ಭಾರತ ಹಾಗೂ ಚೀನಾ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದ ರಸ್ತೆ ಕಾಮಾಗಾರಿಗೆ ಅಸಮಧಾನ ವ್ಯಕ್ತಪಡಿಸಿ ಗಡಿ ನಿಯಮ ಉಲ್ಲಂಘಿಸಿದ ಚೀನಾ, ಭಾರತಕ್ಕೆ ಎಚ್ಚರಿಕೆ ನೀಡಿದೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಮುನ್ಸೂಚನೆ ಅರಿತ ಭಾರತೀಯ ಸೇನಾ ಮುಖ್ಯಸ್ಥ ಲಡಾಕ್‌ಗೆ ಬೇಟಿ ನೀಡಿದ್ದಾರೆ
ನವದೆಹಲಿ(ಮೇ.23): ಕೊರೋನಾ ವೈರಸ್ ವಕ್ಕರಿಸಿದ ಮೇಲೆ ಇದೀಗ ಚೀನಾ ವಿರುದ್ಧ ಕೆಂಡ ಕಾರುತ್ತಿರುವ ದೇಶಗಳು ಹೆಚ್ಚಾಗಿದೆ. ಅಮೆರಿಕ ಕೂಡ ಭಾರತದ ಜೊತೆಗೆ ನಿಂತಿರುವುದು ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ ಚೀನಾ ಗಡಿಯಲ್ಲಿ ಖ್ಯಾತೆ ತೆಗೆಯುತ್ತಿದೆ. ಭಾರತೀಯ ಯೋಧರ ಜೊತೆ ಕೈಕೈ ಮಿಲಾಯಿಸಿದ ಚೀನಾ ಸೇನೆ ಇದೀಗ ಲೆಹ್ ವಲಯದಲ್ಲಿನ ಗಡಿಯಲ್ಲಿ ಚೀನಾ ಹೆಲಿಕಾಪ್ಟರ್ ಭಾರತೀಯ ಗಡಿ ಒಳ ಪ್ರವೇಶಿಸಿ ನಿಯಮ ಉಲ್ಲಂಘಿಸಿದೆ.
ಭಾರತದ ರಸ್ತೆ ಕಾಮಗಾರಿಗೆ ಆಕ್ಷೇಪ: ಮತ್ತೆ ಚೀನಾ ಗಡಿ ಕ್ಯಾತೆ
undefined
ಲೆಹ್ ವಲಯದಲ್ಲಿನ ವಾಸ್ತವ ಗಡಿ ನಿಯಂತ್ರಣ ರೇಖೆಯ ಗಲ್ವಾನ್ ಬಳಿ ಭಾರತ ರಸ್ತೆ ನಿರ್ಮಿಸುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಿಡಿಸಿರುವ ಚೀನಾ, ಯೋಧರ ಮೂಲಕ ಅತೀಕ್ರಮಣ ಪ್ರವೇಶ ಮಾಡುತ್ತಿದೆ. ಗಲ್ವಾನ್ ಗಡಿಯಲ್ಲಿ ಚೀನಾ ಹೆಲಿಕಾಪ್ಟರ್ ಭಾರತ ಪ್ರವೇಶಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಭಾರತೀಯ ಸೇನೆ , ದಾಳಿ ನಡೆಸುವ ಎಚ್ಚರಿಕೆ ನೀಡಿತ್ತು. ಇದಕ್ಕೊ ಮೊದಲು ಭಾರತೀಯ ಯೋಧರು ಚೀನಾ ಗಡಿ ಪ್ರವೇಶಿಸಿದ್ದಾರೆ ಎಂದು ಖ್ಯಾತೆ ತೆಗೆದಿತ್ತು.
ಮುಕ್ತ ವಾಯುಸೀಮೆ ಒಪ್ಪಂದಕ್ಕೆ ಗುಡ್‌ಬೈ, ಅಮೆರಿಕ ಯುದ್ದೋನ್ಮಾದದಲ್ಲಿದೆ ಎಂದ ಚೀನಾ
ಸಿಕ್ಕಿಂ ಹಾಗೂ ಪ್ಯಾಂಗಾಂಗ್ ಗಡಿ ಪ್ರದೇಶದಲ್ಲಿ ಚೀನಾ ಯೋಧರು ಭಾರತೀಯರ ಸೈನಿಕರ ಜೊತೆ ಕೈ ಕೈ ಮಿಲಾಯಿಸಿದ್ದರು. ಇನ್ನು ಚೀನಾ ಭಾರತೀಯ ಗಡಿ ಹಂಚಿಕೊಂಡಿರುವ ಪ್ರದೇಶದಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಿದೆ. ಪರಿಸ್ಥಿತಿ ಗಂಭೀರವಾಗುತ್ತಿರುವನ್ನು ಅರಿತ ಭಾರತೀಯ ಸೇನಾ ಮುಖ್ಯಸ್ಥ ಎಂ.ಎಂ.ನರವಾನೆ ಲೆಹ್ ವಲಯಕ್ಕೆ ಬೇಟಿ ನೀಡಿ ಹಿರಿಯ ಸೇನಾಧಿಕಾರಿಗಳ ಜೊತೆ ಪರಿಸ್ಥಿತಿ ಅವಲೋಕಿಸಿದ್ದಾರೆ.
ಚೀನಾ ಜೊತೆ ನಡೆಸಿದ ಎರಡು ಸುತ್ತಿನ ಸಂಧಾನ ಮಾತುಕತೆಯೂ ವಿಫಲವಾಗಿರುವ ಕಾರಣ, ಸೇನಾ ಮುಖ್ಯಸ್ಥರೆ ಅಖಾಡಕ್ಕಿಳಿದಿದ್ದಾರೆ. ಭಾರತದ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಚೀನಾ ಖ್ಯಾತೆ ತೆಗೆಯುತ್ತಿರುವುದಕ್ಕೆ ಭಾರತ ಆರಂಭದಲ್ಲೇ ಅಸಮಧಾನ ವ್ಯಕ್ತಪಡಿಸಿತ್ತು. ಆದರೆ ಚೀನಾ ಮಾತ್ರ ಪುಂಡಾಟ ಮುಂದುವರಿಸಿದೆ.