ಪ್ರಿಯಾಂಕಾ ಮಾತಿಗೆ ಯೋಗಿ ಮಣೆ,  ಇದಲ್ಲವೆ ನಿಜವಾದ  ಕಾಳಜಿ!

By Suvarna NewsFirst Published May 18, 2020, 5:53 PM IST
Highlights

ಪ್ರಿಯಾಂಕಾ ವಾದ್ರಾ ಮನವಿ ಪುರಸ್ಕರಿಸಿದ ಉತ್ತರ ಪ್ರದೇಶ ಸರ್ಕಾರ/ ವಲಸೆ ಕಾರ್ಮಿಕರಿಗಾಗಿ ಸಾವಿರ ಬಸ್ ಗೆ ಅನುಮತಿ/ ಕಾಂಗ್ರೆಸ್ ವತಿಯಿಂದ ಸಾವಿರ ಬಸ್/  ವಿಡಿಯೋ ಮುಖೇನ ಮನವಿ ಮಾಡಿಕೊಂಡಿದ್ದ ಪ್ರಿಯಾಂಕಾ

ಲಕ್ನೋ(ಮೇ 18)   ಕೊರೋನಾ  ವಿರುದ್ಧದ ಹೋರಾಟದಲ್ಲಿ ಪಕ್ಷ ತಾರತಮ್ಯ, ರಾಜಕೀಯ ಇಲ್ಲ. ಹೌದು ಅಂಥದ್ದೊಂದು ಉದಾಹರಣೆ  ಮತ್ತೆ ಸಿಕ್ಕಿದೆ. ಕಾಂಗ್ರೆಸ್ ಜನರಲ್ ಸಕ್ರೆಟರಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾಡಿಕೊಂಡ ಮನವಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸ್ಪಂದಿಸಿದ್ದಾರೆ.

ವಲಸೆ ಕಾರ್ಮಿಕರು ಮನೆ ತಲುಪಲು 1,000 ಬಸ್ಸುಗಳನ್ನು ಕಾಂಗ್ರೆಸ್ ವತಿಯಿಂದ ಓಡಿಸಲು ಅನುಮತಿ ಕೋರಿ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಈಗ ಸ್ಪಂದನೆ ಸಿಕ್ಕಿದೆ.

ಬೀದಿಗೆ ಬಂದ ರಾಹುಲ್ ಗೆ ನಿರ್ಮಲಾ ಏಟು; ಎಲ್ಲಾ ಟೈಮ್ ವೇಸ್ಟ್

ಈ ಮನವಿಯನ್ನು ಪುರಸ್ಕರಿಸಿರುವ ಯೋಗಿ ಸರ್ಕಾರ, ಬಸ್ಸುಗಳ ನಂಬರ್, ಚಾಲಕರ ಹೆಸರುಗಳ ಪಟ್ಟಿ ಕೊಡುವಂತೆ ಪ್ರಿಯಾಂಕಾ ಗಾಂಧಿ ಅವರಿಗೆ ಕೋರಿದೆ. ವಲಸೆ ಕಾರ್ಮಿಕರಿಗಾಗಿ ಕಾಂಗ್ರೆಸ್ ವತಿಯಿಂದ ಬಸ್ಸುಗಳನ್ನು ಓಡಿಸುವ ಮನವಿ ಪುರಸ್ಕರಿಸಲಾಗಿದೆ.

ಯೋಗಿ ಆದಿತ್ಯನಾಥ್‌ಗೆ ಪ್ರಿಯಾಂಕ ಗಾಂಧಿ  ವಾದ್ರಾ ಅವರಿಗೆ ಪತ್ರ ಬರೆದು ವಿಚಾರ ತಿಳಿಸಿದ್ದಾರೆ.  ವಲಸೆ ಕಾರ್ಮಿಕರಿಗಾಗಿ ಕಾಂಗ್ರೆಸ್ ವತಿಯಿಂದ ಬಸ್ಸುಗಳನ್ನು ಓಡಿಸಲು ಅನುಮತಿ ನೀಡುವಂತೆ ಕೋರಿ ಪ್ರಿಯಾಂಕಾ ಗಾಂಧಿ ವಾದ್ರಾ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದರು. ಬಾಡಿಗೆ ಪಡೆದಿರುವ ಬಸ್ಸುಗಳ ವಿಡಿಯೋ ಕೂಡ ಪೋಸ್ಟ್ ಮಾಡಿದ್ದರು.

ಸರಣಿ ಟ್ವೀಟ್ ಮಾಡಿ ಪ್ರಿಯಾಂಕಾ ಮನವಿ ಮಾಡಿಕೊಂಡಿದ್ದರು. ಇನ್ನೊಂದು ಕಡೆ ವಲಸೆ ಕಾರ್ಮಿಕರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದನ್ನು ಬಿಜೆಪಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವ್ಯಂಗ್ಯವಾಡಿ ಇದೊಂದು ಡ್ರಾಮಾ ಎಂದು ಹೇಳಿದ್ದರು. ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಕರೆಯಂತೆ ಇಲ್ಲಿ ಮಾತ್ರ ಒಗ್ಗಟ್ಟು ಪ್ರದರ್ಶನ ಆಗಿದೆ. 

click me!