ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಶಂಕಿತ ಉಗ್ರರು ಬಿಹಾರದಲ್ಲಿ ಸೆರೆ

Published : Jul 15, 2022, 07:04 AM IST
ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಶಂಕಿತ ಉಗ್ರರು ಬಿಹಾರದಲ್ಲಿ ಸೆರೆ

ಸಾರಾಂಶ

ಮೋದಿ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಇಬ್ಬರು ಉಗ್ರರ ಸೆರೆಯಾಗಿದ್ದು,  ಇಬ್ಬರಲ್ಲಿ ಒಬ್ಬ ಮಾಜಿ ಪೊಲೀಸ್‌, ಇಬ್ಬರಿಗೂ ಪಿಎಫ್‌ಐ ನಂಟು, ಒಬ್ಬ ನಿಷೇಧಿತ ಸಿಮಿ ಸದಸ್ಯ ಎಂದು ತಿಳಿದುಬಂದಿದೆ.

ಪಾಟ್ನಾ (ಜು.15): ಪ್ರಧಾನಿ ನರೇಂದ್ರ ಮೋದಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಹಾಗೂ ದೇಶದ್ರೋಹಿ ಚಟುವಟಿಕೆಗಳನ್ನು ಕೈಗೊಳ್ಳಲು ದೇಶದ ವಿವಿಧೆಡೆಯ ಯುವಕರಿಗೆ ತರಬೇತಿ ನೀಡುತ್ತಿದ್ದ ಮಾಜಿ ಪೊಲೀಸ್‌ ಅಧಿಕಾರಿ ಸೇರಿದಂತೆ ಇಬ್ಬರು ಶಂಕಿತ ಉಗ್ರರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ಅದರೊಂದಿಗೆ ದೊಡ್ಡ ದಾಳಿಯ ಸಂಚನ್ನು ಮೊಳಕೆಯಲ್ಲೇ ಚಿವುಟಿದಂತಾಗಿದ್ದು, ಅನೇಕ ಕೋಮು ಗಲಭೆಗಳನ್ನೂ ತಡೆದಂತಾಗಿದೆ ಎಂದು ತಿಳಿಸಿದ್ದಾರೆ.

‘ನರೇಂದ್ರ ಮೋದಿಯವರ ಜು.12ರ ಪಟನಾ ಪ್ರವಾಸದ ಮುನ್ನಾದಿನ ಇವರನ್ನು ಪಟನಾದ ಫäಲ್‌ವಾರಿ ಷರೀಫ್‌ ಪ್ರದೇಶದಲ್ಲಿ ಬಂಧಿಸಲಾಗಿದೆ. ಇಬ್ಬರೂ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ನಂಟು ಹೊಂದಿದ್ದು, ಬಂಧಿತ ಮಾಜಿ ಪೊಲೀಸ್‌ ಅಧಿಕಾರಿಯು ಈ ಹಿಂದೆ ನಿಷೇಧಿತ ಸ್ಟೂಡೆಂಟ್‌ ಇಸ್ಲಾಮಿಕ್‌ ಮೂಮೆಂಟ್‌ ಆಫ್‌ ಇಂಡಿಯಾ (ಸಿಮಿ) ಸಂಘಟನೆಯ ಸದಸ್ಯನಾಗಿದ್ದ. ಇವರು ಸ್ಥಳೀಯರಿಗೆ ಖಡ್ಗ ಹಾಗೂ ಚಾಕುಗಳನ್ನು ಬಳಸಿ ದಾಳಿ ನಡೆಸಲು ತರಬೇತಿ ನೀಡುತ್ತಿದ್ದರು. 2047ಕ್ಕೆ ಭಾರತವನ್ನು ಇಸ್ಲಾಮಿಕ್‌ ದೇಶವಾಗಿಸುವ ಗುರಿಯನ್ನು ಹೊಂದಿದ್ದರು. ‘2047ರಲ್ಲಿ ಇಸ್ಲಾಮಿಕ್‌ ದೇಶವಾಗಿ ಭಾರತ’ ಎಂಬ ದಾಖಲೆ ಕೂಡ ಇವರ ಬಳಿ ಪತ್ತೆ ಆಗಿದೆ’ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರನ್ನು ಜಾರ್ಖಂಡ್‌ನ ನಿವೃತ್ತ ಪೊಲೀಸ್‌ ಅಧಿಕಾರಿ ಮೊಹಮ್ಮದ್‌ ಜಲಾಲುದ್ದೀನ್‌ ಹಾಗೂ ಅಥರ್‌ ಪರ್ವೇಜ್‌ ಎಂದು ಗುರುತಿಸಲಾಗಿದೆ.

ಪ್ರಧಾನಿ ಮೇಲೆ ದಾಳಿಗೆ 2 ಸಭೆ: ಬಂಧಿತ ಇಬ್ಬರು ಶಂಕಿತ ಉಗ್ರರು ಕೋಮುಗಲಭೆ ಸೃಷ್ಟಿಸಲು ಯುವಕರಿಗೆ ತರಬೇತಿ ನೀಡುತ್ತಿದ್ದರು. ಬೇರೆ ಬೇರೆ ರಾಜ್ಯಗಳಿಂದ ಬರುವ ಯುವಕರು ಇಲ್ಲಿನ ಹೋಟೆಲ್‌ಗಳಲ್ಲಿ ನಕಲಿ ಹೆಸರಿನಲ್ಲಿ ಉಳಿದುಕೊಂಡು ಇವರಿಂದ ತರಬೇತಿ ಪಡೆದು ತೆರಳುತ್ತಿದ್ದರು. ಮೋದಿ ಭೇಟಿಗೂ ಮುನ್ನ ಜು.6 ಹಾಗೂ ಜು.7ರಂದು ಇವರು ಪ್ರಧಾನಿಯ ಮೇಲೆ ದಾಳಿ ನಡೆಸುವುದು ಹೇಗೆ ಎಂಬ ಬಗ್ಗೆ ಸಭೆಗಳನ್ನು ಕೂಡ ನಡೆಸಿದ್ದರು. ಇದರ ಸುಳಿವು ಅರಿತು ಫäಲ್‌ವಾರಿ ಷರೀಫ್‌ನ ಇವರ ಕಚೇರಿ ಮೇಲೆ ದಾಳಿ ನಡೆಸಿ, ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಧಾನಿ ಅವರು ಜು.12ರಂದು ಬಿಹಾರ ವಿಧಾನಸಭೆ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಟನಾಗೆ ಬಂದಿದ್ದರು.

ವಿದೇಶಗಳ ಜತೆ ಸಂಪರ್ಕ, ದೇಣಿಗೆ: ಬಂಧಿತರ ಬಳಿ ಇಸ್ಲಾಮಿಕ್‌ ಉಗ್ರವಾದಕ್ಕೆ ಸಂಬಂಧಿಸಿದ ಸಾಕಷ್ಟುದಾಖಲೆಗಳು ದೊರೆತಿವೆ. ಪರ್ವೇಜ್‌ನ ತಮ್ಮನನ್ನು ಬಿಹಾರದಲ್ಲಿ ಸಂಭವಿಸಿದ ಅನೇಕ ಬಾಂಬ್‌ ಸ್ಫೋಟಗಳ ಸಂಬಂಧ ಹತ್ತು ವರ್ಷಗಳ ಹಿಂದೆಯೇ ಬಂಧಿಸಲಾಗಿತ್ತು. ತನಿಖೆಯ ವೇಳೆ ಪರ್ವೇಜ್‌ ಅನೇಕ ವಿದೇಶಿ ಸಂಘಟನೆಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದುದು ಪತ್ತೆಯಾಗಿದೆ. ದೇಶವಿರೋಧಿ ಚಟುವಟಿಕೆಗಳನ್ನು ನಡೆಸಲು ಇವನು ವಿದೇಶಗಳಿಂದ ಹಣ ಕೂಡ ಸಂಗ್ರಹಿಸುತ್ತಿದ್ದ. ಈ ಕುರಿತು ತನಿಖೆ ನಡೆಸಲು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳನ್ನೂ ನಮ್ಮ ತನಿಖೆಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?