ಶ್ರೀನಗರಕ್ಕೆ ನಾರಿಶಕ್ತಿ, ನಕ್ಸಲರಿಗೆ ಬುದ್ಧಿ ಕಲಿಸಿದ್ದ ಚಾರು ಸಿನ್ಹಾಗೆ ಪುಲ್ ಪವರ್!

By Suvarna NewsFirst Published Sep 1, 2020, 4:25 PM IST
Highlights

ಶ್ರೀನಗರದಲ್ಲಿ ಮಹಿಳಾ ಶಕ್ತಿ ಅನಾವರಣ/ನಗರದ ಕೇಂದ್ರ ಮೀಸಲು ಪೊಲೀಸ್ ಪಡೆ ಐಜಿಯಾಗಿ ಮಹಿಳಾ ಐಪಿಎಸ್ ಅಧಿಕಾರಿ/ ಇದೆ ಮೊದಲ ಬಾರಿಗೆ ಸರ್ಕಾರದ ನಿರ್ಧಾರ/ ಉಗ್ರರ ಕಾಟ ಇರುವ ಪ್ರದೇಶ

ಶ್ರೀನಗರ  (ಸೆ. 01)  ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಹತ್ವದ ಜವಾಬ್ದಾರಿಗೆ ಪಾತ್ರವಾಗಿದ್ದಾರೆ  ಜಮ್ಮು ಮತ್ತು ಕಾಶ್ಮೀರದ ಉಗ್ರರ ದಾಳಿ ಪೀಡಿತ ಪ್ರದೇಶದಲ್ಲಿಒಂದಾದ ಶ್ರೀನಗರದ ಕೇಂದ್ರ ಮೀಸಲು ಪೊಲೀಸ್ ಪಡೆಗೆ(ಸಿಆರ್‌ಪಿಎಫ್‌)  ಇನ್ಸ್ಪೆಕ್ಟರ್ ಜನರಲ್ ಆಗಿ ಮಹಿಳಾ ಐಪಿಎಸ್ ಅಧಿಕಾರಿ ಚಾರು ಸಿನ್ಹಾ ನೇಮಕವಾಗಿದ್ದಾರೆ.

1996 ರ ಬ್ಯಾಚ್ ತೆಲಂಗಾಣ ಕೇಡರ್‌ನ ಐಪಿಎಸ್ ಅಧಿಕಾರಿ ಚಾರು ಸಿನ್ಹಾ ಅವರನ್ನು ಈಗ ಶ್ರೀನಗರ ವಲಯದ ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಜನರಲ್ ಆಗಿ ನೇಮಕವಾಗಿದ್ದಾರೆ.  ಈ  ಹಿಂದೆ ಸಿಆರ್‌ಪಿಎಫ್‌ನಲ್ಲಿ ಬಿಹಾರ ವಲಯದ ಐಜಿಯಾಗಿ ನಕ್ಸಲರಿಗೆ ಪಾಠ ಕಲಿಸಿದ್ದರು. 

ಮೋಸ್ಟ್ ಡಿಸೈರೆಬಲ್ ವುಮೆನ್ ಪಟ್ಟ ಯಾರಿಗೆ?

ಚಾರು ಸಿನ್ಹಾ  ನೇತೃತ್ವದಲ್ಲಿಯೇ ನಕ್ಸಲರ ಅನೇಕ ಚಟುವಟಿಕೆ ದಮನ ಮಾಡಲಾಗಿತ್ತು.  ಸೋಮವಾರ ಅವರನ್ನು ಶ್ರೀನಗರ ವಲಯದ ಐಜಿಯನ್ನಾಗಿ ವರ್ಗಾಯಿಸಲಾಗಿದೆ. 2005 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಶ್ರೀನಗರ ವಲಯಕ್ಕೆ ಇದೇ ಮೊದಲ ಬಾರಿಗೆ ನಾರಿಶಕ್ತಿ ಸಿಕ್ಕಿದೆ.

ಶ್ರೀನಗರ ಸಿಆರ್‌ಪಿಎಫ್  ವಲಯ   2 ಶ್ರೇಣಿಗಳು, 22 ಕಾರ್ಯನಿರ್ವಾಹಕ ಘಟಕಗಳು ಮತ್ತು  3 ಮಹಿಳಾ  ಘಟಕ  ಹೊಂದಿದೆ. ಈ ಎಲ್ಲ ಘಟಕಗಳಿಗೆ ಸಿನ್ಹಾ  ಮುಖ್ಯಸ್ಥರಾಗಿದ್ದು ಆಡಳಿತಾತ್ಮಕ ಕ್ಷೇತ್ರದಲ್ಲಿ ಇದೊಂದು ಮಹತ್ವದ ಬದಲಾವಣೆ ಎಂದೇ ವಿಶ್ಲೇಷಿಸಲಾಗಿದೆ. 

 

click me!