ಬಾಲಿವುಡ್ ಹಾಡಿಗೆ ವೇದಿಕೆ ಹತ್ತಿ ವಿದ್ಯಾರ್ಥಿ ಜೊತೆ ಹೆಜ್ಜೆ ಹಾಕಿದ ಪ್ರೊಫೆಸರ್, ವಿಡಿಯೋ!

Published : Sep 14, 2024, 08:35 PM IST
ಬಾಲಿವುಡ್ ಹಾಡಿಗೆ ವೇದಿಕೆ ಹತ್ತಿ ವಿದ್ಯಾರ್ಥಿ ಜೊತೆ ಹೆಜ್ಜೆ ಹಾಕಿದ ಪ್ರೊಫೆಸರ್, ವಿಡಿಯೋ!

ಸಾರಾಂಶ

ವಿದ್ಯಾರ್ಥಿಗಳು ಹಾಗೂ ಟೀಚರ್ ಡ್ಯಾನ್ಸ್  ಪ್ರತಿ ಬಾರಿ ಸದ್ದು ಮಾಡುತ್ತದೆ. ಇದೀಗ ವಿದ್ಯಾರ್ಥಿ ಡ್ಯಾನ್ಸ್ ಮಾಡುತ್ತಿದ್ದಂತೆ ವೇದಿಕೆ ಹತ್ತಿದ ಪ್ರೊಫೆಸರ್ ಅದ್ಭುತ ಸ್ಟೆಪ್ಸ್ ಹಾಕಿ ರಂಜಿಸಿದ್ದಾರೆ. ಈ ವಿಡಿಯೋ ಇದೀಗ ಹೊಸ ಸೆನ್ಸೇಶನ್ ಕ್ರಿಯೆಟ್ ಮಾಡಿದೆ.

ಚತ್ತೀಸಘಡ(ಸೆ.14) ಟೀಚರ್ ಜೊತೆ ವಿದ್ಯಾರ್ಥಿಗಳ ಡ್ಯಾನ್ಸ್ ಇತ್ತೀಚೆಗೆ  ಹೊಸ ಟ್ರೆಂಡ್. ಹಲವು ವೇದಿಕೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಹೆಜ್ಜೆ ಹಾಕಿದ್ದಾರೆ. ಇದೀಗ ಚತ್ತೀಸಘಡ ಒಪಿ ಜಿಂದಾಲ್ ವಿಶ್ವವಿದ್ಯಾಲಯದ ಕಾರ್ಯಕ್ರಮದಲಲ್ಲಿ ವಿದ್ಯಾರ್ಥಿ ಹಾಗೂ ಪ್ರೊಫೆಸರ್ ಅದ್ಭುತ ಹೆಜ್ಜೆ ಹಾಕಿ ಎಲ್ಲರನ್ನೂ ರಂಜಿಸಿದ ದೃಶ್ಯ ಸೆರೆಯಾಗಿದೆ. ಬಾಲಿವುಡ್‌ನ ಖ್ಯಾತ ಯುಪಿ ವಾಲಾ ತುಮ್ಕಾ ಹಾಡಿಗೆ ಇಬ್ಬರು ಹೆಜ್ಜೆ ಹಾಕಿದ್ದರೆ. ಈ ವಿಡಿಯೋ ಇದೀಗ ಹೊಸ ದಾಖಲೆ ಸೃಷ್ಟಿಸಿದೆ.

ಈ ವಿಡಿಯೋದ ಆರಂಭದಲ್ಲಿ, ವಿದ್ಯಾರ್ಥಿಯೊಬ್ಬ ಡ್ಯಾನ್ಸ್‌ಗಾಗಿ ವೇದಿಕೆ ಹತ್ತಿದ್ದಾನೆ. ಇತ್ತ ಕಿಕ್ಕಿರಿದು ವಿದ್ಯಾರ್ಥಿಗಳು, ಶಿಕ್ಷಕರು ನೆರೆದಿದ್ದಾರೆ. ಬಾಲಿವುಡ್ ಹಾಡು ಕೂಡ ಹಾಕಲಾಗಿದೆ. ಇನ್ನೇನು ವಿದ್ಯಾರ್ಥಿ ಹೆಜ್ಜೆ ಹಾಕಬೇಕು ಅನ್ನುವಷ್ಟರಲ್ಲೇ ಪ್ರೊಫೆಸರ್ ಅಡ್ಡಿಪಡಿಸಿದ್ದಾರೆ. ಒಂದು ನಿಮಿಷ ನಿಲ್ಲು ಎಂದು ಅನೌನ್ಸ್ ಮಾಡಿ ಪ್ರೊಫೆಸರ್ ಕೂಡ ವೇದಿಕೆ ಹತ್ತಿದ್ದಾರೆ.

ಹೃದಯ ಗೆದ್ದ ಪುಟ್ಟ ಹುಡುಗಿಯ ತೌಬಾ ತೌಬಾ ಡ್ಯಾನ್ಸ್ ಸ್ಟೆಪ್ಸ್, ವಿಕ್ಕಿ ಕೌಶಾಲ್‌ಗೆ ಸವಾಲು!

ಪ್ರೊಫೆಸರ್ ವೇದಿಕೆ ಹತ್ತುತ್ತಿದ್ದಂತೆ ವಿದ್ಯಾರ್ಥಿಗಳು ಶಿಳ್ಳೆ ಚಪ್ಪಾಳೆ ಮೂಲಕ ಹುರಿದುಂಬಿಸಿದ್ದಾರೆ. ಹಾಡು ಪ್ಲೇ ಮಾಡಲಾಗಿದೆ. ವಿದ್ಯಾರ್ಥಿ ಹಾಗೂ ಪ್ರೊಫೆಸರ್ ಇಬ್ಬರು ಒಂದೇ ರೀತಿ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ. ಬಾಲಿವುಡ್ ನಟ ಗೋವಿಂದ ಅವರ ಚಿತ್ರದ ಹಾಡು ಇದಾಗಿದ್ದು, ಅವರಂತೆ ಸೂಪರ್ ಡ್ಯಾನ್ಸ್ ಮಾಡಿ ಮಿಂಚಿದ್ದಾರೆ. ಇದರ ನಡುವೆ ಪ್ರೊಫೆಸರ್ ರಜನಿಕಾಂತ್ ಸ್ಟೈಲ್‌ನಲ್ಲಿ ಸನ್ ಗ್ಲಾಸ್ ಧರಿಸಿದ್ದಾರೆ. ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ಬರೋಬ್ಬರಿ 6 ಮಿಲಿಯನ್ ವೀಕ್ಷಣೆ ಕಂಡಿದೆ. ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಇಲ್ಲಿ ಪ್ರೊಫೆಸರ್ ಅದ್ಬುತ ಡ್ಯಾನ್ಸ್ ಕಾರ್ಯಕ್ರಮದ ಹೈಲೈಟ್ಸ್ ಎಂದಿದ್ದಾರೆ.  ಈ ರೀತಿಯ ಕಾಲೇಜು ಹಾಗೂ ವಾತಾವರಣ ನನಗೂ ಬೇಕಿದೆ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಇವರು ಡ್ಯಾನ್ಸ್ ಟೀಚರ್ ಇರಬೇಕು ಎಂದು ಮತ್ತೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

 

ಮತ್ತೊಂದು ವಿಶೇಷ ಅಂದರೆ ಈ ಡ್ಯಾನ್ಸ್‌ನಲ್ಲಿ ವಿದ್ಯಾರ್ಥಿ ಹಾಗೂ ಪ್ರೊಫೆಸರ್ ಇಬ್ಬರೂ ಒಂದೇ ರೀತಿ ಡ್ರೆಸ್ ಧರಿಸಿದ್ದಾರೆ. ಬ್ಲಾಕ್ ಡ್ರೆಸ್ ಮೂಲಕ ಡ್ಯಾನ್ಸ್ ಮಾಡಿ ಮಿಂಚಿದ್ದಾರೆ. ಇತ್ತೀಚೆಗೆ ಇದೇ ರೀತಿಯ ಹಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ವಿದ್ಯಾರ್ಥಿಗಳ ಜೊತೆ ಶಿಕ್ಷಕಿಯರು ಡ್ಯಾನ್ಸ್ ಮಾಡಿದ ವಿಡಿಯೋಗಳು ವೈರಲ್ ಆಗಿದೆ. ಇತ್ತೀಚೆಗೆ ಕೇರಳದ ವಿಶ್ವವಿದ್ಯಾಲದ ಕಾರ್ಯಕ್ರಮದಮಲ್ಲಿ ಮಹಿಳಾ ಪ್ರೊಫೆಸರ್ ವೇದಿಕೆ ಮೇಲೆ ಹತ್ತಿ ಅದ್ಭುತ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು.

ಭಾರಿ ಮಳೆಯಿಂದ ಖುಷಿಯಾದ ರೈತ, ಜಲಾವೃತ ಪ್ರದೇಶದಲ್ಲಿ ಅಪ್ಪ ಮಗನ ಭರ್ಜರಿ ಸ್ಟೆಪ್ಸ್!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್