UP Election: ಯು.ಪಿ. 5ನೇ ಹಂತ: ಶೇ.54ರಷ್ಟು ಮತದಾನ!

By Kannadaprabha NewsFirst Published Feb 28, 2022, 12:35 AM IST
Highlights

ಭಾರೀ ಕುತೂಹಲಕ್ಕೆ ಕಾರಣವಾಗಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ 5ನೇ ಹಂತದ ಮತದಾನ ಭಾನುವಾರ ಸಣ್ಣ ಪುಟ್ಟ ಗಲಾಟೆ ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ನಡೆದಿದೆ.

ಲಖನೌ (ಫೆ.28): ಭಾರೀ ಕುತೂಹಲಕ್ಕೆ ಕಾರಣವಾಗಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ (Uttar Pradesh Election) 5ನೇ ಹಂತದ ಮತದಾನ ಭಾನುವಾರ ಸಣ್ಣ ಪುಟ್ಟ ಗಲಾಟೆ ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ನಡೆದಿದೆ.ರಾಜ್ಯದ 12 ಜಿಲ್ಲೆಗಳಲ್ಲಿ ವ್ಯಾಪಿಸಿರುವ 61 ವಿಧಾನಸಭೆ ಕ್ಷೇತ್ರಗಳ ಚುನಾವಣೆಯಲ್ಲಿ ಶೇ.54ರಷ್ಟು ಮತದಾನವಾಗಿದೆ. ತನ್ಮೂಲಕ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ (Keshav Prasad Maurya) ಮತ್ತು ಪ್ರಭಾವಿ ಸಚಿವರು ಸೇರಿದಂತೆ ಒಟ್ಟಾರೆ 692 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. 

ಈ ಹಂತದಲ್ಲಿ ಒಟ್ಟಾರೆ 2.24 ಕೋಟಿ ಮಂದಿ ಮತದಾನಕ್ಕೆ ಅರ್ಹವಾಗಿದ್ದರು. 5ನೇ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯದ ಬಳಿಕ ಒಟ್ಟಾರೆ 403 ಕ್ಷೇತ್ರಗಳ ಪೈಕಿ ಈವರೆಗೆ 292 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ತಿಯಾದಂತಾಗಿದೆ. ಉಳಿದ 111 ಕ್ಷೇತ್ರಗಳಿಗೆ ಮಾ.3 ಮತ್ತು ಮಾ.7ರಂದು ಮತದಾನ ನಡೆಯಲಿದ್ದು, ಮಾ.10ರಂದು ಉತ್ತರ ಪ್ರದೇಶ, ಪಂಜಾಬ್‌ ಮತ್ತು ಗೋವಾ ಸೇರಿ ಪಂಚರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.

Latest Videos

ಎಸ್‌ಪಿ ಅಭ್ಯರ್ಥಿ ಮೇಲೆ ಹಲ್ಲೆ: ಪ್ರತಾಪ್‌ಗಢದ ಕುಂದಾ ವಿಧಾನಸಭೆ ಕ್ಷೇತ್ರದ ಸಮಾಜವಾದಿ ಅಭ್ಯರ್ಥಿ ಗುಲ್ಶಾನ್‌ ಯಾದವ್‌ (Gulshan Yadav) ಅವರ ಬೆಂಗಾವಲು ಪಡೆ ಮೇಲೆ ಕೆಲವರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಗುಲ್ಶಾನ್‌ ಅವರು ಸಣ್ಣ-ಪುಟ್ಟಗಾಯಕ್ಕೆ ಒಳಗಾಗಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ದೂರಿದ್ದಾರೆ. ಈ ಸಂಬಂಧ ಪಕ್ಷದ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಾಧ್ಯಕ್ಷರು ಚುನಾವಣಾ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ.

ಯುಪಿ ರ‍್ಯಾಲಿ ಮುಗಿಸಿದ ಬೆನ್ನಲ್ಲೇ ಉಕ್ರೇನ್ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!

ಯುಪಿ ರ‍್ಯಾಲಿಯಲ್ಲಿ ಮೋದಿ ಗುಡುಗು: ಉತ್ತರ ಪ್ರದೇಶ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ವಿರೋಧ ಪಕ್ಷ ಹಾಗೂ ಕುಟುಂಬ ರಾಜಕೀಯದ ವಿರುದ್ಧ ಗುಡುಗಿದ್ದಾರೆ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಕುಟುಂಬ ರಾಜಕಾರಣಕ್ಕೂ ಬಿಜೆಪಿಯ ರಾಷ್ಟ್ರಭಕ್ತಿ ರಾಜಕಾರಣಕ್ಕೂ ವ್ಯತ್ಯಾಸವಿದೆ ಎಂದು ಮೋದಿ ಹೇಳಿದ್ದಾರೆ. ದಿಯೋರಿಯಾದಲ್ಲಿ ಆಯೋದಿಸಿದ ಚುನಾವಣಾ ರ್ಯಾಲಿಗೆ ಆಗಮಿಸಿದ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಪ್ರಧಾನಿ ಮೋದಿ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಗುಡುಗಿದ ಮೋದಿ, ಬನಾರಸ್ ಜನ  ಬಿಜೆಪಿಯನ್ನು ಯಾವತ್ತೂ ಕೈಬಿಟ್ಟಿಲ್ಲ ಎಂದು ಮೋದಿ ಹೇಳಿದ್ದಾರೆ. 

ಹಿಂದಿನ ಸರ್ಕಾರಗಳು ಭಾರತದ ರಕ್ಷಣಾ ಅಗತ್ಯತೆಗೆ ವಿದೇಶಗಳ ಮೇಲೆ ಅವಲಂಬಿತವಾಗಿತ್ತು. ಆದರೆ ಬಿಜೆಪಿ ಸರ್ಕಾರ ಆತ್ಮನಿರ್ಭರ್ ಆದ್ಯತೆ ನೀಡಿದೆ. ಪರಿಣಾಮ ರಕ್ಷಣಾ ವ್ಯವಸ್ಥೆಯಲ್ಲೂ ಭಾರತ ಸ್ವಾಲಂಬಿಯಾಗಿದೆ. ಇಷ್ಟೇ ಅಲ್ಲ ವಿದೇಶಗಳಿಗೂ ರಫ್ತು ಮಾಡುವಷ್ಟು ಭಾರತ ಬೆಳೆದಿದೆ ಎಂದು ಮೋದಿ ಹೇಳಿದ್ದಾರೆ.  ದೇಶದ ನಾಗರೀಕನಿಗೆ ಸರ್ಕಾರದ ಸೌಲಭ್ಯ ಶೇಕಡಾ 100 ರಷ್ಟು ತಲುಪಬೇಕು. ಇದರಲ್ಲಿ ಕಿಂಚಿತ್ತು ಕಡಿಮೆಯಾಗಬಾರದು. ಹೀಗಾಗಿ ಬಿಜೆಪಿ ಸರ್ಕಾರ ನೇರವಾಗಿ ಜನರ ಖಾತೆಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ವರ್ಗಾಯಿಸುತ್ತಿದೆ. 

UP Elections: 5ನೇ ಹಂತದಲ್ಲಿ 61 ಸ್ಥಾನಗಳಿಗೆ ಮತದಾನ, ದಿಗ್ಗಜ ನಾಯಕರು ಕಣದಲ್ಲಿ!

ಕೆಲವರು ಕಾಶಿಯಲ್ಲಿ ನನ್ನ ಸಾವಿಗೆ ಪ್ರಾರ್ಥನೆ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಭಾರತದ ರಾಜಕಾರಣ ಇಳಿದಿದೆ. ಅವರ ಪ್ರಾರ್ಥನೆಯ ತಿರುಳು ಹೇಳಬೇಕೆಂದರೆ ನಾನು ಸಾಯುವವರೆಗೂ ಕಾಶಿಯನ್ನು ಬಿಡುವುದಿಲ್ಲ, ಅಥವಾ ಕಾಶಿ ಜನ ನನ್ನನ್ನು ಬಿಡುವುದಿಲ್ಲ. ಇನ್ನು ಕಾಶಿ ವಿಶ್ವನಾಥನ ಸೇವೆ ಮಾಡುತ್ತಾ ಸಾವನ್ನಪ್ಪಿದರೆ ಅದಕ್ಕಿಂತ ದೊಡ್ಡ ಭಾಗ್ಯ ಇನ್ನೇನು ಬೇಕಿದೆ ಎಂದು ಮೋದಿ ಹೇಳಿದ್ದಾರೆ. ಕಳೆದ ಸಮಾಜವಾದಿ ಪಕ್ಷದ ಸರ್ಕಾರ ಕೇಂದ್ರದ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿತ್ತು. ಆದರೆ ಡಬಲ್ ಎಂಜಿನ್ ಸರ್ಕಾರದಲ್ಲಿ ಉತ್ತರ ಪ್ರದೇಶದ ಅಭಿವೃದ್ಧಿಯನ್ನು ಪ್ರತ್ಯಕ್ಷವಾಗಿ ನೋಡಬಹುದು ಎಂದು ಮೋದಿ ಹೇಳಿದ್ದಾರೆ.

click me!