ಸಂಕಷ್ಟದ ಸಮಯದಲ್ಲೂ ಧೃತಿಗೆಡದ ಕಾಶಿಗೆ ಭೇಷ್ ಎಂದ ಮೋದಿ!

By Suvarna NewsFirst Published Jul 15, 2021, 1:07 PM IST
Highlights

* ವಾರಾಣಸಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

* ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಪ್ರಧಾನಿ

* ಕಾಶಿಗೆ ಭೇಷ್ ಎಂದ ಪ್ರಧಾನಿ ಮೋದಿ

ಕಾಶಿ(ಜು.15) ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ 1500 ಕೋಟಿ ರೂ. ಮೊತ್ತದ ಕೊಡುಗೆ ಜೊತೆ ತಲುಪಿದ್ದಾರೆ. ಈ ಸಂದರ್ಭದಲ್ಲಿ ಅವರು ಜಪಾನ್ ಮತ್ತು ಭಾರತದ ನಡುವಿನ ಸ್ನೇಹದ ಸಂಕೇತವಾದ ರುದ್ರಾಕ್ಷ ಕನ್ವೆನ್ಷನ್ ಸೆಂಟರ್ ಸೇರಿದಂತೆ (ಒಟ್ಟು ರೂ .1475.20 ಕೋಟಿ) ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿದ್ದಾರೆ. ವಾರಣಾಸಿಗೆ ತಲುಪಿದ ಮೋದಿಯನ್ನು ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದ್ದಾರೆ.

ಮೋದಿ ಪಾದ ಮುಟ್ಟಿ ನಮಸ್ಕರಿಸಲು ಬಂದ ಮಹಿಳೆ: ಹಿಂದೆ ಸರಿದ ಪಿಎಂ, ಬಳಿಕ ಮಾಡಿದ್ದು ಹೀಗೆ!

ಬಿಎಚ್‌ಯುನಲ್ಲಿ ಮೋದಿ ಮಾತು:

ಬಿಎಚ್‌ಯುನಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಶಿ ಜನರಿಗೆ ನನ್ನ ನಮಸ್ಕಾರ, ಬಹಳ ಸಮಯದ ನಂತರ ನಿಮ್ಮನ್ನು ಭೇಟಿಯಾಗಲು ನನಗೆ ಅವಕಾಶ ಸಿಕ್ಕಿತು. ಕಾಶಿ ತಾನು ಎಂದಿಗೂ ನಿಲ್ಲುವುದಿಲ್ಲ ಹಾಗೂ ಕಷ್ಟದ ಸಮಯದಲ್ಲೂ ಸುಸ್ತಾಗುವುದಿಲ್ಲ ಎಂದು ತೋರಿಸಿಕೊಟ್ಟಿದೆ. ಕಳೆದ ಕೆಲ ತಿಂಗಳು ಇಡೀ ಮಾನವಕುಲಕ್ಕೇ ಸಂಕಷ್ಟವನ್ನೆದುರಿಸಿದೆ. ಹೀಗಿರುವಾಗ ಕಾಶಿ ಸೇರಿದಂತೆ ಇಡೀ ಉತ್ತರ ಪ್ರದೇಶ ತನ್ನ ಇಡೀ ಬಲದಿಂದ ಈ ಅಪಾಯಕಾರಿಯಾದ ಕೊರೋನಾ ವೈರಸ್‌ನ್ನು ಎದುರಿಸಿದೆ ಎಂದಿದ್ದಾರೆ.

Inaugurating development projects in Kashi. https://t.co/0GVaehmP9g

— Narendra Modi (@narendramodi)

ಮೆಡಿಕಲ್ ಹಬ್ ಆದ ಕಾಶಿ:

ಕಾಶಿ ಪೂರ್ವಾಂಚಲದ ದೊಡ್ಡ ವೈದ್ಯಕೀಯ ಕೇಂದ್ರವಾಗುತ್ತಿದೆ. ಇಂದು, ಕಾಶಿಯಲ್ಲಿ ರೋಗಗಳ ಚಿಕಿತ್ಸೆಗಾಗಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ಈ ಹಿಂದೆ ಮೊದಲು ಚಿಕಿತ್ಸೆಗಾಗಿ ದೆಹಲಿ ಮತ್ತು ಮುಂಬೈಗೆ ಹೋಗಬೇಕಾಗಿತ್ತ ಎಂದು ಮೋದಿ ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

ಕೋವಿಡ್ ನಿರ್ವಹಣೆಗೆ ಯೋಗಿಯ ಹೊಗಳಿಕೆ

 ಇಡೀ ದೇಶದಲ್ಲಿ ಗರಿಷ್ಠ ಕೋವಿಡ್ ಪರೀಕ್ಷೆ ಮಾಡುವ ಹಾಗೂ ಹೆಚ್ಚು ಲಸಿಕೆ ನೀಡುವ ರಾಜ್ಯವಾಗಿ ಉತ್ತರ ಪ್ರದೇಶ ಹೊರ ಹೊಮ್ಮಿದೆ ಎಂದಿದ್ದಾರೆ.

ಮೋದಿ ಸಂಪೂರ್ಣ ಕಾರ್ಯಕ್ರಮದ ಪಟ್ಟಿ ಹೀಗಿದೆ

ವಾರಾಣಸಿ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ಮೋದಿ ಭಾರತ ಜಪಾನ್ ಸ್ನೇಹದ ಪ್ರತೀಕವಾಗಿರುವ ಕನ್ವೆಂಷನ್ ಸೆಂಟರ್ ರುದ್ರಾಕ್ಷ ಸೇರಿ ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ಮುಂದಿನ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಮೋದಿ ಬಿಎಚ್‌ಯುನಲ್ಲಿ ನೂರು ಬೆಡ್‌ಗಳ ಎಂಸಿಎಚ್‌ ವಿಂಗ್, ಗೋದೌಲಿಯಾದಲ್ಲಿ ಒಂದು ಬಹುಮಹಡಿ ಪಾರ್ಕಿಂಗ್ ಗಂಗಾ ನದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೋ-ರೋ ಬೋಟ್‌ಗಳು ಮತ್ತು ವಾರಣಾಸಿ-ಗಾಜಿಪುರ ಹೆದ್ದಾರಿಯಲ್ಲಿ ತ್ರಿಪಥದ ಫ್ಲೈಓವರ್ ಸೇರಿ ಇನ್ನೂ ಕೆಲ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. 

ಸುಮಾರು 744 ಕೋಟಿ ರೂ. ವೆಚ್ಚದ ವಿಭಿನ್ನ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಅಲ್ಲದೇ ಸುಮಾರು 839 ಕೋಟಿ ರೂ.ಗಳ ವೆಚ್ಚದ ಹಲವಾರು ಯೋಜನೆಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಇವುಗಳಲ್ಲಿ ಸೆಂಟರ್ ಫಾರ್ ಸ್ಕಿಲ್ ಮತ್ತು ಟೆಕ್ನಿಕಲ್ ಸಪೋರ್ಟ್ ಆಫ್ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ಸಿಐಪಿಇಟಿ), ಜಲ್ ಜೀವನ್ ಮಿಷನ್ ಅಡಿಯಲ್ಲಿ 143 ಗ್ರಾಮೀಣ ಯೋಜನೆಗಳು ಮತ್ತು ಕಾರ್ಖಿಯಾನ್ವ್ನಲ್ಲಿ ಮಾವು ಮತ್ತು ತರಕಾರಿಗಾಗಿ ಇಂಟಿಗ್ರೇಟೆಡ್ ಪ್ಯಾಕ್ ಹೌಸ್ ಸೇರಿವೆ. ಮಧ್ಯಾಹ್ನ 2 ಗಂಟೆಗೆ ಬಿಎಚ್‌ಯುನ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗವನ್ನು ಪರಿಶೀಲಿಸಲಿದ್ದಾರೆ. ಕೋವಿಡ್‌ನ ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ಅಧಿಕಾರಿಗಳು ಮತ್ತು ವೈದ್ಯಕೀಯ ವೃತ್ತಿಪರರನ್ನು ಭೇಟಿ ಮಾಡಲಿದ್ದಾರೆ.

click me!