ಯುಕೆಜಿಯಲ್ಲಿ ಓದುತ್ತಿದ್ದ 7 ವರ್ಷದ ಬಾಲಕಿಯೊಬ್ಬಳು ಕ್ಲಾಸ್‌ರೂಮ್‌ನಲ್ಲಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಮ್ರೋಹ್‌ನಲ್ಲಿ ನಡೆದಿದೆ. ಪುಟ್ಟ ಬಾಲಕಿಯ ಹಠಾತ್ ಸಾವು ಪೋಷಕರನ್ನು ತಲ್ಲಣಿಸುವಂತೆ ಮಾಡಿದೆ.
ಅಮ್ರೋಹ್: ಯುಕೆಜಿಯಲ್ಲಿ ಓದುತ್ತಿದ್ದ 7 ವರ್ಷದ ಬಾಲಕಿಯೊಬ್ಬಳು ಕ್ಲಾಸ್‌ರೂಮ್‌ನಲ್ಲಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಮ್ರೋಹ್‌ನಲ್ಲಿ ನಡೆದಿದೆ. ಪುಟ್ಟ ಬಾಲಕಿಯ ಹಠಾತ್ ಸಾವು ಪೋಷಕರನ್ನು ತಲ್ಲಣಿಸುವಂತೆ ಮಾಡಿದೆ. ಖಾಸಗಿ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿದ್ದ ಈ ಬಾಲಕಿಗೆ ಕ್ಲಾಸ್‌ರೂಮ್‌ನಲ್ಲಿದ್ದಾಗಲೇ ಉಸಿರಾಡಲು ಕಷ್ಟವಾಗಿದ್ದು, ಚಡಪಡಿಸಲು ಆರಂಭಿಸಿದ್ದು, ಎದೆನೋವಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಬಾಲಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಈ ಬಾಲಕಿ ಅಮ್ರೋಹ್‌ನ ರೇಹ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಶಕರ್‌ಗರ್ಹಿ ಗ್ರಾಮ್‌ದಲ್ಲಿ ನೆಲೆಸಿದ್ದಳು. ಆಕೆ ಹಕಂಪುರದಲ್ಲಿದ್ದ ಖಾಸಗಿ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದಳು. ಮಧ್ಯಾಹ್ನದ ನಂತರ ಕ್ಲಾಸ್‌ರೂಮ್‌ನಲ್ಲಿ ಕುಳಿತಿದ್ದಾಗಲೇ ಆಕೆಗೆ ಎದೆನೋವು ಕಾಣಿಸಿಕೊಂಡಿದ್ದು, ಉಸಿರಾಡಲು ಕಷ್ಟವಾಗುತ್ತಿದೆ ಎಂದು ಬಾಲಕಿ ಹೇಳಿಕೊಂಡಿದ್ದಾಳೆ.
ದೇಶಭಕ್ತಿ ಗೀತೆ ಹಾಡುತ್ತಲೇ ಹೃದಯಾಘಾತದಿಂದ ಪ್ರಾಣ ಬಿಟ್ಟ ಮಹಿಳೆ, ಸೆರೆಯಾಯ್ತು ಕೊನೆ ಕ್ಷಣ!
ಈ ವೇಳೆ ಕ್ಲಾಸ್‌ನಲ್ಲಿದ್ದ ಶಿಕ್ಷಕರು ಕೂಡಲೇ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಾಲಕಿಯ ಪೋಷಕರು ಬಂದಿದ್ದು, ಬಾಲಕಿ ಪೋಷಕರೆದುರೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದೊಯ್ದ ನಂತರ ಬಾಲಕಿಯ ಆರೋಗ್ಯ ಕ್ಷೀಣಿಸುತ್ತಾ ಬಂದಿದ್ದು, ಆಕೆಯನ್ನು ಅಲ್ಲಿಂದ ಗಜ್ರೌಲ್‌ನಲ್ಲಿರುವ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿನ ವೈದ್ಯರು ಬಾಲಕಿಯ ತಪಾಸಣೆ ಮಾಡಿ ಬಾಲಕಿ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾಳೆ ಎಂದು ಘೋಷಣೆ ಮಾಡಿದ್ದಾರೆ.
ಶಾಲೆಗೆ ಹೋಗುತ್ತಿದ್ದ ಪುಟ್ಟ ಮಗಳ ಹಠಾತ್ ಸಾವು ಪೋಷಕರಿಗೆ ನುಂಗಲಾರದ ತುತ್ತಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇದೊಂದೆ ಅಲ್ಲ ದೇಶದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾವವನ್ನಪ್ಪುವ ಎಳೆ ಪ್ರಾಯದ ಮಕ್ಕಳು ಯುವಕರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಈ ಘಟನೆ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಮಾಹಿತಿ ಪಡೆದುಕೊಂಡಿದೆ. ಕೆಲ ದಿನಗಳ ಹಿಂದೆ ಇದೆ ಅಮ್ರೋಹ್‌ನಲ್ಲಿ 16 ವರ್ಷದ ಬಾಲಕ ಮೊಬೈಲ್‌ನಲ್ಲಿ ವೀಡಿಯೋ ನೊಡುತ್ತಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾಗಿದ್ದ.
ಮಡಿಕೇರಿ ವ್ಯಾಪಾರಿ ಕುಳಿತಲ್ಲೇ ಪ್ರಾಣಬಿಟ್ಟ; ಒಂದು ಕ್ಷಣದಲ್ಲಿ ಜೀವ ಹೊತ್ತೊಯ್ದ ಜವರಾಯ