ಬಸ್‌ನಲ್ಲಿ ಎಷ್ಟು ಬಾಟಲಿ ಮದ್ಯ ಕೊಂಡೊಯ್ಯಲು ಅವಕಾಶವಿದೆ? ಇಲ್ಲಿದೆ ನಿಯಮ!

By Chethan Kumar  |  First Published Oct 25, 2024, 3:39 PM IST

ಸಾರಿಗೆ ಬಸ್‌ನಲ್ಲಿ ಮದ್ಯ ಕೊಂಡೊಯ್ಯಲು ಅವಕಾಶವಿದೆಯಾ? ಇದ್ದರೆ ಎಷ್ಟು ಬಾಟಲಿ ಕೊಂಡೊಯ್ಯಬಹುದು. ನಿಯಮ ಹೇಳುವುದೇನು? ಕಂಡಕ್ಟರ್‌ ಅವಕಾಶ ನೀಡದಿದ್ದರೆ ಮುಂದೇನು? 


ಭಾರತದಲ್ಲಿ ಮದ್ಯ ಮಾರಾಟ ಬಹುತೇಕ ಸರ್ಕಾರದ ಪ್ರಮುಖ ಆದಾಯ. ಹೀಗಾಗಿ ಮದ್ಯದ ಮೇಲೆ ದುಬಾರಿ ತೆರಿಗೆ ವಿಧಿಸಲಾಗುತ್ತದೆ. ಬೆಲೆ ಏರಿಕೆಯಾಗುತ್ತಲೇ ಹೋದರೂ ಮದ್ಯ ಮಾರಾಟದಲ್ಲಿ ಇಳಿಕೆಯಾಗಿಲ್ಲ. ಭಾರತ ಕೆಲ ರಾಜ್ಯದಲ್ಲಿ ಮದ್ಯ ನಿಷೇಧಿಸಲಾಗಿದೆ. ಇನ್ನು ಮದ್ಯ ಎಗ್ಗಿಲ್ಲದೆ ಮಾರಾಟವಾಗು ರಾಜ್ಯಗಳಲ್ಲಿ ಸಾರಿಗೆ ಬಸ್‌ನಲ್ಲಿ ಮದ್ಯ ಕೊಂಡೊಯ್ಯಲು ಅವಕಾಶವಿದೆಯಾ? ಇದು ಹಲವರ ಪ್ರಶ್ನೆ. ನಿಯಮ ಪ್ರಕಾರ 2 ಲೀಟರ್ ಮದ್ಯ ಸಾರಿಗೆ ಬಸ್‌ನಲ್ಲಿ ಕೊಂಡೊಯ್ಯಲು ಅವಕಾಶವಿದೆ ಅನ್ನೋದು ಕೆಲವರ ವಾದ. ಇಲ್ಲಿ ಬಸ್ ಕಂಡಕ್ಟರ್ ನಿರ್ಧಾರ ಕೂಡ ಅತ್ಯಂತ ಪ್ರಮುಖವಾಗಿದೆ.

ಸಾರಿಗೆ ಬಸ್‌ನಲ್ಲಿ ಮದ್ಯ ಕೊಂಡೊಯ್ಯಲು ಅವಕಾಶವಿಲ್ಲ. ಹೌದು, 2 ಲೀಟರ್ ನಿಯಮ ಕೊಂಡೊಯ್ಯುವ ನಿಯಮಕ್ಕೆ ಯಾವುದೇ ಸ್ಪಷ್ಟತೆ ಇಲ್ಲ. ಸಾರಿಗೆ ಬಸ್‌ಗಳಲ್ಲಿ ಮದ್ಯ ಕೊಂಡೊಯ್ಯುವುದು ಅತ್ಯಂತ ಅಪಾಯಾಕಾರಿಯಾಗಿದೆ. ಮದ್ಯ ಬಾಟಲಿ ಬಸ್ ಒಳಗೆ ಒಡೆದು ಹೋದರೆ ಅಥವಾ ಮದ್ಯ ಚೆಲ್ಲಿದರೆ ಸುಲಭಾಗಿ ಬೆಂಕಿ ಹೊತ್ತುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಸಾರಿಗೆ ಬಸ್‌ನಲ್ಲಿ ಸುರಕ್ಷತಾ ದೃಷ್ಟಿಯಿಂದ ಮದ್ಯ ಕೊಂಡೊಯ್ಯಲು ಅವಕಾಶವಿಲ್ಲ.

Tap to resize

Latest Videos

800 ರೂ ಬೆಲೆಯ ಈ ವೊಡ್ಕಾ ಭಾರತದಲ್ಲಿ ನಂ.1, ಆದರೆ ಹೆಚ್ಚನವರಿಗೆ ಗೊತ್ತೇ ಇಲ್ಲ!

ಸಾರಿಗೆ ಬಸ್ ಕಂಡಕ್ಟರ್ ಕೆಲವು ಬಾರಿ 2 ಲೀಟರ್ ಮದ್ಯ ಕೊಂಡೊಯ್ಯಲು ಅವಕಾಶ ನೀಡುತ್ತಾರೆ. ಆದರೆ ಕಂಡಕ್ಟರ್ ನಿರಾಕರಿಸಿದರೆ ಮದ್ಯ ಕೊಂಡೊಯ್ಯುವಂತಿಲ್ಲ. ಸ್ಥಳೀಯ ಪ್ರಯಾಣದ ವೇಳೆ ಈ ಅವಕಾಶ ನೀಡಲಾಗುತ್ತದೆ.  ಮದ್ಯ ಖರೀದಿಸಿದ ಬಿಲ್, ಸೀಲ್ಡ್ ಬಾಟಲ್ ಆಗಿದ್ದರೆ ಗರಿಷ್ಠ 2 ಮದ್ಯ ಕೊಂಡೊಯ್ಯಲು ಕಂಡಕ್ಟರ್ ಅವಕಾಶ ನೀಡುತ್ತಾರೆ.  ಪಟ್ಟಣದಿಂದ ಹಳ್ಳಿ ಸಾರಿಗೆ ವ್ಯವಸ್ಥೆ, ಸೌಕರ್ಯಗಳು ನಿಯಮಿತವಾಗಿದ್ದರೆ ಕಂಡಕ್ಟರ್ ಸ್ಥಳೀಯರಿಗೆ ಗರಿಷ್ಠ 2 ಲೀಟರ್ ಮದ್ಯ ಕೊಂಡೊಯ್ಯಲು ಅವಕಾಶ ನೀಡುತ್ತಾರೆ. ಆದರೆ ಕಂಡಕ್ಟರ್ ಇದನ್ನು ನಿರಾಕರಿಸಿದರೆ ಪ್ರಶ್ನಿಸುವಂತಿಲ್ಲ. ಯಾವುದೇ ಪ್ರಯಾಣಿಕರು ಪ್ರಶ್ನಿಸಿದರೂ ಅವಕಾಶವಿಲ್ಲ. ನಿಯಮದ ಪ್ರಕಾರ ಬಸ್‌ನಲ್ಲಿ ಮದ್ಯ ಕೊಂಡೊಯ್ಯಲು ಅವಕಾಶವಿಲ್ಲ.

ಸಾರ್ವಜನಿಕ ಸಾರಿಗೆ ಹಲವು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಬೇಗನೆ ಬೆಂಕಿ ಹೊತ್ತಿಕೊಳ್ಳುವ ಮದ್ಯ ಸೇರಿಂತೆ ಇತರ ವಸ್ತುಗಳ ಕೊಂಡೊಯ್ಯಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಸಾರಿಗೆ ಬಸ್‌ನಲ್ಲಿ ಮದ್ಯ ಕೊಂಡೊಯ್ದು ಸಿಕ್ಕಿಬಿದ್ದರೆ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಇಷ್ಟೇ ಅಲ್ಲ ಗರಿಷ್ಠ 5 ವರ್ಷದ ವರೆಗೆ ಜೈಲು ಶಿಕ್ಷೆಗೆ ಗುರಿಯಾಗಬಹುದು. 

ಬಸ್ ಮಾತ್ರವಲ್ಲ ರೈಲಿನಲ್ಲೂ ಮದ್ಯ ಕೊಂಡೊಯ್ಯಲು ಅವಕಾಶವಿಲ್ಲ.ಭಾರತೀಯ ರೈಲಿನಲ್ಲಿ ಕಠಿಣ ನಿಯಮವಿದೆ. ಯಾವುದೇ ರೀತಿಯಲ್ಲಿ ಮದ್ಯ ಕೊಂಡೊಯ್ಯಲು ಅವಕಾಶವಿಲ್ಲ.  ಮದ್ಯದ ಕಾರಣದಿಂದ ರೈಲು ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ. ರೈಲಿನಲ್ಲಿ ಮದ್ಯ ಸಾಗಿಸುವುದು ಅಪಾಯಾಕಾರಿಯಾಗಿರುವುದರಿಂದ ಅಲ್ಕೋಹಾಲ್ ಸಾಗಿಸಲು ಅವಕಾಶವಿಲ್ಲ. ರೈಲಿನಲ್ಲಿ ಮದ್ಯ ಕೊಂಡೊಯ್ದರೆ ದುಬಾರಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಭಾರತದಲ್ಲಿ ಮದ್ಯ ಸೇವನೆ ಅತೀ ಹೆಚ್ಚು. ಭಾರತದಲ್ಲಿ ಸರಾಸರಿ ಒಬ್ಬ ವ್ಯಕ್ತಿ 5.7 ಲೀಟರ್ ಮದ್ಯ ಸೇವಿಸುತ್ತಾನೆ ಎಂದು ಅಂಕಿ ಅಂಶಗಳು ಹೇಳುತ್ತಿದೆ. ಮದ್ಯ ನೀತಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಕರ್ನಾಟಕದಲ್ಲಿ ಮದ್ಯ ಎಲ್ಲೆಡೆ ಮುಕ್ತವಾಗಿ ಲಭ್ಯವಿದೆ. ಆದರೆ ಕೇರಳದಲ್ಲಿ ಮದ್ಯಕ್ಕಾಗಿ ಸರ್ಕಾರದ ಔಟ್‌ಲೆಟ್‌ಗಳಲ್ಲಿ ಖರೀದಿ ಮಾಡಬೇಕು. ಇದು ಎಲ್ಲೆಂದರಲ್ಲಿ ಲಭ್ಯವಿಲ್ಲ. ಗ್ರಾಮಕ್ಕೊಂದು, ಪಟ್ಟಣಕ್ಕೊಂದು ಮಾತ್ರ ಲಭ್ಯವಿದೆ. ಹೀಗಾಗಿ ಕ್ಯೂ ನಿಂತು ಖರೀದಿ ಮಾಡಬೇಕು. ಇನ್ನು ಬಿಹಾರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮದ್ಯ ನಿಷೇಧ ಮಾಡಲಾಗಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಮದ್ಯ ಕೊಂಡೊಯ್ಯುವಂತಿಲ್ಲ. ಅದು ಸಾರಿಗೆ ಮಾತ್ರವಲ್ಲ ಸ್ವಂತ ಕಾರು, ವಾಹನದಲ್ಲೂ ಕೊಂಡೊಯ್ಯಲು ಅವಕಾಶವಿಲ್ಲ.

ರೈಲಿನಲ್ಲಿ ಪ್ರಯಾಣಿಕರು ಎಷ್ಟು ಬಾಟಲಿ ಮದ್ಯ ಒಯ್ಯಲು ಅವಕಾಶವಿದೆ? ಇಲ್ಲಿದೆ ನಿಯಮ!

click me!