ಅಯೋಧ್ಯೆ ಮಂದಿರಕ್ಕೆ ಭೂಮಿ ಪೂಜೆ ನಡೆದಲ್ಲೇ 28 ವರ್ಷ ಬಳಿಕ ದೀಪಾವಳಿ!

By Suvarna News  |  First Published Nov 1, 2020, 12:36 PM IST

 ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು| ಅಯೋಧ್ಯೆ ಮಂದಿರಕ್ಕೆ ಭೂಮಿ ಪೂಜೆ ನಡೆದಲ್ಲೇ


ಅಯೋಧ್ಯೆ(ನ.01): ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಸ್ಥಳದಲ್ಲೇ ಈ ಬಾರಿ ಅದ್ಧೂರಿ ದೀಪಾವಳಿ ಆಚರಣೆಗೆ ನಿರ್ಧರಿಸಲಾಗಿದೆ. ಆ ಸ್ಥಳದಲ್ಲಿ ದೀಪಾವಳಿ ನಡೆಯುತ್ತಿರುವುದು 28 ವರ್ಷಗಳ ಬಳಿಕ. ಭೂಮಿಪೂಜೆ ನಡೆದ ಸ್ಥಳ ಸೇರಿ ಇಡೀ ಅಯೋಧ್ಯೆಯಲ್ಲಿ ಸಂಭ್ರಮದಲ್ಲಿ ಹಬ್ಬ ಆಚರಣೆಗೆ ನಿರ್ಧರಿಸಲಾಗಿದೆ

. ಸರಯೂ ನದಿ ಸೇರಿದಂತೆ ರಾಮಮಂದಿರ ನಿರ್ಮಾಣವಾಗಲಿರುವ ಸ್ಥಳವೂ ಲಕ್ಷಾಂತರ ದೀಪದೊಂದಿಗೆ ಅಲಂಕಾರಗೊಳ್ಳಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ದೀಪಾವಳಿಯಂದು ಅಯೋಧ್ಯೆಗೆ ಭೇಟಿ ನೀಡಿ ಸ್ವತಃ ಪೂಜೆ ನೆರವೇರಿಸಲಿದ್ದಾರೆ ಎನ್ನಲಾಗಿದೆ.

Tap to resize

Latest Videos

\ಕಳೆದ ವರ್ಷದ ದೀಪಾವಳಿ ದೀಪೋತ್ಸವದಂದು ಅಯೋಧ್ಯೆ ನಗರದಲ್ಲಿ 5.5 ಲಕ್ಷ ದೀಪಗಳು ಬೆಳಗಿದ್ದವು. ತನ್ಮೂಲಕ ಈ ಘಟನೆಯು ಗಿನ್ನೆಸ್‌ ವಿಶ್ವದಾಖಲೆಯಾಗಿತ್ತು.

click me!