ಕೊರೋನಾ ವಾರಿಯರ್ಸ್ ಮೇಲೆ ಮತ್ತೆ ದಾಳಿ, ಮಸೀದಿ ಮುಂದೆ ಪೊಲೀಸರ ಅಟ್ಯಾಕ್

By Suvarna NewsFirst Published May 23, 2020, 6:23 PM IST
Highlights

ಮತ್ತೆ ಕೊರೋನಾ ವಾರಿಯರ್ಸ್ ಮೇಲೆ ದಾಳಿ/ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು/ ಮಸೀದಿ ಮುಂದೆ ಸಾಮೂಹಿಕ ಪ್ರಾರ್ಥನೆಗೆ ಸಜ್ಜು/  ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಡೆದ ಪೊಲೀಸರು

ಲಕ್ನೋ(ಮೇ 23)  ಅದು ಎಷ್ಟೇ ಜಾಗೃತಿ ಮೂಡಿಸಿದ್ದರೂ, ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರೂ ಕೊರೋನಾ ವಾರಿಯರ್ಸ್ ಮೇಲೆ ಅಲ್ಲಲ್ಲಿ ದಾಳಿಯಾಗುತ್ತಲೇ ಇದೆ. ಇದೀಗ ಉತ್ತರ ಪ್ರದೇಶದಿಂದ ಅಂಥದ್ದೇ ಒಂದು ಪ್ರಕರಣ ವರದಿಯಾಗಿದೆ.

ಕೊರೋನಾ ವಿರುದ್ಧದ ಹೋರಾಟಕ್ಕೆ  ಶುಕ್ರವಾರದ ಸಭೆ ಮತ್ತು ಸಾಮೂಹಿಕ ಪ್ರಾರ್ಥನೆ ತಡೆಯಲು ಮುಂದಾದ ಪೊಲೀಸರ ಮೇಲೆ ದಾಳಿಯಾಗಿದೆ.  ಉತ್ತರ ಪ್ರದೇಶದ ಬಹರೇಚ್ ನಲ್ಲಿ ಪೊಲೀಸರ ಮೇಲೆ ದಾಳಿಯಾಗಿದೆ.
 ಸುಮಾರು 15-20 ಜನ ಗುಂಪಾಗಿ ಮಸೀದಿ ಹೊರಗೆ ಪ್ರಾರ್ಥನೆ ಸಲ್ಲಿಸಲು ಮುಂದಾಗಿದ್ದರು. ಇದನ್ನು ಕಾನ್ ಸ್ಟೇಬಲ್ ಗಳು ತಡೆದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು ಪೊಲೀಸರೊಂದಿಗೆ ವಾಗ್ವಾದ ಮಾಡಿ ಅವರ ಮೇಲೆ ದಾಳಿ ಮಾಡಿದ್ದಾರೆ. 

ಕರ್ನಾಟಕದಲ್ಲಿ ಕೊರೋನಾ ಡಬಲ್ ಸೆಂಚುರಿ

ಮಹಿಳೆ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿ 9 ಜನರನ್ನು ಬಂಧಿಸಲಾಗಿದೆ.  ಸಾಮಾಕಿಕ ಅಂತರ ಪಾಲನೆ ಮಾಡಲು ಪೊಲೀಸರು ಇಂಥ ಜವಾಬ್ದಾರಿ ನಿರ್ವಹಿಸಿದಾಗ ಅವರ ಮೇಲೆ ಆಗುವ ದಾಳಿಗಳು  ನಿಜಕ್ಕೂ ಒಂದು ಸವಾಲಾಗಿ ಪರಿಣಮಿಸಿದೆ.

ಉತ್ತರ ಪ್ರದೇಶದಲ್ಲಿ ಈ ಹಿಂದೆ ಕೊರೋನಾ ಪೇಶಂಟ್ ಕರೆದುಕೊಂಡು  ಹೋಗಲು ಬಂದಿದ್ದ ಕೊರೋನಾ ವಾರಿಯರ್ಸ್ ಮೇಲೆ ದಾಳಿಯಾಗಿತ್ತು. ಕರ್ನಾಟಕದಲ್ಲಿಯೂ ಆಶಾ ಕಾರ್ಯಕರ್ತೆಯರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದರು.  ಬೆಂಗಳೂರಿನ ಪಾದರಾಯನಪುರ ಘಟನೆಯಂತೂ ದೊಡ್ಡ ಸುದ್ದಿಯಾಗಿತ್ತು. 

click me!