊದಲ ರಾತ್ರಿಯ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ್ದಾನೆ. ಆದರೆ ವಿಡಿಯೋ ಕೈಸೇರುತ್ತಿದ್ದಂತೆ ಗೆಳೆಯನ ವರ್ತನೆ ಬದಲಾಗಿದೆ. ಇದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದ ಘಟನೆ ಉತ್ತರ ಪ್ರದೇಶ ಶಹಜಾನಪುರದಲ್ಲಿ ನಡೆದಿದೆ.

ಇಬ್ಬರು ಕುಚುಕು ಗೆಳೆಯರು. ಈ ಪೈಕಿ ಒಬ್ಬನಿಗೆ ಮದುವೆ ಫಿಕ್ಸ್ ಆಗಿದೆ. ಅಷ್ಟೊತ್ತಿದೆ ಗೆಳೆಯ ಶಿವಂ ಮಿಶ್ರ ವಿಚಿತ್ರ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾನೆ. ಫಸ್ಟ್ ನೈಟ್ ಸಣ್ಣ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸು ಎಂದಿದ್ದಾನೆ. ಆರಂಭದಲ್ಲಿ ಗೆಳೆಯನ ಬೇಡಿಕೆ ನಿರಾಕರಿಸಿದ್ದ ಈತ ಬಳಿಕ ಒಪ್ಪಿಕೊಂಡಿದ್ದಾನೆ. ಮದುವೆಯ ಮೊದಲ ರಾತ್ರಿ ಪತ್ನಿಗೆ ಗೊತ್ತಿಲ್ಲದಂತೆ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ್ದಾನೆ.

ಗರ್ಲ್‌ಫ್ರೆಂಡ್ ಮದ್ವೆಯಾಗಲು ಬದುಕಿರುವ ಪತ್ನಿಗೆ ಶ್ರಾದ್ಧ ಮಾಡಿ ಪಿಂಡ ಬಿಟ್ಟ ಗಂಡ!

ಗೆಳೆಯ ವಿಡಿಯೋ ನೋಡಿ ಆನಂದಿಸಿದ ಶಿವಂ ಮಿಶ್ರ ಮರು ದಿನ ಉಲ್ಟಾ ಹೊಡೆದಿದ್ದಾನೆ. ಈ ವಿಡಿಯೋ ಇಟ್ಟು ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಹೇಳಿ ಹಣ ವಸೂಲಿ ಮಾಡಲು ಆರಂಭಿಸಿದ್ದಾನೆ. ಆರಂಭದಲ್ಲೇ 50,000 ರೂಪಾಯಿ ಸುಲಿಗೆ ಮಾಡಿದ್ದಾನೆ. ಕೆಲ ದಿನಗಳಲ್ಲೇ ಮತ್ತೆ 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ಈ ಪೈಕಿ ಒಂದಷ್ಟು ಸಾವಿರ ರೂಪಾಯಿ ನೀಡಿದರೂ ಗೆಳೆಯ ಶಿವಂ ಮಿಶ್ರಾ ಸಮಾಧಾನಗೊಂಡಿಲ್ಲ. 

ಕಳೆದೊಂದು ವರ್ಷದಿಂದ ಈ ಬ್ಲಾಕ್‌ಮೇಲ್ ನಡೆಯುತ್ತಲೇ ಇದೆ. ಒಂದಷ್ಟು ಹಣ ಕೊಡುತ್ತಾ ಸಮಸ್ಯೆಯಿಂದ ಹೊರಬರುವ ಪ್ರಯತ್ನ ಮಾಡಿದ್ದಾನೆ. ಆದರೆ ಶಿವಂ ಮಿಶ್ರಾ ಬೇಡಿಕೆ ಹೆಚ್ಚಾಗಿದೆ. ತಲೆನೋವು ವಿಪರೀತವಾಗುತ್ತಿದ್ದಂತೆ ಬೇರೆ ದಾರಿ ಕಾಣದೇ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಶಿವಂ ಮಿಶ್ರಾಗೆ ಹುಡುಕಾಟ ಆರಂಭಿಸಿದ್ದಾರೆ. ಇತ್ತ ಶಿವಂ ಮಿಶ್ರಾ ನಾಪತ್ತೆಯಾಗಿದ್ದಾನೆ. 

ಆಡೀಷನಲ್ ಸೂಪರಿಡೆಂಟ್ ಪೊಲೀಸ್ ಸಂಜಯ್ ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ನೀಡಿದ್ದು, ಶಿವಂ ವಿಶ್ರಾ ವಿರುದ್ಧ ಸೆಕ್ಷನ್ 323, 504 ಹಾಗೂ 506ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಫೋನ್ ಕಾಲ್, ವಿಡಿಯೋ ಸೇರಿದಂತೆ ಕೆಲ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಿವಂ ಮಿಶ್ರಾ ಇದೇ ರೀತಿ ಹಲವರ ಬ್ಲಾಕ್ ಮೇಲ್ ಮಾಡುತ್ತಿರುವ ಮಾಹಿತಿಯೂ ಬಹಿರಂಗವಾಗಿದೆ. ಇದೀಗ ಶಿವಂ ಮಿಶ್ರಾ ಬಂಧಿಸಲು ಪೊಲೀಸರು ಸಜ್ಜಾಗಿದ್ದಾರೆ. 

ಕೈಗೆ ಬಂತು ರಾಡ್, ಪತಿಗೆ ಬಿತ್ತು ಏಟಿನ ಮೇಲೆ ಏಟು – ವೈರಲ್ ವಿಡಿಯೋ ನೋಡಿ ಅಭಿಷೇಕ್ ನೆನಪಿಸಿಕೊಂಡ ಟ್ರೋಲರ್ಸ್
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ವರ್ಷದ ಮೊದಲ ದಿನವೇ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಶಾಕ್ ನೀಡಿದ LPG ಸಿಲಿಂಡರ್
ವಶಪಡಿಸಿದ 200ಕೆಜಿ ಗಾಂಜಾ ಎಲ್ಲಿ? ಪೊಲೀಸ್ ಉತ್ತರಕ್ಕೆ ದಂಗಾಗಿ ಆರೋಪಿ ಖುಲಾಸೆಗೊಳಿಸಿದ ಕೋರ್ಟ್