ತನ್ನಿಬ್ಬರು ಮಲ ಮಕ್ಕಳ ಮೇಲೆ ಕ್ರೌರ್ಯವೆಸಗಿದ ಕಾರಣಕ್ಕೆ 27 ವರ್ಷದ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆ ತನ್ನ ಅಪ್ರಾಪ್ತ ಮಲ ಮಕ್ಕಳ ಮೇಲೆ ದೌರ್ಜನ್ಯವೆಸಗಿದ್ದಳು.
ಮುಂಬೈ: ತನ್ನಿಬ್ಬರು ಮಲ ಮಕ್ಕಳ ಮೇಲೆ ಕ್ರೌರ್ಯವೆಸಗಿದ ಕಾರಣಕ್ಕೆ 27 ವರ್ಷದ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆ ತನ್ನ ಅಪ್ರಾಪ್ತ ಮಲ ಮಕ್ಕಳ ಮೇಲೆ ದೌರ್ಜನ್ಯವೆಸಗಿದ್ದಳು. ಮಕ್ಕಳ ಖಾಸಗಿ ಭಾಗಕ್ಕೆ ಚಾಕು ಬಿಸಿ ಮಾಡಿ ಇಟ್ಟು ಸುಟ್ಟು ಕ್ರೌರ್ಯ ಮೆರೆದಿದ್ದಳು. ಈ ಬಗ್ಗೆ ಮಹಿಳೆಯ ಗಂಡ ಹಾಗೂ ಮಕ್ಕಳ ಅಪ್ಪ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ವಸೈನಲ್ಲಿ ಈ ಘಟನೆ ನಡೆದಿದೆ.
ವಿಚ್ಚೇದನದ ಬಳಿ ಮರು ಮದುವೆಯಾಗಿದ್ದ ತಂದೆ
ಈ ಮಕ್ಕಳ ತಂದೆ ತಾಯಿಗೆ ವಿಚ್ಚೇದನವಾಗಿತ್ತು. ಹೀಗಾಗಿ 7 ಹಾಗೂ 8 ವರ್ಷದ ಗಂಡು ಮಕ್ಕಳು ತಂದೆಯ ಜೊತೆ ವಾಸ ಮಾಡುತ್ತಿದ್ದರು. ಕಳೆದ ವರ್ಷವಷ್ಟೇ ತಂದೆ ಮರು ಮದುವೆಯಾಗಿದ್ದರು. ಇದೊಂದು ಪೋಷಕರೇ ನಿಶ್ಚಿಯಿಸಿದ ಮದುವೆಯಾಗಿದ್ದು, ಮಹಿಳೆಗೆ ತಾನು ಮದುವೆಯಾಗುವ ವ್ಯಕ್ತಿಗೆ ಮೊದಲ ಮದುವೆಯಿಂದ ಇಬ್ಬರು ಗಂಡು ಮಕ್ಕಳಿದ್ದಾರೆ ಎಂಬುದರ ಅರಿವಿತ್ತು. ತಂದೆ ಕೊರಿಯರ್ ಬ್ಯುಸಿನೆಸ್ ಕೆಲಸವನ್ನು ಮಾಡುತ್ತಿದ್ದು, ಹೆಚ್ಚಾಗಿ ಟ್ರಾವೆಲಿಂಗ್‌ನಲ್ಲೇ ಇರುತ್ತಿದ್ದಿದ್ದರಿಂದ, ತನ್ನ 2ನೇ ಪತ್ನಿ ತನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಈ ತಂದೆ ಭಾವಿಸಿದ್ದರು.
ಆದರೆ ಇತ್ತೀಚೆಗೆ ವಾರಾಂತ್ಯದಲ್ಲಿ ಮಕ್ಕಳ ಜೊತೆ ತಂದೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು, ಈ ವೇಳೆ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಆಗಿರುವುದನ್ನು ತಂದೆ ಗಮನಿಸಿದ್ದಾರೆ. ಜೊತೆಗೆ ಮಕ್ಕಳ ದೇಹದ ಅಲ್ಲಲ್ಲಿ ಗಾಯದ ಗುರುತುಗಳಿರುವುದನ್ನು ಕೂಡ ಅವರು ಗಮನಿಸಿದ್ದಾರೆ. ಅಲ್ಲದೇ ಮಕ್ಕಳಲ್ಲಿ ಈ ಗಾಯಗಳ ಬಗ್ಗೆ ವಿಚಾರಿಸಿದಾಗ ಮಕ್ಕಳು ಮಲತಾಯಿಯ ಕ್ರೌರ್ಯವನ್ನು ವಿವರಿಸಿದ್ದಾರೆ.
ಮನೆಮುಂದೆ ಆಟವಾಡ್ತಿದ್ದ ಮಗು ಏಕಾಏಕಿ ಸಾವು; ಕೊಂದಳ ಮಲತಾಯಿ?
ಮಕ್ಕಳು ಹೇಳುವ ಪ್ರಕಾರ, ಈ ಮಹಿಳೆಯನ್ನು ತಂದೆ ಮದುವೆಯಾದಾಗಿನಿಂದಲೂ ಈಕೆ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಳು. ಆದರೆ ಇದು ಕಳೆದ ಜೂನ್‌ನಲ್ಲಿ ಸಹಿಸಿಕೊಳ್ಳಲಾಗದ ಹಂತ ತಲುಪಿತ್ತು. ಮಹಿಳೆ ಚಾಕುವನ್ನು ಗ್ಯಾಸ್‌ನಲ್ಲಿಟ್ಟು ಬಿಸಿ ಮಾಡಿ ಮಕ್ಕಳ ಮರ್ಮಾಂಗದ ಮೇಲೆ ಇಟ್ಟು ಅವರನ್ನು ಕ್ರೂರವಾಗಿ ಶಿಕ್ಷಿಸುತ್ತಿದ್ದಳು. ಮನೆಯ ಕೆಲಸಗಳನ್ನು ನಿಯಮಿತ ಸಮಯದಲ್ಲಿ ಮಕ್ಕಳು ಮಾಡದೇ ಇದ್ದಾಗ ಆಕೆ ಮಕ್ಕಳಿಗೆ ಈ ರೀತಿ ಚಾಕು ಕಾಯಿಸಿ ಇಡುತ್ತಿದ್ದಳು. ಬರೀ ಇಷ್ಟೇ ಅಲ್ಲ ಈ ತಾಯಿ ಇಡೀ ಮನೆಯನ್ನು ನಮ್ಮ ಕೈಯಲ್ಲೇ ಸ್ವಚ್ಛ ಮಾಡಿಸುತ್ತಿದ್ದಳು, ಇದರ ಜೊತೆಗೆ ಮನೆಯ ಪಾತ್ರ ಹಾಗೂ ಬಟ್ಟೆಯನ್ನು ನಮ್ಮ ಕೈಯಲ್ಲೇ ತೊಳೆಸುತ್ತಿದ್ದಳು. ಶಾಲೆಗೆ ಹೋಗಿ ಬಂದ ನಂತರ ಮನೆಯ ಎಲ್ಲಾ ಕೆಲಸಗಳನ್ನು ಆಕೆ ನಮ್ಮ ಕೈಯಲ್ಲಿ ಮಾಡಿಸುತ್ತಿದ್ದಳು. ಈ ವಿಚಾರವನ್ನು ಯಾರ ಬಳಿಯಾದರು ಹೇಳಿದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಆಕೆ ಮಕ್ಕಳನ್ನು ಬೆದರಿಸಿದ್ದಳು ಎಂದು ಮಕ್ಕಳು ಭಯದಿಂದಲೇ ಹೇಳಿದ್ದಾರೆ.
ಇದಾದ ನಂತರ ಪೊಲೀಸರು ಮಹಿಳೆಯನ್ನು ಬಾಲ ನ್ಯಾಯ ಕಾಯ್ದೆಯಡಿ ಬಂಧಿಸಿದ್ದಾರೆ.
ದಿಯಾ ಮಿರ್ಜಾ ಹೆಸರನ್ನು 'ಇನ್ನೂ ದುಷ್ಟಳಾಗದ ಮಲತಾಯಿ' ಎಂದು ಸೇವ್ ಮಾಡಿದ್ದಾಳೆ ಪತಿಯ ಮಗಳು!