Mann Ki baat ಮನ್ ಕಿ ಬಾತ್‌ನಲ್ಲಿ ತಾಂಜಾನಿಯಾದ ಕಿಲಿ, ನೀಮಾ ಪೌಲ್ ಸೃಜನಶೀಲತೆಗೆ ಮೋದಿ ಶಹಬ್ಬಾಸ್!

By Suvarna News  |  First Published Feb 27, 2022, 8:49 PM IST
  • ಭಾರತದ ಸಂಗೀತದ ಮೂಲಕ  ಕಿಲಿ ಪೌಲ್, ನೀಮಾ ಪೌಲ್ ಜನಪ್ರಿಯ
  • ಭಾರತದ ಹಾಡಿಗೆ ಲಿಪ್‌ಸಿಂಕ್, ತಾಂಜಾನಿಯಾ ಪ್ರತಿಭಗೆ ಮೋದಿ ಸಲಾಂ
  • ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ತಾಂಜಾನಿಯಾ ಪ್ರತಿಭೆ ಉಲ್ಲೇಖ

ನವದೆಹಲಿ(ಫೆ.27): ತಾಂಜಾನಿಯದ ಕಿಲಿ ಪೌಲ್ ಹಾಗೂ ನೀಮಾ ಪೌಲ್(Kili and Neema Paul) ಬಹುತೇಕ ಭಾರತೀಯರಿಗೆ ಚಿರಪರಿಚಿತ. ಕಾರಣ ಭಾರತದ ಜನಪ್ರಿಯ ಸಿನಿಮಾ ಹಾಡಿಗೆ ಲಿಪ್ ಸಿಂಕ್( Lip Sync) ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಈ ತಾಂಜಾನಿಯಾದ ಸಹೋದರ ಹಾಗೂ ಸಹೋದರಿಯನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ತಮ್ಮ ಮನ್ ಕಿ ಬಾತ್(Mann Ki Baat) ಕಾರ್ಯಕ್ರಮದಲ್ಲಿ ಹೊಗಳಿದ್ದಾರೆ.

ಭಾರತೀಯ ಸಂಗೀತ ಸಾಮ್ರಾಜ್ಯದ ಮಹತ್ವ ತಿಳಿಸುವ ವೇಳೆ ಪ್ರಧಾನಿ ಮೋದಿ ತಾಂಜಾನಿಯಾ ಪ್ರತಿಭೆಗಳನ್ನು ಉಲ್ಲೇಖಿಸಿದ್ದಾರೆ. ನೀವೆಲ್ಲಾ ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಂ, ಟ್ವಿಟರ್ ಮೂಲಕ ತಾಂಜಾನಿಯಾದ ಸಹೋದರ ಸಹೋದರಿಯರಾದ ಕಿಲಿ ಪೌಲ್ ಹಾಗೂ ನೀಮಾ ಪೌಲ್ ಕುರಿತು ಕೇಳಿರುತ್ತಿರಿ. ಅವರ ವಿಡಿಯೋಗಳನ್ನು ನೋಡಿರುತ್ತೀರಿ ಅನ್ನೋ ಭರವಸೆ ಇದೆ. ಇಬ್ಬರು ಭಾರತೀಯ ಸಂಗೀತ ಹಾಗೂ ಸಂಸ್ಕೃತಿ ಕುರಿತು ಅತೀವ ಒಲವು ತೋರಿದ್ದಾರೆ. ಇದರಿಂದ ಈ ಇಬ್ಬರು ಭಾರತದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಮೋದಿ ತಮ್ಮ ಮನ್ ಕಿ ಬಾತ್ ಹೇಳಿದ್ದಾರೆ.

Tap to resize

Latest Videos

ಬಾಲಿವುಡ್‌ನ ಛನ್ನಾ ಮೆರೆಯಾ ಹಾಡಿಗೆ ಕಿಲಿ ಪೌಲ್‌ ಅದ್ಭುತ ನಟನೆ

ಕಿಲಿ ಪೌಲ್ ಹಾಗೀ ನೀಮಾ ಪೌಲ್ ಅವರ ಲಿಪ್ ಸಿಂಕ್ ವಿಡಿಯೋಗಳನ್ನು ನೋಡಿದರೆ ಅವರ ಶ್ರಮ,ಅಭ್ಯಾಸ ಅರಿವಾಗುತ್ತದೆ. ಗಣರಾಜ್ಯೋತ್ಸವ ದಿನಾಚರಣೆಯಂದು ಭಾರತದ ರಾಷ್ಟ್ರಗತೀ ಜನ ಗಣ ಮನ ಹಾಡುವ ಮೂಲಕ ಗೌರವ ಸಲ್ಲಿಸಿದ್ದರು. ಇನ್ನು ಲತಾ ಮಂಗೇಶ್ಕರ್ ಅವರ ಜನಪ್ರಿಯ ಹಾಡನ್ನು ಲಿಪ್ ಸಿಂಕ್ ಮೂಲಕ ಪ್ರಸ್ತುಕ ಪಡಿಸಿ ಲತಾ ದೀದಿಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದರು. ಇವರ ಸೃಜನಶೀಲತೆ, ಪ್ರತಿಭಗೆ ಅವರನ್ನು ಪ್ರಶಂಸಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

ತಾಂಜಾನಿಯಾದ ಇಬ್ಬರಿಗೆ ಭಾರತದ ಭಾಷೆ ಹಾಡುಗಳನ್ನು, ಸಂಭಾಷಣೆ ತುಣುಕುಗಳನ್ನು ಲಿಪ್ ಸಿಂಕ್ ಮಾಡುವುದಾದರೆ ಭಾರತದ ನಾಗರೀಕರು ಈ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಬೇಕು. ಕಾರಣ ನಮ್ಮಲ್ಲಿನ  ವಿವಿಧ ಭಾಷೆಗಳ ರಾಜ್ಯಗಳ ನಡುವೆ ಉತ್ತಮ ಬಾಂಧವ್ಯ ಮೂಡಲಿದೆ. ಗುಜರಾತ್ ಮಗು, ತಮಿಳಿನಲ್ಲಿ ಲಿಪ್ ಸಿಂಕ್, ಕೇರಳದ ಮಗು ಅಸ್ಸಾಂ ಭಾಷೆ ಹಾಡಿನ ಲಿಪ್ ಸಿಂಕ್ , ಕನ್ನಡ ಮಗು ಜಮ್ಮು ಕಾಶ್ಮೀರ ಭಾಷೆಯ ಲಿಪ್ ಸಿಂಕ್ ಮಾಡುವ ಮೂಲಕ ನಾವು ಉತ್ತಮ ವಾತಾವರಣ ನಿರ್ಮಾಣ ಮಾಡಲು ಸಾಧ್ಯ. ಒಂದು ಭಾರತ ಶ್ರೇಷ್ಠ ಭಾರತ ಪರಿಕಲ್ಪನೆಗೆ ಈ ರೀತಿಯ ಚಟುವಟಿಕೆ ಮತ್ತಷ್ಟು ವೇಗ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.

Mann Ki Baat: ಕಳ್ಳತನವಾದ ವಿಗ್ರಹಗಳನ್ನು ಮರಳಿ ತರುವತ್ತ ನಮ್ಮ ಚಿತ್ತ: ಮೋದಿ

ಇದರಿಂದ 75ನೇ ವರ್ಷದ ಅಜಾದಿ ಕಾ ಅಮೃತ ಮಹೋತ್ಸವ ಸಂಭ್ರಮಾಚರಣೆ ಇಮ್ಮಡಿಯಾಗಲಿದೆ. ನಾನು ಭಾರತದ ಯುವ ಸಮೂಹದಲ್ಲಿ ವಿಶೇಷ ಮನವಿ ಮಾಡುತ್ತೇನೆ. ಭಾರತದಲ್ಲಿರುವ ವಿವಿಧ ಭಾಷೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸೋಣ, ಆಯಾ ಭಾಷೆಯಲ್ಲಿನ ಜನಪ್ರಿಯ ಹಾಡುಗಳನ್ನು ಲಿಪ್ ಸಿಂಕ್ ಮಾಡಿ ಜಗತ್ತಿನ ಉದ್ದಗಲಕ್ಕೂ ಪಸರಿಸೋಣ ಎಂದು ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.ಇದರಿಂದ ಮುಂದಿನ ಜನಾಂಗಕ್ಕೆ ಭಾರತದ ವಿವಿಧತೆಯಲ್ಲಿನ ಏಕತೆಯನ್ನು ಸಾರಲು ನೆರವಾಗಲಿದೆ ಎಂದಿದ್ದಾರೆ. 

ಮೋದಿ ಮನ್ ಕಿ ಬಾತ್ ಮೂಲಕ ತಾಂಜನಿಯಾ ಪ್ರತಿಭೆಗಳನ್ನು ಉಲ್ಲೇಖಿಸಿ ಭಾರತದ ಭಾಷಾ ಸಂಸ್ಕೃತಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಮೋದಿ ಕರೆ ನೀಡಿದ್ದಾರೆ. ಇತ್ತೀಚೆಗೆ ತಾಂಜನಿಯಾ ರಾಯಭಾರ ಕಚೇರಿ ಕಿಲಿ ಪೌಲ್ ಹಾಗೂ ನೀಮಾ ಪೌಲ್‌ ಸನ್ಮಾನಿಸಿತ್ತು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾರತದ ಬಗ್ಗೆ ಇರುವ ಪ್ರೀತಿ ವ್ಯಕ್ತಪಡಿಸಿದ್ದರು. ಇದೇ ವೇಳೆ ಜೈ ಹಿಂದ್ ಹೇಳುವ ಮೂಲಕ ಭಾರತೀಯರಿಗೆ ಮತ್ತಷ್ಟು ಹತ್ತಿರವಾಗಿದ್ದರು.

click me!