ಪ್ರೀತ್ಸೆ ಎಂದು ದಲಿತ ಅಪ್ರಾಪ್ತೆ ಹಿಂದೆ ಬಿದ್ದ ಕಿರಾತಕ, ನಿರಾಕರಿಸಿದ ಹುಡುಗಿ ಹಾಡಹಗಲೇ ಹತ್ಯೆ

Published : Apr 05, 2026, 04:18 PM IST
Deoria

ಸಾರಾಂಶ

ಪ್ರೀತ್ಸೆ ಎಂದು ದಲಿತ ಅಪ್ರಾಪ್ತೆ ಹಿಂದೆ ಬಿದ್ದ ಕಿರಾತಕ, ನಿರಾಕರಿಸಿದ ಹುಡುಗಿ ಹಾಡಹಗಲೇ ಹತ್ಯೆ, ಅಕ್ಕ ಹಾಗೂ ತಮ್ಮನ ಜೊತೆ ಮೊಬೈಲ್ ಶಾಪ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಟ್ಟಾಡಿಸಿಕೊಂಡು ಅಪ್ರಾಪ್ತೆಯನ್ನು ಹತ್ಯೆ ಮಾಡಲಾಗಿದೆ.

ದಿಯೋರಿಯಾ (ಏ.05) ಅಪ್ರಾಪ್ತೆ ದಲಿತ ಹುಡುಗಿ ಹಿಂದೆ ಕಿರಾತಕನೊಬ್ಬ ಹಿಂದೆ ಬಿದ್ದಿದ್ದ. ಈತನ ಲವ್ ಪ್ರಪೋಸಲ್ ತಿರಸ್ಕರಿಸಿ ಮುನ್ನಡೆದಿದ್ದ ಹುಡುಗಿಗೆ ಮುಂದೆ ದುರಂತ ದಿನಗಳು ಎದುರಾಗಲಿದೆ ಅನ್ನೋ ಸುಳಿವು ಇರಲಿಲ್ಲ. ಅಕ್ಕ ಹಾಗೂ ತಂಗಿ ಜೊತೆ ಮೊಬೈಲ್ ಶಾಪ್‌ಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಇದೇ ಪ್ರೀತ್ಸೆ ಎಂದು ಹಿಂದಿ ಬಿದ್ದ ಕಿರಾತಕ ಎದುರಾಗಿದ್ದಾನೆ. ಸಹಚರರೊಂದಿಗೆ ಬಂದ ಈತ ಚಾಕು ತೆಗೆದು ಬೆದರಿಸಿದ್ದಾನೆ. ಮೂವರು ಓಡಿದ್ದಾರೆ. ಆದರೆ ಅಟ್ಟಾಡಿಸಿಕೊಂಡು ಹೋದ ಈ ಕಿರಾತಕರ ಕಂಡ ಹೊಲದ ಬಳಿ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ದಿಯೋರದಲ್ಲಿ ನಡೆದಿದೆ.

18ರ ಹರೆಯದ ಅಂಜಲಿ ಹತ್ಯೆ

ನೌತನ್ ಹತಿಯಾಗ್ರಹ ಗ್ರಾಮದ 18 ವರ್ಷದ ಅಂಜಲಿ ತನ್ನ ಸಹೋದರಿ ಹಾಗೂ ತಮ್ಮನೊಂದಿಗೆ ಮೊಬೈಲ್ ಶಾಪ್‌ಗೆ ತೆರಳಿದ್ದಾಳೆ. ಶನಿವಾರ (ಏ.04) ಸಂಜೆ 6 ಗಂಟೆ ವೇಳೆಗೆ ಮನೆಯಿಂದ ಕೆಲ ದೂರದಲ್ಲಿದ್ದ ಶಾಪ್‌ಗೆ ಕಾಲ್ನಡಿ ಮೂಲಕ ತೆರಳಿದ್ದಾರೆ. ಹೀಗೆ ಸಂಜೆ ವೇಳೆ ಹೊರಗಡೆ ಹೋಗುತ್ತಿರುವುದು ಮೊದಲೇನಲ್ಲ. ಎಂದಿಂತೆ ಮಾತನಾಡುತ್ತ ಮೂವರು ತೆರಳಿದ್ದಾರೆ. ಮನೆಯಿಂದ ಕೆಲ ದೂರ ಸಾಗುತ್ತಿದ್ದಂತೆ ಅಂಜಲಿ ಹಿಂದೆ ಬಿದ್ದಿದ್ದ ಅದಿತ್ಯ ಸಿಂಗ್ ಅಲಿಯಾಸ್ ಶಿವಂ ಸಿಂಗ್ ತನ್ನ ಇಬ್ಬರು ಸಹಚರರ ಜೊತೆ ಎದುರಾಗಿದ್ದಾನೆ.

ಅಟ್ಟಾಡಿಸಿಕೊಂಡು ಹತ್ಯೆ

ಪ್ರೀತಿ ಒಪ್ಪಿಕೊಂಡು ಮತ್ತೆ ಬೆದಿರಿಸಿದ್ದಾನೆ. ಆದರೆ ಈ ಮಾತಿಗೆ ಮೂವರು ಕಿವಿಗೊಡಗೆ ಮುಂದೆ ಸಾಗಿದ್ದಾರೆ. ಈ ವೇಳೆ ಚಾಕು ತೆಗೆದ ಶಿವಂ ಸಿಂಗ್ ತನ್ನ ಸಹಚರ ಜೊತೆ ಮೂವರಿಗೂ ಬೆದರಿಕೆ ಹಾಕಿದ್ದಾನೆ. ಎಲ್ಲರನ್ನು ಸಾಯಿಸುತ್ತೇನೆ ಎಂದು ಬೆದರಿಸಿದ್ದಾನೆ. ಹೀಗಾಗಿ ಮೂವರು ಹಿಂದಿರುಗಿ ಮನೆಯತ್ತ ಓಡಲು ಆರಂಭಿಸಿದ್ದಾರೆ. ಇತ್ತ ಶಿವಂ ಸಿಂಗ್ ಹಾಗೂ ಆತನ ಸಹದರರು ಅಂಜಲಿಯನ್ನು ಹಿಂಬಾಲಿಸಿದ್ದಾರೆ. ಶಿವಂ ಸಿಂಗ್‌ನಿಂದ ತಪ್ಪಿಸಿಕೊಳ್ಳಲು ರಸ್ತೆಯಿಂದ ಪಕ್ಕದ ಹೊಲದತ್ತ ಓಡಿದ್ದಾಳೆ. ಆದರೆ ಬೆನ್ನುಬಿಡಿದ ಆರೋಪಿಗಳು ಹೊಲದಲ್ಲೇ ಆಕೆಯನ್ನು ಹಿಡಿದು ಕತ್ತು ಸೀಳಿದ ಅತ್ಯಂತ ಕ್ರೂರ ಘಟನೆ ನಡೆದಿದೆ.

ಮತ್ತಿಬ್ಬರು ಓಡುತ್ತಲೇ ಮನೆಗೆ ಬಂದು ಮಾಹಿತಿ ನೀಡಿದ್ದಾರೆ. ಪೋಷಕರು ಸೇರಿದಂತೆ ಸ್ಥಳೀಯರು ಓಡೋಡಿ ಬಂದು ಹೊಲದಲ್ಲಿ ನೋಡಿದಾಗ ಅಂಜಲಿ ಮೃತಪಟ್ಟಿರುವುದು ಖಚಿವಾಗಿದೆ. ಇತ್ತ ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಾಗಿದೆ . ಪೊಲೀಸರು ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಹುಡುಕಾಟ ಆರೆಂಭಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಾಗತಿಕ ಮಾನದಂಡ GMT ಬದಲು ಮಹಾಕಾಲ್ ಸ್ಟಾಂಡರ್ಟ್ ಟೈಮ್ (MST) ಪ್ರಸ್ತಾವನೆ ಇಟ್ಟ ಭಾರತ
ದಕ್ಷಿಣದ ಭಾರತದ ಲೋಕಸಭಾ ಸ್ಥಾನಗಳ ಕಡಿತ ಇಲ್ಲ: ಪ್ರಧಾನಿ ಮೋದಿ ಮಹತ್ವದ ಹೇಳಿಕೆ