ಅಸಂಸದೀಯ ಪದಗಳು ಲೋಕಸಭೆಯಲ್ಲಿ ಬಳಸುವಂತಿಲ್ಲ

Published : Jul 15, 2022, 08:40 AM IST
 ಅಸಂಸದೀಯ ಪದಗಳು ಲೋಕಸಭೆಯಲ್ಲಿ ಬಳಸುವಂತಿಲ್ಲ

ಸಾರಾಂಶ

ಲೋಕಸಭಾ ಸಚಿವಾಲಯದಿಂದ ಹೊಸ ಕೈಪಿಡಿ ಬಿಡುಗಡೆ ಮಾಡಲಾಗಿದ್ದು, ನಾಚಿಕೆಗೇಡು, ದುರ್ಬಳಕೆ, ಭ್ರಷ್ಟ ನಾಟಕ ಸೇರಿದಂತೆ ಹಲವು ಪದಗಳನ್ನು  ಬಳಸುವಂತಿಲ್ಲ ಎಂದು ಆದೇಶ ಹೊರಡಿಲಾಗಿದೆ.

 ನವದೆಹಲಿ (ಜು.15): ಅಸಂಸದೀಯ ಪದಗಳು ಎಂದು ಪರಿಗಣಿಸಿರುವ ಜುಮ್ಲಾಜೀವಿ, ಬಾಲ ಬುದ್ಧಿ, ಕೋವಿಡ್‌ ಹರಡುವವ, ಸ್ನೂಪ್‌ಗೇಟ್‌, ನಾಚಿಕೆಗೇಡು, ದುರ್ಬಳಕೆ, ಮೋಸಹೋದೆವು, ಭ್ರಷ್ಟ, ನಾಟಕ, ಆಷಾಢಭೂತಿತನ, ಅಸಮರ್ಥ, ಅರಾಜಕ, ಶಕುನಿ, ಸರ್ವಾಧಿಕಾರಿತನ, ತಾನಾಶಾಹಿ, ವಿನಾಶಪುರುಷ, ಖಲಿಸ್ತಾನಿ, ನಿಕಮ್ಮಾ, ನೌಟಂಕಿ, ರಕ್ತಪಾತ, ಬ್ಲಡಿ, ಚಮಚಾ, ಚಮಚಾಗಿರಿ, ಚೇಲಾ, ಬಾಲಿಶತನ, ಹೇಡಿ, ಕ್ರಿಮಿನಲ್‌, ಮೊಸಳೆ ಕಣ್ಣೀರು, ಕಳಂಕ, ಕತ್ತೆ, ಕಣ್ಣೊರೆಸುವುದು, ದಾಂಧಲೆ, ಸುಳ್ಳು ಮುಂತಾದ ಪದಗಳನ್ನು ಜು.18ರಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸಂಸದರು ಬಳಸುವಂತಿಲ್ಲ.

ಜು.18ರಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಜುಮ್ಲಾಜೀವಿ, ಬಾಲಬುದ್ಧಿ, ಕೋವಿಡ್‌ ಹರಡುವವ, ನಾಚಿಕೆಗೇಡು, ದುರ್ಬಳಕೆ, ಭ್ರಷ್ಟ, ಡ್ರಾಮಾ, ಆಷಾಢಭೂತಿತನ, ಅಸಮರ್ಥ, ಚಮಚಾ, ಚೇಲಾ ಮುಂತಾದ ಪದಗಳನ್ನು ಸಂಸದರು ಬಳಸಿದರೆ ಅದನ್ನು ಅಸಂಸದೀಯವೆಂದು ಪರಿಗಣಿಸಲಾಗುವುದು ಎಂದು ಲೋಕಸಭಾ ಸಚಿವಾಲಯ ಹೊಸ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದೆ.

ಅರಾಜಕತನ, ಶಕುನಿ, ಸರ್ವಾಧಿಕಾರಿತನ, ತಾನಾಶಾಹಿ, ವಿನಾಶ ಪುರುಷ, ಖಲಿಸ್ತಾನಿ, ಖೂನ್‌ ಸೆ ಖೇತಿ, ನೌಟಂಕಿ, ನಿಕಮ್ಮಾ ಮುಂತಾದ ಪದಗಳನ್ನೂ ಈ ಪಟ್ಟಿಗೆ ಸೇರಿಸಲಾಗಿದೆ. ಲೋಕಸಭೆ ಸಚಿವಾಲಯದ ಈ ಕೈಪಿಡಿಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್‌, ಟಿಎಂಸಿ, ಶಿವಸೇನೆ ಮುಂತಾದವು, ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಲು ಆಗಾಗ ಬಳಸುವ ಪದಗಳನ್ನೇ ಅಸಂಸದೀಯವೆಂದು ಆದೇಶ ಹೊರಡಿಸಲಾಗಿದೆ ಎಂದು ಕಿಡಿಕಾರಿವೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ‘ಇದು ನವ ಭಾರತಕ್ಕೆ ಹೊಸ ಡಿಕ್ಷನರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಕೈಪಿಡಿಯನ್ನು ಸಮರ್ಥಿಸಿಕೊಂಡಿರುವ ಸರ್ಕಾರದ ಮೂಲಗಳು, ‘ಇದು ಹೊಸ ಆದೇಶವೇನೂ ಅಲ್ಲ. ಹಿಂದೆ ಯುಪಿಎ ಸರ್ಕಾರವಿದ್ದಾಗಲೂ ಇವುಗಳಲ್ಲಿ ಹೆಚ್ಚಿನ ಪದಗಳನ್ನು ಅಸಂಸದೀಯವೆಂದೇ ಪರಿಗಣಿಸಲಾಗುತ್ತಿತ್ತು. ಈ ಕೈಪಿಡಿಯು ಅಂತಹ ಪದಗಳ ಒಂದು ಪಟ್ಟಿಯಷ್ಟೆ. ಇದು ಆದೇಶವಾಗಲೀ, ಸೂಚನೆಯಾಗಲೀ ಅಲ್ಲ’ ಎಂದು ಸ್ಪಷ್ಟನೆ ನೀಡಿವೆ.

ಅಂತಿಮ ಅಧಿಕಾರ ಶಾಸನಸಭೆ ಮುಖ್ಯಸ್ಥರಿಗೆ: ಬೇರೆ ಬೇರೆ ಸಮಯದಲ್ಲಿ ದೇಶದ ಶಾಸನ ಸಭೆಗಳ ಮುಖ್ಯಸ್ಥರು ಇಂತಹ ಅಸಂಸದೀಯ ಪದಗಳ ಪಟ್ಟಿಬಿಡುಗಡೆ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ವಿವಿಧ ಕಾಮನ್ವೆಲ್ತ್‌ ದೇಶಗಳ ಸಂಸತ್ತಿನಲ್ಲೂ ಇಂತಹ ರೂಢಿಯಿದೆ. ಆದರೆ, ಇಂತಹ ಪದಗಳನ್ನು ಸಂಸದರು ಬಳಸಿದರೆ ಲೋಕಸಭೆ ಮತ್ತು ರಾಜ್ಯಸಭೆಯ ಮುಖ್ಯಸ್ಥರಿಗೆ ಅವುಗಳನ್ನು ಕಡತದಿಂದ ತೆಗೆದುಹಾಕುವ ಅಥವಾ ಉಳಿಸಿಕೊಳ್ಳುವ ಅಂತಿಮ ಅಧಿಕಾರವಿರುತ್ತದೆ.

ಹಿಂದಿನ ಆದೇಶ ಕ್ರೋಡೀಕರಿಸಿದ ಪಟ್ಟಿ:  2020ರಲ್ಲಿ ಕೆಲ ಕಾಮನ್ವೆಲ್ತ್‌ ದೇಶಗಳ ಶಾಸನ ಸಭೆಗಳು ಹಾಗೂ 2021ರಲ್ಲಿ ದೇಶದ ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯ ವಿಧಾನಸಭೆಗಳು ಅಸಂಸದೀಯ ಪದಗಳೆಂದು ಘೋಷಿಸಿರುವ ಪದಗಳನ್ನು ಲೋಕಸಭಾ ಸಚಿವಾಲಯದ ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಸಂಸದರ ಮಾತನಾಡುವಾಗ ಅವರ ಧಾಟಿಯನ್ನು ಗಮನಿಸಿ ಇಲ್ಲಿರುವ ಕೆಲ ಪದಗಳನ್ನು ಅಸಂಸದೀಯ ಅಲ್ಲವೆಂದು ಪರಿಗಣಿಸಲೂ ಅವಕಾಶವಿದೆ ಎಂದು ಕೈಪಿಡಿಯಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ ಸಂಸದರು ಬಳಸುವ ಪದಗಳ ಬಗ್ಗೆ ಕ್ರಮ ಕೈಗೊಳ್ಳುವ ಅಂತಿಮ ಅಧಿಕಾರ ಶಾಸನ ಸಭೆಯ ಮುಖ್ಯಸ್ಥರಿಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು