
ಬೆಂಗಳೂರು(ಜೂ.22): ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನ ಹಲವು ವಿಡೀಯೋಗಳು ವೈರಲ್ ಆಗುತ್ತವೆ. ಇದರಂತೆ ಇಂದು ಮೀನಿನ ಹೊಟ್ಟೆಯೊಳಗೆ ಸೀಲ್ ಒಪನ್ ಮಾಡದ ಫುಲ್ ಬಾಟಲ್ ವಿಸ್ಕಿ ಪತ್ತೆಯಾದ ವಿಡಿಯೋ ಭಾರಿ ಸಂಚಲನ ಮೂಡಿಸಿದೆ. ಈ ಘಟನೆ ನಡೆದಿರುವುದೆಲ್ಲಿ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ವಿಡಿಯೋ ಮಾತ್ರ ಭಾರಿ ಚರ್ಚೆಗೆ ಗ್ರಾಸವಾಗಿದೆ.
ವಧುವಿನ ಸಿಗ್ನಲ್ ನೋಡಿ ಬೆಚ್ಚಿಬಿದ್ದ ಕ್ಯಾಮಾರಮ್ಯಾನ್; ಮದುವೆ ವಿಡಿಯೋ ವೈರಲ್
ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡಿದ ಮೀನುಗಾರು ಒಂದು ಮೀನಿನ ಹೊಟ್ಟೆಯಲ್ಲಿ ಏನೋ ಇರುವುದು ಗಮನಿಸಿದ್ದಾರೆ. ಇತರ ಮೀನಿನ ಹೊಟ್ಟೆಗಿಂತ ಈ ಮೀನಿನ ಹೊಟ್ಟೆ ಗಾತ್ರ ದೊಡ್ಡದಾಗಿತ್ತು. ಹೀಗಾಗಿ ಮೀನುಗಾರ ಮೀನಿನ ಹೊಟ್ಟೆಯೊಳಗೇನಿದೆ ಎಂದು ತಿಳಿಯಲು ಮಂದಾಗಿದ್ದಾನೆ.
ಮೀನಿನ ಹೊಟ್ಟೆ ಸೀಳಿದಾಗ ಸೀಲ್ ಒಪನ್ ಮಾಡದ ಫುಲ್ ಬಾಟಲ್ ವಿಸ್ಕಿ ಪತ್ತೆಯಾಗಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಇದರ ಜೊತೆಗೆ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆಳ ಸಮುದ್ರದಲ್ಲಿ ಮೀನಿಗೆ ಫುಲ್ ಬಾಟಲ್ ವಿಸ್ಕಿ ಸಿಕ್ಕಿದ್ದು ಹೇಗೆ? ಮೀನಿನ ಜೊತೆಗೆ ಒಂದು ಗುಟುಕು ಉಚಿತ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಕಾಂಪಿಟೀಶನ್‌ಗೆ ಬಿದ್ದು ಗೋಲ್‌ಗಪ್ಪಾ ತಿಂದು ಸಂಭ್ರಮಿಸಿದ ಹಸು-ಕರು; ವಿಡಿಯೋ ವೈರಲ್!
ಆದರೆ ಇದು ವಿಡಿಯೋಗಾಗಿ ಮಾಡಿದ ಗಿಮಿಕ್ ಎಂದು ಹಲವರು ಹೇಳಿದ್ದಾರೆ. ಹಿಡಿದ ಮೀನಿನ ಬಾಯಿಯೊಳಗಿಂದ ಬಾಟಲ್ ತುರುಕಲಾಗಿದೆ. ಬಳಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಕಡಲ ಜೀವರಾಶಿಗಳು ಪ್ಲಾಸ್ಟಿಕ್, ಬಾಟಲಿ ನುಂಗುತ್ತಿರುವುದು ಹೊಸದೇನಲ್ಲ. ಅಷ್ಟರ ಮಟ್ಟಿಗೆ ಮನುಷ್ಯ ಪರಿಸರ ಹಾಗೂ ಜಲಚರಗಳನ್ನು ಕಾಡಿದ್ದಾನೆ. ಮಾನವನ ಅಸಡ್ಡೆ ಹಾಗೂ ಅತೀ ಆಸೆ ಪರಿಣಾಮ ಪ್ರಾಣಿಗಳಿಗೆ ಈ ಪಾಡು ಬಂದಿದೆ. ಹಲವು ಮೀನುಗಳ ಹೊಟ್ಟೆಯಲ್ಲಿ ಕೆಜಿಗಟ್ಟಲೆ ಪ್ಲಾಸ್ಟಿಕ್ ಸಿಕ್ಕಿದ ಊದಾಹರಣೆಗಳಿವೆ. ಹೀಗಾಗಿ ಇದು ಎಚ್ಚರಿಕೆಯ ಕರೆ ಗಂಟೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ