Uttar Pradesh Elections: ಯೋಗಿ ಆದಿತ್ಯನಾಥ್ ಮುಂದೆ ಪ್ರಧಾನಿ ಆಗುವುದರಲ್ಲಿ ಸಂಶಯವಿಲ್ಲ: ರಾಘವೇಶ್ವರ ಶ್ರೀ!

By Kannadaprabha News  |  First Published Mar 12, 2022, 11:27 AM IST

ಯೋಗಿ ಆದಿತ್ಯನಾಥ್‌ ಪ್ರಭಾವಿ ರಾಜಕಾರಣಿ ಆಗಿರುವುದಷ್ಟೇ ಅಲ್ಲ, ಸಂತ ಕುಲಕ್ಕೆ ಭೂಷಣ ಎನಿಸಿದ್ದಾರೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ  ಹೇಳಿದ್ದಾರೆ. 


ಹೊಸನಗರ (ಮಾ. 12) : ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರು ಮುಂದೊಂದು ದಿನ ದೇಶದ ಪ್ರಧಾನಿ ಆಗಲಿದ್ದಾರೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ (Raghaveshwara Bharathi Swamiji) ಹೇಳಿದ್ದಾರೆ. ಯೋಗಿ ಆದಿತ್ಯನಾಥ್‌ ಪ್ರಭಾವಿ ರಾಜಕಾರಣಿ ಆಗಿರುವುದಷ್ಟೇ ಅಲ್ಲ, ಸಂತ ಕುಲಕ್ಕೆ ಭೂಷಣ ಎನಿಸಿದ್ದಾರೆ. ಅವರು ಮುಂದೊಂದು ದಿನ ದೇಶದ ಪ್ರಧಾನಿ ಆಗುವುದರಲ್ಲಿ ಸಂಶಯವಿಲ್ಲ. ಆ ಸಾಮರ್ಥ್ಯ ಅವರಲ್ಲಿದೆ. ಅವರ ನೇರ, ನಿಷ್ಠುರ ರಾಜಕಾರಣ ಇತರರಿಗೆ ಮಾದರಿಯಾಗಿದೆ ಎಂದರು. ಇನ್ನು ಗೋವುಗಳ ರಕ್ಷಣೆಗೆ ಗೋಹತ್ಯಾ ನಿಷೇಧ ಕಾಯಿದೆ (anti cow slaughter bill) ಜಾರಿಗೊಳಿಸಿರುವ ಸರಕಾರದ ಕ್ರಮ ಪ್ರಶಂಸನೀಯ ಎಂದರು.

ಆದರೆ ಕಾಯಿದೆ ಇನ್ನಷ್ಟುಕಟ್ಟುನಿಟ್ಟಾಗಿ ಜಾರಿಯಾಗಬೇಕು. ಎಲ್ಲವೂ ಕಾನೂನಿನಿಂದ ಮಾತ್ರವೇ ಆಗಲು ಸಾಧ್ಯವಿಲ್ಲ. ಗೋ ಮಾತೆಯ ರಕ್ಷಣೆಗೆ ಎಲ್ಲರೂ ಸಿದ್ಧರಾಗಬೇಕು. ಈ ನಿಟ್ಟಿನಲ್ಲಿ ರಾಮಚಂದ್ರಾಪುರ ಮಠವು (Ramachandrapura Matha) ಗೋವುಗಳ ರಕ್ಷಣೆಗೆ ಹಿಂದಿನಿಂದಲೂ ಬದ್ಧವಾಗಿದೆ ಎಂದು ಅವರು ಹೇಳಿದರು.

Tap to resize

Latest Videos

ಇದನ್ನೂ ಓದಿ: ಜಗತ್ತಿನೆಲ್ಲ ನಾಯಕರು ಜನಪ್ರಿಯತೆ ಕಳೆದುಕೊಳ್ಳುತ್ತಿರುವಾಗ ಮೋದಿ ಜನಪ್ರಿಯತೆ ಏರುತ್ತಿರೋದ್ಹೇಗೆ.?

ಈ ನಿಟ್ಟಿನಲ್ಲಿ ರಾಮಚಂದ್ರಾಪುರ ಮಠವು ಗೋವುಗಳ ರಕ್ಷಣೆಗೆ ಹಿಂದಿನಿಂದಲೂ ಬದ್ಧವಾಗಿದೆ. ಹಲವು ವಿಶಿಷ್ಟಕಾರ್ಯಗಳನ್ನು ನಡೆಸುತ್ತಿದೆ. ಗೋಸ್ವರ್ಗ, ಗೋಲೋಕಗಳ ನಿರ್ಮಾಣ, ವಿಶ್ವ ಗೋ ಸಮ್ಮೇಳನ, ಗೋ ಆಂದೋಲನದಂತಹ ಕಾರ‍್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ ಎಂದ ಅವರು, ಭವಿಷ್ಯದಲ್ಲಿ ಮತ್ತೊಮ್ಮೆ ಗೋ ಸಮ್ಮೇಳನ ನಡೆಸುವ ಚಿಂತನೆ ನಡೆದಿದೆ ಎಂದರು.

ಮಾ.13ರಂದು ಗೋ ಲೋಕದಲ್ಲಿರುವ ಗೋವರ್ಧನ ಗಿರಿಧಾರಿ ದೇವಸ್ಥಾನ ವರ್ಧಂತ್ಯುತ್ಸವ ನಡೆಯಲಿದೆ. ಸಾಮೂಹಿಕ ವಿಷ್ಣು ಪಾರಾಯಣ ಸಮರ್ಪಣೆ, ರಜತ ಕವಚ, ಛತ್ರ ಸಮರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಧರ್ಮಸಭೆ ಹಮ್ಮಿಕೊಳ್ಳಲಾಗಿದೆ. ಭಕ್ತರು, ಗಣ್ಯರು, ವಿವಿಧ ಸಚಿವರು ಭಾಗಿಯಾಗಲಿದ್ದಾರೆ ಎಂದರು.

ಇದನ್ನೂ ಓದಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾತ್ ರಾಜೀನಾಮೆ!

ಹೋಳಿಗೂ ಮೊದಲೇ ಯೋಗಿ ಪ್ರಮಾಣ ವಚನ: ಉತ್ತರ ಪ್ರದೇಶ ಚುನಾವಣೆಯಲ್ಲಿ (Uttar Pradesh Eelection) ಸ್ಪಷ್ಟಬಹುಮತದೊಂದಿಗೆ ಜಯ ಸಾಧಿಸಿರುವ ಬಿಜೆಪಿ, ರಾಜ್ಯದಲ್ಲಿ ನೂತನ ಸರ್ಕಾರವನ್ನು ಮಾ.18ರ ಹೋಳಿ ಹುಣ್ಣಿಮೆಗೂ ಮೊದಲೇ ರಚಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi), ಬಿಜೆಪಿ ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ ಮಾ.14 ಅಥವಾ 15ರಂದು ಲಖನೌದಲ್ಲಿ (Lucknow)  ದಾಖಲೆಯ ಎರಡನೇ ಬಾರಿಗೆ ಯೋಗಿ ಆದಿತ್ಯನಾಥ್‌ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

7 ಹಂತಗಳಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ (BJP) 255 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಎನ್‌ಡಿಎ ಮೈತ್ರಿಕೂಟ (NDA alliance) 273 ಸ್ಥಾನಗಳನ್ನು ಗೆದ್ದುಕೊಂಡಿದೆ. 

ಉತ್ತರಪ್ರದೇಶದಲ್ಲಿ ಸರ್ಕಾರವೊಂದು ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು 37 ವರ್ಷಗಳ ಬಳಿಕ, ಮುಖ್ಯಮಂತ್ರಿಯೊಬ್ಬರು 5 ವರ್ಷ ಪೂರ್ಣಗೊಳಿಸಿ ಮರಳಿ ಅಧಿಕಾರಕ್ಕೆ ಬಂದಿದ್ದು ಇದೇ ಮೊದಲು, 15 ವರ್ಷಗಳ ಬಳಿಕ ವಿಧಾನಸಭೆಯಿಂದ (Legislative Assembly) ಆರಿಸಿ ಬಂದ ಜನಪ್ರತಿನಿಧಿ ಸಿಎಂ ಆಗುತ್ತಿದ್ದಾರೆ ಎಂಬ ಹಲವು ದಾಖಲೆಗಳು ಇದೀಗ ಬಿಜೆಪಿ ಮತ್ತು ಯೋಗಿ ಅವರ ಹೆಸರಿಗೆ ಬಂದಿದೆ.

click me!