
ಲಕ್ನೋ(ಡಿ.10): ಉತ್ತರ ಪ್ರದೇಶದ ಕಾನ್ಪುರ ದೇಹತ್ ನಲ್ಲಿ (Uttar Pradesh's Kanpur Dehat) ಪೊಲೀಸರ ದೌರ್ಜನ್ಯದ ವಿಡಿಯೋವೊಂದು ಹೊರಬಿದ್ದಿದೆ. ಮಗುವನ್ನು ಮಡಿಲಲ್ಲಿ ಹೊತ್ತುಕೊಂಡಿದ್ದ ವ್ಯಕ್ತಿಯ ಮೇಲೆ ಪೊಲೀಸರು (Uttar Pradesh Police) ಲಾಠಿ ಪ್ರಹಾರ ನಡೆಸಿದ್ದಾರೆ. ಇದು ಕಾನ್ಪುರ ಗ್ರಾಮಾಂತರ ಪ್ರದೇಶದ ಅಕ್ಬರ್‌ಪುರದ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿ ನಡೆದ ಘಟನೆ. ಪೊಲೀಸರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಲ್ಲದೆ, ಆತನ ಮಗುವನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವ್ಯಕ್ತಿ ಇನ್‌ಸ್ಪೆಕ್ಟರ್‌ನ ಕೈಗೆ ಕಚ್ಚಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ವಿಡಿಯೋ ವೈರಲ್ ಆದ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ವೀಡಿಯೊದಲ್ಲಿ, ಯುವಕ "ಬಚ್ಚೇ ಕೋ ಲಗ್ಗೇಗಿ (ಮಗುವಿಗೆ ಗಾಯವಾಗುತ್ತದೆ)," ಎಂದು ಹೇಳುವುದು ಕೇಳಿಸುತ್ತದೆ. ಪೊಲೀಸರು ಆತನನ್ನು ಬೆನ್ನಟ್ಟಿದ್ದು, ಕೆಲವು ಅಧಿಕಾರಿಗಳು ಬಲವಂತವಾಗಿ ಮಗುವನ್ನು ಅವನಿಂದ ಎಳೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಯುವಕ ಇದು ತನ್ನ ಮಗು, ತಾಯಿಯೂ ಇಲ್ಲ ಎಂದು ಹೇಳುತ್ತಾನೆ. ಯುವಕ ಕಾನ್ಪುರ ಗ್ರಾಮಾಂತರದ ಅಕ್ಬರ್‌ಪುರದ ಜಿಲ್ಲಾ ಆಸ್ಪತ್ರೆಯ ಉದ್ಯೋಗಿಯಾಗಿದ್ದು, ಆತನ ಸಹೋದರ "ನಿಯಮಿತವಾಗಿ ಕಿರುಕುಳ ಎಸೆಯುತ್ತಿದ್ದ" ಎಂದು ಪೊಲೀಸರು ತಿಳಿಸಿದ್ದಾರೆ.
ಕಾನ್ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಘನಶ್ಯಾಮ್ ಚೌರಾಸಿಯಾ ಮಾತನಾಡಿ, ಈ ಪ್ರದೇಶದಲ್ಲಿ ಕೆಲವರು ಅವ್ಯವಸ್ಥೆ ಸೃಷ್ಟಿಸಿ, ಆಸ್ಪತ್ರೆಯ ಒಪಿಡಿಯನ್ನು ಮುಚ್ಚಿ ರೋಗಿಗಳನ್ನು ಬೆದರಿಸುತ್ತಿದ್ದಾರೆ. ಅವರನ್ನು ತಡೆಯಲು ನಾವು ಸೌಮ್ಯ ಬಲವನ್ನು ಬಳಸಿದ್ದೇವೆ. ಅದೇ ಸಮಯದಲ್ಲಿ, ಹಿರಿಯ ಪೊಲೀಸ್ ಅಧಿಕಾರಿ ಅರುಣ್ ಕುಮಾರ್ ಸಿಂಗ್ ಯುವಕರ ಮೇಲೆ ಅತಿಯಾದ ಬಲಪ್ರಯೋಗ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಆ ವ್ಯಕ್ತಿ ಆಸ್ಪತ್ರೆಯಲ್ಲಿ ಕಟ್ಟಡ ಕಾಮಗಾರಿ ನಿಲ್ಲಿಸಲು ಯತ್ನಿಸುತ್ತಿದ್ದಾನೆ ಎಂದೂ ದೂರಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಆತನನ್ನು ತಡೆಯಲು ಮುಂದಾದಾಗ, ಅವರು ಪೊಲೀಸ್ ಇನ್ಸ್‌ಪೆಕ್ಟರ್‌ನ ಕೈಯನ್ನು ಕಚ್ಚಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ/.
ಆಕೆಯನ್ನು ಕೊಲೆ ಮಾಡಿ ಶವದ ಜೊತೆಗೆ ಮಲಗಿದ ಭೂಪ
ಕುಡಿದ ಮತ್ತಿನಲ್ಲಿ ಜಗಳ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಮಹಿಳೆಯನ್ನು (Woman) ಆಕೆಯ ಪ್ರಿಯಕರನೇ (Lover) ಮಾರಕ ಆಯುಧದಿಂದ ಕೊಚ್ಚಿ ಕೊಲೆ (Murder) ಮಾಡಿರುವ ಘಟನೆ ಜಿಲ್ಲಾ ಕೇಂದ್ರದ ನಕ್ಕಲಕುಂಟೆ ಪ್ರದೇಶದಲ್ಲಿ ಕಳೆದ ರಾತ್ರಿ ನಡೆದಿದೆ. ಕೊಲೆಗೀಡಾದ ಮಹಿಳೆಯನ್ನು ಗೌರಿಬಿನೂರು ತಾಲೂಕಿನ ಸಾದೇನಹಳ್ಳಿಯ ನಿವಾಸಿ ಅಂಜಿನಮ್ಮ ಎಂದು ಗುರುತಿಸಲಾಗಿದ್ದು, ಅಕೆಯೊಂದಿಗೆ ಅಕ್ರಮ ಸಂಬಂದ ಹೊಂದಿದ್ದ ಕೊಲೆಗಾರ ಗಾರೆ ಮೇಸ್ತ್ರಿ ವೇಣುಗೋಪಾಲ್ ಎಂಬುವನನ್ನು ನಗರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.
ಕೊಲೆ ಮಾಡಿ ನಿದ್ದೆಗೆ ಜಾರಿದ: ವಿಧವೆ ಆಂಜಿನಮ್ಮ ಸಾದೇನಹಳ್ಳಿಯಲ್ಲಿ ವಾಸವಾಗಿದ್ದಳು. ಈಕೆ ಚಿಕ್ಕಬಳ್ಳಾಪುರಕ್ಕೆ (chikkaballapura) ಗಾರೆ ಕೆಲಸಕ್ಕಾಗಿ ಬರುತ್ತಿದ್ದಳು. ಈ ವೇಳೆ ಗಾರೆ ಮೇಸ್ತಿಯಾಗಿದ್ದ ವೇಣುಗೋಪಾಲ್ ಪರಿಚಯವಾಗಿ ಆತನೊಂದಿಗೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದಳು ಎನ್ನಲಾಗಿದೆ. ನಗರದ ನಕ್ಕಲಕುಂಟೆಯ ಶಾಂತಿನಗರ ಬಡಾವಣೆಯಲ್ಲಿರುವ ತಮ್ಮ ನಿವಾಸಕ್ಕೆ ವೇಣುಗೋಪಾಲ್ ಆಂಜಿನಮ್ಮಳನ್ನು ಕರೆಸಿಕೊಂಡಿದ್ದ. ಈ ಸಂದರ್ಭದಲ್ಲಿ ವೇಣುಗೋಪಾಲ ಹಾಗೂ ಆಕೆಯ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಈ ವೇಳೆ ಆಕೆಯನ್ನು ಮಾರಕ ಆಯುದಿಂದ ವೇಣುಗೋಪಾಲ್ ಹೊಡೆದು ಕೊಲೆ (Murder) ಮಾಡಿದ್ದಾನೆ. ಬಳಿಕ ಮೃತ ದೇಹವನ್ನು ಮನೆಯ ಬಾಗಿಲ ಬಳಿ ಹಾಕಿ ಕುಡಿದ ಮತ್ತಿನಲ್ಲಿ ವೇಣುಗೋಪಾಲ್ ಮತ್ತೆ ನಿದ್ರೆಗೆ (Sleep) ಜಾರಿದ್ದ ಎಂದು ಸ್ಥಳೀಯರು ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ.
ರಕ್ತ ಕಲೆಗಳ ಮೇಲೆ ಉಪ್ಪು: ಮನೆಯಲ್ಲಿ ಆರೋಪಿ ವೇಣುಗೋಪಾಲ್ ಅಂಜಿನಮ್ಮನನ್ನು ಕೊಲೆ ಮಾಡಿದಾಗ ಆಕೆಯ ದೇಹದಿಂದ ಹರಿದ ರಕ್ತದ (Blood) ಕಲೆಗಳ ಮೇಲೆ ಯಾರಿಗೂ ಗುರುತು ಸಿಗದಂತೆ ಆರೋಪಿ ಉಪ್ಪು ಸುರಿದಿರುವುದು ಪತ್ತೆಯಾಗಿದೆ. ಮದ್ಯ ಸೇವನೆ ಮತ್ತಿನಲ್ಲಿ ಇಬ್ಬರು ಜಗಳವಾಡಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ