ಮಾಜಿ ಸಚಿವ ರೂಡಿ ಪೈಲಟ್‌, ಡಿಎಂಕೆ ಸಂಸದ ಮಾರನ್‌ ಪ್ರಯಾಣಿಕ!

Published : Jul 15, 2021, 11:30 AM IST
ಮಾಜಿ ಸಚಿವ ರೂಡಿ ಪೈಲಟ್‌, ಡಿಎಂಕೆ ಸಂಸದ ಮಾರನ್‌ ಪ್ರಯಾಣಿಕ!

ಸಾರಾಂಶ

* ಬಿಜೆಪಿ ಸಂಸದ ಮತ್ತು ಕೇಂದ್ರದ ಮಾಜಿ ಸಚಿವರೂ ಆಗಿರುವ ರಾಜೀವ್‌ ಪ್ರತಾಪ್‌ ರೂಡಿ ಈಗ ಪೈಲಟ್ * ರೂಡಿ ಅವರು ಚಾಲನೆ ಮಾಡಿದ ವಿಮಾನದಲ್ಲಿ ಡಿಎಂಕೆ ಸಂಸದ ದಯಾನಿಧಿ ಮಾರನ್‌ ಪ್ರಯಾಣಿಕ * ರೂಡಿ ವೃತ್ತಿಯಲ್ಲಿ ಪೈಲಟ್‌ ಆಗಿದ್ದು, ಸಂಸದ ಹುದ್ದೆ ಜತೆಗೆ ಇಂಡಿಗೋದಲ್ಲಿ ಪೈಲಟ್‌ ಆಗಿಯೂ ಕೆಲಸ

ನವದೆಹಲಿ(ಜು.15): ಬಿಜೆಪಿ ಸಂಸದ ಮತ್ತು ಕೇಂದ್ರದ ಮಾಜಿ ಸಚಿವರೂ ಆಗಿರುವ ರಾಜೀವ್‌ ಪ್ರತಾಪ್‌ ರೂಡಿ ಅವರು ಚಾಲನೆ ಮಾಡಿದ ವಿಮಾನದಲ್ಲಿ ಡಿಎಂಕೆ ಸಂಸದ ದಯಾನಿಧಿ ಮಾರನ್‌ ಅವರು ದೆಹಲಿಯಿಂದ ಚೆನ್ನೈ ತಲುಪಿದ ವಿಶೇಷ ಪ್ರಸಂಗ ನಡೆಯಿತು.

‘ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ ನಾನು ಹಾಗೂ ರೂಡಿ ಒಟ್ಟಿಗೇ ಭಾಗಿ ಆಗಿದ್ದೆವು. ಸಭೆ ಮುಗಿಸಿಕೊಂಡು ದೆಹಲಿಯಿಂದ ಚೆನ್ನೈಗೆ ಹೋಗಲು ನಾನು ಇಂಡಿಗೋ ವಿಮಾನವನ್ನು ಹತ್ತಿದೆ. ಈ ವೇಳೆ ಈ ವಿಮಾನದ ಮೊದಲ ಸೀಟಲ್ಲಿ ಕ್ಯಾಪ್ಟನ್‌ ಧಿರಿಸಿನಲ್ಲಿ ಕುಳಿತ್ತಿದ್ದ ಮಾಸ್ಕ್‌ಧಾರಿ ವ್ಯಕ್ತಿ, ನನ್ನನ್ನು ಉದ್ದೇಶಿಸಿ ‘ನೀವು ಸಹ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೀರಾ?’ ಎಂದು ಕೇಳಿದರು. ಈ ವೇಳೆ ಹೀಗೇಕೆ ಕೇಳುತ್ತಿದ್ದಾರೆ ನನಗೆ ಆಶ್ಚರ್ಯವಾಯಿತು. ಕೊನೆಗೆ ಅವರು ರೂಡಿ ಎಂದು ಗೊತ್ತಾಯಿತು’ ಎಂದು ಆ ಕ್ಷಣವನ್ನು ಮೆಲುಕು ಹಾಕಿದರು.

ರೂಡಿ ವೃತ್ತಿಯಲ್ಲಿ ಪೈಲಟ್‌ ಆಗಿದ್ದು, ಸಂಸದ ಹುದ್ದೆ ಜತೆಗೆ ಇಂಡಿಗೋದಲ್ಲಿ ಪೈಲಟ್‌ ಆಗಿಯೂ ಕೆಲಸ ಮಾಡುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ದಿಢೀರ್ ₹2 ಸಾವಿರ ಏರಿಕೆ! ಬೆಂಗಳೂರಲ್ಲಿಂದು ಚಿನ್ನದ ರೇಟ್ ಎಷ್ಟು?
India Latest News Live: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ದಿಢೀರ್ ₹2 ಸಾವಿರ ಏರಿಕೆ! ಬೆಂಗಳೂರಲ್ಲಿಂದು ಚಿನ್ನದ ರೇಟ್ ಎಷ್ಟು?