ಕೋವಿಡ್ 19: ಈ ವಿಪತ್ತಿಗೆ ಯಾರು ಕಾರಣ? ಪರಿಹಾರವೇನು?

By Kannadaprabha News  |  First Published May 18, 2020, 5:30 PM IST

ಸ್ವಧರ್ಮೇ ಮರಣಂ ಶ್ರೇಯಃ ಪರಧರ್ಮೋ ಭಯಾವಹಃ ಎಂಬುದನ್ನು ನಂಬದೆ ಸ್ವಧರ್ಮ, ಸ್ವದೇಶಗಳೆರಡೂ ಬೇಡವಾಗಿದ್ದವರಿಗೆ ಈಗ ಏನು ಹೇಳಬೇಕು? ಅವರು ಇಲ್ಲಿಗೆ ಬರುವ ಹಾಗಿಲ್ಲ, ನಮ್ಮವರು ಅವರನ್ನು ರಕ್ಷಿಸಲು ಅಲ್ಲಿಗೆ ಹೋಗುವ ಹಾಗಿಲ್ಲ.


ವಿಶ್ವದಾದ್ಯಂತ ಹರಡಿರುವ ಕೋವಿಡ್‌-19 ವೈರಾಣು ಸೃಷ್ಟಿಸಿರುವ ಭಯಾನಕ ಅನಾಹುತಗಳು ಇಡೀ ಮನುಕುಲವನ್ನೇ ಕಂಗೆಡಿಸಿವೆ. ಯಾರೂ ಊಹೆ ಮಾಡಿಕೊಳ್ಳಲಾಗದಷ್ಟುಸಾವು, ಸೋಂಕು, ಭಯ ಎಲ್ಲೆಡೆ ಆವರಿಸಿದೆ.

ಇರುವುದೆಲ್ಲವ ಬಿಟ್ಟು

Latest Videos

undefined

ವಿದ್ಯಾಭ್ಯಾಸ, ಹೆಚ್ಚಿನ ಹಣಸಂಪತ್ತು, ಐಷಾರಾಮಿ ಜೀವನ, ಭೋಗಜೀವನಕ್ಕಾಗಿ ನಮ್ಮ ಭಾರತೀಯ ಸಂಪ್ರದಾಯಗಳನ್ನು ಇಲ್ಲಿಯೇ ಬಿಟ್ಟು, ಈ ಆಚರಣೆ, ಧರ್ಮ ಬಂಧನ ಏನೂ ಬೇಡವೆನಿಸಿ ಹೊರದೇಶಗಳಿಗೆ ಹೋದವರು ಅಲ್ಲಿಯ ಮಹಾಮಾರಿಯನ್ನು ಇಲ್ಲಿಗೂ ತಂದು ಬಿಟ್ಟಿದ್ದಾರೆ. ಪರಿಣಾಮ ಇಲ್ಲಿ ಶ್ರೀಮಂತರು, ಸುಶಿಕ್ಷಿತರು, ಮಧ್ಯಮ ವರ್ಗದವರು, ಬಡವರು ಎಂಬ ಭೇದವಿಲ್ಲದೆ ಈ ರೋಗದ ಭಯಾನಕ ರೂಪಗಳು ಎಲ್ಲರನ್ನೂ ದಿನೇ ದಿನೇ ಕಾಡುತ್ತಿವೆ.

ಕರ್ನಾಟಕದಲ್ಲಿ ಯಾಕೆ ಚುನಾವಣೆಗೆ ನಿಲ್ತಿಲ್ಲ ಅಣ್ಣಾಮಲೈ?

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬ ಕವಿ ಗೋಪಾಲಕೃಷ್ಣ ಅಡಿಗರ ಕವಿತೆಯ ಸಾಲು ಎಷ್ಟುಸತ್ಯ ಹಾಗೂ ಗಂಭೀರ ಅಂತ ಈಗ ನಮಗೆಲ್ಲ ಅನಿಸುತ್ತಿದೆ. ಎಷ್ಟೋ ಪಾಲಕರೂ ತಮ್ಮ ಮಕ್ಕಳ ಶ್ರೇಯಸ್ಸು ವಿದೇಶದಲ್ಲಿ ಓದುವುದರಿಂದ, ಅಲ್ಲಿ ನೌಕರಿ ಮಾಡುವುದರಿಂದ ಇದೆ ಎಂದು ಭಾವಿಸಿದ್ದವರು ಈಗ ಪಶ್ಚಾತ್ತಾಪ ಪಡುವಂತಾಗಿದೆ.

ಈಗ ನಮ್ಮ ದೇಶವನ್ನು ಘೋರವಾಗಿ ವ್ಯಾಪಿಸುತ್ತಿರುವ ವೈರಾಣು, ಪ್ರಪಂಚದ ಇತರ ಸೋಕಾಲ್ಡ್‌ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅತ್ಯಂತ ಭಯಾನಕವಾಗಿ ಪರಿಣಮಿಸಿ ಈಗಾಗಲೇ ಸಾವಿರಾರು ಪ್ರಾಣಭಕ್ಷಣೆ ಮಾಡಿ ಆಗಿದೆ. ಅಲ್ಲಿರುವ ನಮ್ಮ ಜನರು ಸ್ವದೇಶಕ್ಕೆ ಬರಲು ಹಪಹಪಿಸುತ್ತಿದ್ದಾರೆ. ಪ್ರಾಣ ರಕ್ಷಣೆಗಾಗಿ ನಮ್ಮನ್ನು ಕರೆಸಿಕೊಳ್ಳಿ ಎಂದು ಸರ್ಕಾರಕ್ಕೆ ಗೋಗರೆಯುತ್ತಿದ್ದಾರೆ. ಈ ಅತಂತ್ರ ಬದುಕು ಎಲ್ಲರನ್ನೂ ತಲ್ಲಣಗೊಳಿಸಿದೆ.

ಸ್ವಧರ್ಮೇ ಮರಣಂ ಶ್ರೇಯಃ ಪರಧರ್ಮೋ ಭಯಾವಹಃ ಎಂಬುದನ್ನು ನಂಬದೆ ಸ್ವಧರ್ಮ, ಸ್ವದೇಶಗಳೆರಡೂ ಬೇಡವಾಗಿದ್ದವರಿಗೆ ಇವತ್ತು ಏನು ಹೇಳಬೇಕು? ಅವರು ಇಲ್ಲಿಗೆ ಬರುವ ಹಾಗಿಲ್ಲ, ನಮ್ಮವರು ಅವರನ್ನು ರಕ್ಷಿಸಲು ಅಲ್ಲಿಗೆ ಹೋಗುವ ಹಾಗಿಲ್ಲ. ಎಂತಹ ದುಸ್ಥಿತಿ!

ಬ್ರೇಕಿಂಗ್: 10 ಹಾಗೂ 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಇದೇ ತರಹದ ಸನ್ನಿವೇಶ ‘ಶ್ರೀಕೃಷ್ಣಾವತಾರದ ಕೊನೆಯ ಘಳಿಗೆಗಳು’ ಎಂಬ ಪುಸ್ತಕದಲ್ಲಿ ಕಾಣಸಿಗುತ್ತದೆ.

ಕೃಷ್ಣಾವತಾರದ ಕೊನೆಯ ದಿನಗಳು

ಮಹಾಭಾರತದ ಯುದ್ಧ ಮುಗಿದು 36 ವರ್ಷದ ಬಳಿಕ ಶ್ರೀಕೃಷ್ಣ ತನ್ನ ಅವತಾರವನ್ನು ಅಂತ್ಯಗೊಳಿಸುವ ಸಮಯದಲ್ಲಿ ಯಾದವರೆಲ್ಲ ದ್ವಾರಕಾನಗರವನ್ನು ಬಿಟ್ಟು ಪೆಂಡಾರಕ ಕ್ಷೇತ್ರದ ಸಮುದ್ರತೀರದಲ್ಲಿ ಮದ್ಯಪಾನ, ಸ್ತ್ರೀವ್ಯಸನ, ಜೂಜು, ಇತ್ಯಾದಿ ಸಂಸ್ಕಾರರಹಿತರಾಗಿ ಒಬ್ಬರಿಗೊಬ್ಬರು ಹೊಡೆದಾಡಿ ಪ್ರಾಣ ಕಳೆದುಕೊಳ್ಳತ್ತಾರೆ. ಆ ಸಂದರ್ಭದಲ್ಲಿ ಸಾವಿರಾರು ಹೆಣಗಳು ಬೀಳುತ್ತವೆ. ಹೆಣಗಳ ದುರ್ಗಂಧ, ನಾಯಿ-ನರಿ ತಿಂದ ಅರ್ಧ ಶರೀರ, ಕೈ-ಕಾಲುಗಳು ದೇಹದಿಂದ ಬೇರ್ಪಟ್ಟಭಾಗಗಳು, ಹದ್ದು-ಕಾಗೆಗಳು ಮಾಂಸಭಕ್ಷಣೆಗಾಗಿ ಬರುವ ಎಲ್ಲ ದೃಶ್ಯಗಳನ್ನು ಸ್ವತಃ ಕೃಷ್ಣ ನೋಡಬೇಕಾಗುತ್ತದೆ.

ಅವರೆಲ್ಲರ ಉತ್ತರ ಕ್ರಿಯೆಗಾಗಿ ಹಸ್ತಿನಾಪುರದಲ್ಲಿರುವ ಅರ್ಜುನನಿಗಾಗಿ ಕೃಷ್ಣ ಹೇಳಿ ಕಳಿಸುತ್ತಾನೆ. ಆದರೆ ಆ ಹೆಣಗಳ ರಾಶಿಯಿಂದ ಬರುವ ಅಸಹ್ಯವಾದ ದುರ್ಗಂಧವನ್ನು ಕೃಷ್ಣನಿಗೂ ಸಹಿಸಲು ಕಷ್ಟಕರವಾಯಿತು. ಅರ್ಜುನನ ಬರುವನ್ನು ನಿರೀಕ್ಷಿಸುತ್ತಲೇ ಶ್ರೀಕೃಷ್ಣ ತನ್ನ ಅವತಾರವನ್ನು ಅಂತ್ಯಗೊಳಿಸಿಬಿಟ್ಟ. ಅರ್ಜುನ ಬಂದ ಮೇಲೆ ಈ ಆಘಾತಕಾರಿ ವಿಷಯದಿಂದ ಬಹಳ ನೊಂದುಕೊಳ್ಳುತ್ತಾನೆ. ಕೃಷ್ಣನ ಅಪ್ಪಣೆಯಾದ ಆ ಎಲ್ಲ ದೇಹಗಳ ಅಂತ್ಯಸಂಸ್ಕಾರವನ್ನು ಪೂರ್ಣಗೊಳಿಸುತ್ತಾನೆ. ಅದಕ್ಕೆ ಎಷ್ಟುಕಟ್ಟಿಗೆ, ಶ್ರೀಗಂಧ, ನಾನಾ ಜಾತಿಯ ಸುಗಂಧ ದ್ರವ್ಯ, ತೈಲ, ಕಸ್ತೂರಿ, ಅಗರು, ದಶಾಂಗ, ಮರದ ಹಾಲು, ಸಾಂಬ್ರಾಣಿ ಇತ್ಯಾದಿ ಬಳಸಿದರೂ ಆ ದುರ್ಗಂಧ ಶಮನಗೊಳ್ಳಲಿಲ್ಲವಂತೆ.

ಈ ಕರಾಳ ಬದುಕಿಗೆ ಹೊಣೆ ಯಾರು?

ಈಗ ಮೊನ್ನೆ ಮೊನ್ನೆ ಇಟಲಿಯಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಾಗ ಅವರನ್ನು ಹೂಳುವುದಕ್ಕೂ ಜಾಗವಿಲ್ಲದೇ ಪಕ್ಕದ ಊರಿಗೆ ಮಿಲಿಟರಿ ಸೇವೆಯನ್ನು ಬಳಸಿ ಹೆಣಗಳನ್ನು ಸಾಗಿಸಿದ್ದನ್ನು ನಾವು ಮಾಧ್ಯಮದಲ್ಲಿ ಕಂಡಿದ್ದೇವೆ. ಎಂಥ ದುರ್ದೈವ ಅವರದು. ತಾವು ಸಾಯುವಾಗ ತಮ್ಮ ಆಪ್ತರು, ಇಷ್ಟರು, ಮಕ್ಕಳು ಮೊಮ್ಮಕ್ಕಳು ಹತ್ತಿರ ಇರಬೇಕೆಂಬ ಕೊನೆಯಾಸೆ ಎಲ್ಲರಿಗೂ ಇರುತ್ತದೆ.

ಆದರೆ ಈ ಭಯಾನಕ ಜನಪದೋಧ್ವಂಸ ರೋಗದ ಸಮಯದಲ್ಲಿ ತಮ್ಮವರು ಸಾಯುತ್ತಿದ್ದಾರೆ ಅಂತ ತಿಳಿದರೂ ಸಾಂಕ್ರಾಮಿಕ ವೈರಾಣುವಿನ ಭಯದಿಂದ ರೋಗಿಯ ಕಡೆಯವರು ಒಟ್ಟಿಗೇ ಸೇರಿ ಉತ್ತರ ಕ್ರಿಯೆಗಳನ್ನು ಮಾಡುವ ಹಾಗಿಲ್ಲ. ಹೋಗಲಿ ಕೊನೆಯ ಪಕ್ಷ ಒಂದು ತುಳಸೀ ಪತ್ರ ಹಾಕಲೂ ಹತ್ತಿರದ ಬಂಧುಗಳಿಗೆ ಅವಕಾಶ ಇಲ್ಲದಂತಾಗಿದೆ.

ಬದುಕಿರುವ ಕೆಲವರಿಗೆ ಬದುಕೇ ಘೋರವಾಗಿದೆ. ಈ ಕರಾಳ ಬದುಕು ಹಾಗೂ ಸಾವಿಗೆ ಹೊಣೆ ಯಾರು? ಪ್ರಕೃತಿಯ ವಿರುದ್ಧ ಹೋಗುತ್ತಾ ಪ್ರಜ್ಞಾಪರಾಧ ಮಾಡುತ್ತಿರುವ ಮನುಕುಲಕ್ಕೆ ಹಾಗೂ ಜೀವಕುಲಕ್ಕೆ ಎಷ್ಟೊಂದು ಅಪಾಯ ಕಾದಿದೆ ಎಂಬುದು ಮತ್ತೊಮ್ಮೆ ಎಲ್ಲರಿಗೂ ಸಾಕ್ಷಾತ್‌ ಕಾಣಿಸುತ್ತಿದೆ.

ಸೋಂಕು ತಡೆಯಲು ಸಚಿವರ ಮೆಗಾ ಪ್ಲಾನ್: ರಾಜ್ಯದ ರೆಡ್‌ ಲೈಟ್‌ ಏರಿಯಾಗೆ ಬೀಗ?

ಇದಕ್ಕೆಲ್ಲ ಪರಿಹಾರ ಎಲ್ಲಿದೆ?

ಕ್ಷಮಯಾ ಧರಿತ್ರಿ.​ ಆದರೆ ಆ ಧರಿತ್ರಿಯೂ ಕ್ಷಮಿಸಲಾರದಷ್ಟುತಪ್ಪುಗಳನ್ನು ನಾವು ಮಾಡಿದ್ದೇವೆ. ಧರೆಯೇ ಹೊತ್ತಿ ಉರಿಯುವಾಗ ಎಲ್ಲಿಗೆ ಓಡಿ ತಪ್ಪಿಸಿಕೊಳ್ಳುತ್ತೀರಿ? ಯಾವ ಮಾಸ್ಕ್‌, ಯಾವ ಸ್ಯಾನಿಟೈಸರ್‌, ಯಾವ ಆಹಾರ, ಯಾವ ಪ್ರಾರ್ಥನೆ, ಯಾವ ಔಷ​ಧ ಈ ರೋಗದಿಂದ ಜಗತ್ತನ್ನು ಮುಕ್ತ ಮಾಡಬಲ್ಲುದು ಎಂದು ಪ್ರತಿಯೊಬ್ಬರೂ ಚಿಂತಿಸುತ್ತಿದ್ದಾರೆ.

ಸದಾಚಾರ, ಸಂಸ್ಕಾರ, ಸಕಲ ಜೀವಿಗಳ ಕ್ಷೇಮ, ಅಹಿಂಸೆ, ಇಂದ್ರಿಯ ನಿಗ್ರಹ ಇತ್ಯಾದಿಗಳಿಂದ ಆಯುರ್ವೇದದಲ್ಲಿ ತಿಳಿಸಿದ ಜೀವನದ ಸರಳ ದಿನಚರ್ಯ, ಋುತುಚರ್ಯಗಳ ಪಾಲನೆ, ಸ್ವಾಸ್ಥ್ಯ ರಕ್ಷಣೆ ಇತ್ಯಾದಿಯನ್ನು ಪಾಲಿಸುವ ದಿನಗಳು ಮತ್ತೆ ಬರುತ್ತಲಿವೆ. ಇಂತಹ ಆಪತ್ತುಗಳಿಗೆ ಪರಿಹಾರ ನಮ್ಮನ್ನು ತಿದ್ದಿಕೊಳ್ಳುವುದರಲ್ಲಿ ಮಾತ್ರ ಇದೆ.

click me!