Covid 19 Booster Doseಗೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು: ರೋಗನಿರೋಧಕ ಶಕ್ತಿ ಕಮ್ಮಿ ಇರುವವರಿಗೆ ಲಸಿಕೆ

By Kannadaprabha NewsFirst Published Dec 10, 2021, 6:48 AM IST
Highlights

*ಒಮಿಕ್ರೋನ್‌ ನಿಯಂತ್ರಿಸಲು ಬೂಸ್ಟರ್‌ ಲಸಿಕೆ ಅಗತ್ಯ
*ರೋಗನಿರೋಧಕ ಶಕ್ತಿ ಕಮ್ಮಿ ಇರುವವರಿಗೆ ಲಸಿಕೆ ನೀಡಿ
*ಕೋವ್ಯಾಕ್ಸಿನ್‌ ಪಡೆದ ಜನರಿಗೆ 3ನೇ ಡೋಸ್‌?
 

ಜಿನೇವಾ (ಡಿ. 10): ಕೋವಿಡ್‌ ಸೋಂಕಿನಿಂದ (Covid 19) ರಕ್ಷಣೆ ಪಡೆಯಲು ಬೂಸ್ಟರ್‌ ಡೋಸ್‌ನ (Booster Dose) ಅಗತ್ಯದ ಬಗ್ಗೆ ವಿಶ್ವದಾದ್ಯಂತ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ರೋಗನಿರೋಧಕ ಶಕ್ತಿ (Immunity) ಕಡಿಮೆ ಇರುವವರು, ವೃದ್ಧರು ಮತ್ತು ನಿಷ್ಕ್ರಿಯಗೊಳಿಸಿದ ವೈರಸ್‌ನಿಂದ ತಯಾರಿಸಿದ ಲಸಿಕೆ ಪಡೆದವರಿಗೆ ಬೂಸ್ಟರ್‌ ಡೋಸ್‌ ಲಸಿಕೆ ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಈ ಮೂಲಕ ಬೂಸ್ಟರ್‌ ಡೋಸ್‌ ಕುರಿತ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.

ತಜ್ಞರ ಸಭೆ ಶಿಫಾರಸು

ಒಮಿಕ್ರೋನ್‌ (Omicron) ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (World Health Organisation) ಲಸಿಕೆ ಕುರಿತಾದ ತಜ್ಞರ ಸಮಿತಿ ಮಂಗಳವಾರ ಸಭೆ ಸೇರಿತ್ತು. ಸಭೆಯಲ್ಲಿ ಹೊಸ ವೈರಸ್‌ನ ಕುರಿತು ಚರ್ಚೆಯ ಬಳಿಕ ಯಾರಾರ‍ಯರಿಗೆ ಬೂಸ್ಟರ್‌ ಡೋಸ್‌ ನೀಡಬೇಕು ಎಂಬ ಶಿಫಾರಸುಗಳನ್ನು ಅದು ಗುರುವಾರ ಬಿಡುಗಡೆ ಮಾಡಿದೆ.

Omicron Threat: ಶಾಲೆಗಳನ್ನು ಮುಚ್ಚುವುದಿಲ್ಲ: ಶಿಕ್ಷಣ ಸಚಿವ ನಾಗೇಶ್‌

ಈಗಾಗಲೇ ವಿಶ್ವದಲ್ಲಿ ಹಲವಾರು ದೇಶಗಳು ವಯಸ್ಕರು ಮತ್ತು ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಬೂಸ್ಟರ್‌ ಡೋಸ್‌ ನೀಡಲು ಆರಂಭಿಸಿವೆ. ಈಗ ಒಮಿಕ್ರೋನ್‌ ವೈರಸ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಬೂಸ್ಟರ್‌ ಡೋಸ್‌ ನೀಡಿಕೆಯನ್ನು ಇನ್ನಷ್ಟುವಿಸ್ತರಣೆ ಮಾಡುವ ಅಗತ್ಯವಿದೆ ಎಂದು ಹೇಳಿದೆ.

6 ತಿಂಗಳಲ್ಲಿ ಲಸಿಕೆಯ ಸಾಮರ್ಥ್ಯ ಕುಂಠಿತ

2ನೇ ಡೋಸ್‌ ಲಸಿಕೆ ಪಡೆದ 6 ತಿಂಗಳಲ್ಲಿ ಲಸಿಕೆಯ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ವೃದ್ಧರಲ್ಲಿ ಈ ಕುಸಿತ ವೇಗವಾಗಿರುತ್ತದೆ. ಹೀಗಾಗಿ ಯಾರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅವರಿಗೆ ಮತ್ತು ಯಾರು ನಿಷ್ಕ್ರಿಯಗೊಳಿಸಿದ ವೈರಸ್‌ನಿಂದ ಅಭಿವೃದ್ಧಿಪಡಿಸಲಾದ ಕೋವಿಡ್‌ ಲಸಿಕೆ ಪಡೆದಿರುತ್ತಾರೋ ಅವರಿಗೆ ಬೂಸ್ಟರ್‌ ಡೋಸ್‌ನ ಅಗತ್ಯವಿದೆ ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಭಾರತದಲ್ಲಿ ಭಾರತ್‌ ಬಯೋಟೆಕ್‌, ಚೀನಾದ ಸಿನೋವ್ಯಾಕ್‌ ಬಯೋಟೆಕ್‌ ಮತ್ತು ಸಿನೋಫಾರ್ಮಾ ಕಂಪನಿಗಳು ನಿಷ್ಕಿ್ರಯಗೊಳಿಸಿದ ವೈರಸ್‌ ಬಳಸಿ ಕೋವಿಡ್‌ ಲಸಿಕೆ ಅಭಿವೃದ್ಧಿಪಡಿಸಿವೆ.

ಕೋವ್ಯಾಕ್ಸಿನ್‌ ಪಡೆದ ಜನರಿಗೆ 3ನೇ ಡೋಸ್‌?

ನಿಷ್ಕ್ರಿಯಗೊಳಿಸಿದ ವೈರಸ್‌ನಿಂದ ತಯಾರಿಸಿದ ಲಸಿಕೆ ಪಡೆದವರಿಗೆ ಬೂಸ್ಟರ್‌ ಡೋಸ್‌ ಲಸಿಕೆ ನೀಡಬೇಕು ಎಂದು ಡಬ್ಲ್ಯುಎಚ್‌ಒ ಹೇಳಿದೆ. ಭಾರತ್‌ ಬಯೋಟೆಕ್‌ ಸಂಸ್ಥೆ ಇದೇ ತಂತ್ರಜ್ಞಾನ ಬಳಸಿ ಕೋವ್ಯಾಕ್ಸಿನ್‌ (Covaxn) ಅಭಿವೃದ್ಧಿಪಡಿಸಿದೆ. ಹೀಗಾಗಿ ಭಾರತದಲ್ಲಿ ಕೋವ್ಯಾಕ್ಸಿನ್‌ ಲಸಿಕೆ ಪಡೆದವರಿಗೆ 3ನೇ ಡೋಸ್‌ ನೀಡುವ ಸಾಧ್ಯತೆಯಿದೆ. ದೇಶದಲ್ಲಿ 14.32 ಕೋಟಿ ಡೋಸ್‌ ಕೋವ್ಯಾಕ್ಸಿನ್‌ ನೀಡಲಾಗಿದೆ.

ಇನ್ನೂ 1 ವಾರ ಹೊಸ ನಿರ್ಬಂಧ ಇಲ್ಲ: ಸಿಎಂ! 

ಕೋವಿಡ್‌ನ ಹೊಸ ತಳಿ ಒಮಿಕ್ರೋನ್‌ (Covid 19 New Variant Omicron) ಆತಂಕ ಉಂಟುಮಾಡಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ವಾರದ ಕಾಲ ಪರಿಸ್ಥಿತಿ ನೋಡಿಕೊಂಡು ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಒಂದು ವಾರದ ಪರಿಸ್ಥಿತಿ ನೋಡಿಕೊಂಡು ನಂತರ ಹೊಸ ಮಾರ್ಗಸೂಚಿ ಜಾರಿಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.

Omicron Risk ಹರಡುವ ವೇಗ ಹೆಚ್ಚಳ, 57 ರಾಷ್ಟ್ರಗಳಿಗೆ ವ್ಯಾಪಿಸಿದ ರೂಪಾಂತರಿ

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕೋವಿಡ್‌ ಕುರಿತು (Covid 19) ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಹೊಸ ತಳಿ ಒಮಿಕ್ರೋನ್‌ ಸೋಂಕು ಕಾಣಿಸಿಕೊಂಡರೂ ಆತಂಕಪಡುವ ಅಗತ್ಯ ಇಲ್ಲ ಎಂದು ತಜ್ಞರು (Experts) ಸಲಹೆ ಮಾಡಿದ್ದಾರೆ. ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಸರ್ಕಾರವು ಪರಿಸ್ಥಿತಿಗನುಗುಣವಾಗಿ ನಿಯಮ (Guidelines) ಅನುಷ್ಠಾನಕ್ಕೆ ತರಲಿದೆ. ಹೊಸ ಮಾರ್ಗಸೂಚಿಗಳನ್ನು ರಚಿಸಲು ತಾಂತ್ರಿಕ ಸಲಹಾ ಸಮಿತಿ ವರದಿ ನೀಡಬೇಕು. ಆ ವರದಿಯನ್ನು ಗಮನಿಸಿ ಅಗತ್ಯವೆನಿಸಿದರೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

click me!