
ಜಾನ್ಪುರ: ಈಗಿನ ಕಾಲದಲ್ಲಿ 75 ವರ್ಷಗಳ ಕಾಲ ಸುಖವಾಗಿ ಜೀವಿಸಿದರೆ ಅದೇ ಹೆಚ್ಚು, ಹೀಗಿರುವಾಗ 75ರ ವೃದ್ಧರೊಬ್ಬರು ತಮ್ಮ ಇಳಿವಯಸ್ಸಿನಲ್ಲಿ 35ರ ಯುವತಿಯನ್ನು ಮದುವೆಯಾಗಿದ್ದು, ಮದುವೆಯಾದ ಮರುದಿನವೇ ಅವರು ಇಹಲೋಕ ತ್ಯಜಿಸಿದ್ದಾರೆ. ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಕುಚ್‌ಮುಚ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 75 ವರ್ಷದ ಸಂಗ್ರರಾಮ್ ಮದುವೆಯಾದ ಮರುದಿನವೇ ಜೀವನಯಾತ್ರೆ ಮುಗಿಸಿದ ವೃದ್ಧ, ಪತ್ನಿಯ ಸಾವಿನ ನಂತರ ಏಕಾಂಗಿಯಾಗಿದ್ದ ಅವರು ತಮ್ಮ ವಯಸ್ಸಿನ ಸರಿ ಅರ್ಧ ವಯಸ್ಸಿಗಿಂತಲೂ ಕಡಿಮೆ ವಯಸ್ಸಿನ ಯುವತಿಯ ಜೊತೆ ಹಸೆಮಣೆ ಏರಿದ್ದರು. ಆದರೆ ಮದುವೆಯ ಮರುದಿನವೇ ಅವರು ಇಹಲೋಕ ತ್ಯಜಿಸಿದ್ದು, ಇದರಿಂದಾಗಿ 35ರ ಹರೆಯದ ಯುವತಿಗೆ ಇಳಿವಯಸ್ಸಿನಲ್ಲೇ ವಿಧವೆ ಪಟ್ಟ ಸಿಕ್ಕಿದೆ.
ಸಂಗ್ರರಾಮ್ ಅವರು ವರ್ಷದ ಹಿಂದಷ್ಟೇ ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡಿದ್ದರು ಅಂದಿನಿಂದ ಒಂಟಿಯಾಗಿ ವಾಸಿಸುತ್ತಿದ್ದರು ಅವರಿಗೆ ಮಕ್ಕಳಿರಲಿಲ್ಲಕೃಷಿಯ ಮೂಲಕ ಅವರು ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಆದರೆ ಇತ್ತೀಚೆಗೆ ಪತ್ನಿಯೂ ಅಗಲಿದ್ದರಿಂದ ಆತನ ಕುಟುಂಬದವವರು ಮರು ಮದುವೆಯಾಗುವಂತೆ ಸಲಹೆ ನೀಡಿದ್ದರು. ಕುಟುಂಬದವರ ಮಾತುಕೇಳಿ ಸಂಗ್ರರಾಮ್ ಅವರು ಮದುವೆಗೆ ಒಪ್ಪಿದ್ದು, ಅದರಂತೆ ಸೆಪ್ಟೆಂಬರ್ 29ರಂದು ಸೋಮವಾರ ಅವರು ಜಲಾಲ್ಪುರ ಪ್ರದೇಶದ ನಿವಾಸಿ 35 ವರ್ಷದ ಮನ್ಭವತಿ ಎಂಬುವರನ್ನು ಮದುವೆಯಾದರು. ದಂಪತಿ ನ್ಯಾಯಾಲಯದಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಿ ಸ್ಥಳೀಯ ದೇಗುಲದಲ್ಲಿ ಸಾಂಪ್ರದಾಯಿಕ ಅಚರಣೆಗಳನ್ನು ಮಾಡಿದರು.
ಮೊದಲ ರಾತ್ರಿಗೂ ಮೊದಲೇ ಇಹಲೋಕ ತ್ಯಜಿಸಿದ ವೃದ್ಧ
ಮದುವೆಯ ನಂತರ ಮಾತನಾಡಿದ ಮನ್ಭವತಿ ತಾನು ಪತಿಯನ್ನು ಚೆನ್ನಾಗಿ ನೋಡಕೊಳ್ಳುವುದಾಗಿ ಹಾಗೂ ಮನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾಗಿ ಹೇಳಿದರು. ಅಲ್ಲದೇ ಮದುವೆಯಾದ ದಿನ ರಾತ್ರಿ ಇಬ್ಬರು ಹೆಚ್ಚಿನ ಸಮಯವನ್ನು ಮಾತನಾಡುತ್ತಾ ಕಳೆದಿದ್ದಾಗಿ ಅವರು ಹೇಳಿದರು. ಆದರೆ, ಬೆಳಿಗ್ಗೆ ಹೊತ್ತಿಗೆ ಸಂಗ್ರರಾಮ್ ಅವರ ಆರೋಗ್ಯ ಹದಗೆಟ್ಟಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದರು.
ಸಾವಿನ ಬಗ್ಗೆ ಸಂಬಂಧಿಗಳ ಅನುಮಾನ
ಆದರೆ ಈ ಹಠಾತ್ ಸಾವು ಗ್ರಾಮದಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ. ಕೆಲವು ನಿವಾಸಿಗಳು ಇದನ್ನು ನೈಸರ್ಗಿಕ ಘಟನೆ ಎಂದು ಬಣ್ಣಿಸಿದರೆ, ಇನ್ನು ಕೆಲವರು ಪರಿಸ್ಥಿತಿ ಅನುಮಾನಾಸ್ಪದವಾಗಿದೆ ಎಂದು ಸಂಗ್ರರಾಮ್ ಸಾವಿನ ಬಗ್ಗೆ ಬಹಳ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ದೆಹಲಿಯಲ್ಲಿ ವಾಸಿಸುವ ಸಂಗ್ರರಾಮ್ ಅವರ ಸೋದರಳಿಯರು ಸೇರಿದಂತೆ ಮೃತರ ಸಂಬಂಧಿಕರು ಅಂತ್ಯಕ್ರಿಯೆಯ ವಿಧಿಗಳನ್ನು ಸ್ಥಗಿತಗೊಳಿಸಿದ್ದು, ನಾವು ಬಂದ ನಂತರವೇ ಸಂಗ್ರರಾಮ್ ಅವರ ಅಂತ್ಯಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆ ಪೊಲೀಸ್ ವಿಚಾರಣೆ ಅಥವಾ ಸಂಗ್ರರಾಮ್ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತದೆಯೇ ಎಂಬ ಬಗ್ಗೆ ಸ್ಥಳೀಯರು ಈಗ ಚರ್ಚೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನಿಮ್ಮಿಂದಾಗಿ ನಾನು ನನ್ನ ಗಂಡ ಜೊತೆಗಿದ್ದೇವೆ: ಮೇಕಪ್ ಆರ್ಟಿಸ್ಟ್ ಮಾತಿಗೆ ಶಾಕ್ ಆದ ಐಶ್ ರೈ
ಇದನ್ನೂ ಓದಿ: ಸಾಹಸದ ವೇಳೆ ಕೆಳಗೆ ಬಿದ್ದು ಸರ್ಕಸ್ ಕಲಾವಿದೆ ಮರೀನಾ ಸಾವು
ಇದನ್ನೂ ಓದಿ: 35 ಕೋಟಿ ಮೌಲ್ಯದ ಡ್ರಗ್ಸ್‌ನೊಂದಿಗೆ ಸಿಕ್ಕಿಬಿದ್ದ 'ಸ್ಟೂಡೆಂಟ್ ಆಫ್ ದಿ ಇಯರ್' ನಟ
ಇದನ್ನೂ ಓದಿ: ತನ್ನ ಗರ್ಭಿಣಿಯಾಗಿಸಿ ಮದುವೆಗೊಪ್ಪದ ಬಾಯ್‌ಫ್ರೆಂಡ್ ಕತೆ ಮುಗಿಸಿದ 16ರ ಅಪ್ರಾಪ್ತೆ
ಇದನ್ನೂ ಓದಿ:ದಿನಾ ಮನೆ ಕೆಲಸಕ್ಕೆ ಸಹಾಯ ಮಾಡುವ ಮಕ್ಕಳು ಬದುಕಿನಲ್ಲಿ ಹೆಚ್ಚು ಯಶಸ್ವಿಯಾಗ್ತಾರೆ: ಅಧ್ಯಯನ ವರದಿ
ಇದನ್ನೂ ಓದಿ:ಗರ್ಭ ನಿರೋಧಕ ಕಾಪರ್ ಟಿಯನ್ನು ಕೈಯಲ್ಲಿ ಹಿಡಿದುಕೊಂಡೆ ಜನಿಸಿದ ಮಿರಾಕಲ್ ಬೇಬಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ