ಲವ್‌ ಜಿಹಾದ್‌ ನಡೆಸಿದರೆ ‘ಅಂತಿಮ ಯಾತ್ರೆ’!

By Suvarna NewsFirst Published Nov 1, 2020, 2:07 PM IST
Highlights

ಲವ್‌ ಜಿಹಾದ್‌ ನಡೆಸಿದರೆ ‘ಅಂತಿಮ ಯಾತ್ರೆ’| ಅಂಥವರಿಗೆ ‘ರಾಮ ನಾಮ್‌ ಸತ್ಯ ಹೈ’ ಪಠಿಸುತ್ತೇವೆ|  ಉ.ಪ್ರ. ಸಿಎಂ ಯೋಗಿ ಗುಡುಗು| ಲವ್‌ ಜಿಹಾದ್‌ ವಿರುದ್ಧ ಶೀಘ್ರ ಕಾನೂನು

ಲಖನೌ(ನ.01): ಲವ್‌ ಜಿಹಾದ್‌ ವಿರುದ್ಧ ಸುಗ್ರೀವಾಜ್ಞೆ ಹೊರಡಿಸುವ ಸುಳಿವು ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, ‘ಬಲವಂತದ ಮತಾಂತರ ನಡೆಸುವವರ ‘ರಾಮ ನಾಮ್‌ ಸತ್ಯ ಹೈ’ (ಅಂತಿಮ ಯಾತ್ರೆ) ನಡೆಸಲಾಗುವುದು’ ಎಂದು ಗುಡುಗಿದ್ದಾರೆ.

ಇದೇ ವೇಳೆ, ಲವ್‌ ಜಿಹಾದ್‌ ವಿರುದ್ಧ ಕಾನೂನು ರೂಪಿಸುವತ್ತ ಸರ್ಕಾರ ಕೆಲಸ ಮಾಡಲಿದೆ ಎಂದು ಪುನಃ ಹೇಳಿದ್ದಾರೆ.

‘ಕೇವಲ ಮದುವೆ ಉದ್ದೇಶಕ್ಕೆ ಮತಾಂತರ ಸಲ್ಲದು’ ಎಂಬ ಅಲಹಾಬಾದ್‌ ಹೈಕೋರ್ಟ್‌ ತೀರ್ಪಿಗೆ ಪ್ರತಿಕ್ರಿಯೆ ನೀಡಿದ ಯೋಗಿ, ‘ಮದುವೆಗಾಗಿ ಮತಾಂತರ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ. ಸರ್ಕಾರ ಲವ್‌ ಜಿಹಾದ್‌ ತಡೆಗೆ ಕೆಲಸ ಮಾಡಲಿದ್ದು, ಕಾನೂನು ರೂಪಿಸಲಿದೆ. ಒಂದು ವೇಳೆ ತಮ್ಮ ಗುರುತು ಮುಚ್ಚಿಟ್ಟು ‘ನಮ್ಮ ಸೋದರಿಯರ’ ಜತೆ ಆಟವಾಡಲು ಯತ್ನಿಸಿದರೆ ಅಂಥವರ ‘ರಾಮ ನಾಮ ಸತ್ಯ ಹೈ’ (ಅಂತಿಮ ಯಾತ್ರೆ ವೇಳೆ ಹೇಳುವ ಮಂತ್ರ ಪಠಣ) ಆರಂಭವಾಗಲಿದೆ’ ಎಂದು ಎಚ್ಚರಿಸಿದರು.

ಆದರೆ ಈ ಹೇಳಿಕೆ ಭಾರೀ ಸುದ್ದಿಯಾಗುತ್ತಲೇ ಸ್ಪಷ್ಟನೆ ನೀಡಿರುವ ಯೋಗಿ, ನಾನು ರಾಮ ನಾಮ ಸತ್ಯ ಹೈ ಹೇಳಿಕೆ ನೀಡಿದ್ದು ಕ್ರಿಮಿನಲ್‌ಗಳು ಮತ್ತು ಮಾಫಿಯಾಗಳನ್ನು ಉದ್ದೇಶಿಸಿ ಎಂದಿದ್ದಾರೆ.

click me!