ಭಾರತದ ಈ ರೈಲು ನಿಲ್ದಾಣಕ್ಕೆ ತೆರಳಲು ಭಾರತೀಯರಿಗೂ ಬೇಕು ಪಾಸ್‌ಪೋರ್ಟ್, ವೀಸಾ!

By Chethan KumarFirst Published Sep 14, 2024, 6:09 PM IST
Highlights

ವಿದೇಶಕ್ಕೆ ತೆರಳಲು ಪಾಸ್‌ಪೋರ್ಟ್ ವೀಸಾ ಬೇಕು. ಭಾರತೀಯರಿಗೆ ದೇಶದ ಯಾವುದೇ ಮೂಲೆಗೆ, ಅಂತಿಮ ಗ್ರಾಮಕ್ಕೆ ತರಳಲೂ ಈ ದಾಖಲೆ ಬೇಡ. ಆದರೆ ಭಾರತದಲ್ಲಿರುವ ಈ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ಎಂಟ್ರಿಕೊಡಲು ಭಾರತೀಯರಿಗೂ ಪಾಸ್‌ಪೋರ್ಟ್ ವೀಸಾ ಬೇಕೆ ಬೇಕು. ಈ ವಿಶೇಷ ರೈಲು ನಿಲ್ದಾಣ ಎಲ್ಲಿದೆ?

ನವದೆಹಲಿ(ಸೆ.14) ಭಾರತೀಯನಿಗೆ ದೇಶದ ಯಾವುದೇ ಮೂಲೆಗೆ ತೆರಳಲು ಪಾಸ್‌ಪೋರ್ಟ್ ವೀಸಾದ ಅವಶ್ಯಕತೆ ಇಲ್ಲ. ಗಡಿ ಭಾಗದ ಯಾವುದೇ ಅಂತಿಮ ಗ್ರಾಮಕ್ಕೆ ತೆರಳಲು ಪಾಸ್‌ಪೋರ್ಟ್ ಬೇಕಿಲ್ಲ. ದೇಶದೊಳಗೆ ಯಾವುದೇ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣ ಮಾಡಲು ಟಿಕೆಟ್ ಖರೀದಿಸಿದರೆ ಸಾಕು.ನಗರ, ಜನಸಂದಣಿ ಹೆಚ್ಚಿರುವ ರೈಲು ನಿಲ್ದಾಣ ಪ್ಲಾಟ್‌ಫಾರ್ಮ್ ಪ್ರವೇಶಿಸಲು 10 ರೂಪಾಯಿ, 20 ರೂಪಾಯಿ ಪ್ಲಾಟ್‌ಫಾರ್ಮ್ ಟಿಕೆಟ್ ಖರೀದಿಸದರೆ ಸಾಕು. ಆದರೆ ಗ್ರಾಮ, ಸಣ್ಣ ರೈಲು ನಿಲ್ದಾಣಕ್ಕೆ ಎಂಟ್ರಿ ಕೂಡ ಫ್ರಿ. ಆದರೆ ಭಾರತದ ಈ ರೈಲು ನಿಲ್ದಾಣ ಪ್ಲಾಟ್‌ಫಾರ್ಮ್ ಪ್ರವೇಶ ಮಾಡಬೇಕು ಎಂದರೆ ನೀವು ಭಾರತೀಯರಾಗಿದ್ದರೂ ಪಾಸ್‌ಪೋರ್ಟ್ ಹಾಗೂ ವೀಸಾ ಇರಲೇಬೇಕು. ಇದು ಕಡ್ಡಾಯವಾಗಿದೆ.

ಜಗತ್ತಿನ ಯಾವುದೇ ದೇಶದಲ್ಲಿ ಅದೇ ದೇಶದ ನಾಗರೀಕರು ಅವರ ಯಾವುದೇ ರೈಲು ನಿಲ್ದಾಣಕ್ಕೆ ಪ್ರವೇಶ ಪಡೆಯಲು ಪಾಸ್‌ಪೋರ್ಟ್ ಅಗತ್ಯವಿಲ್ಲ. ಭಾರತದ ಅಟ್ಟಾರಿ ಶ್ಯಾಮ್ ಸಿಂಗ್ ರೈಲು ನಿಲ್ದಾಣದ ಎಲ್ಲಕ್ಕಿಂತ ವಿಶೇಷ ಹಾಗೂ ಭಿನ್ನ. ಅಟ್ಟಾರಿ ರೈಲು ನಿಲ್ದಾಣಕ್ಕೆ ಪ್ರವೇಶ ಮಾಡಬೇಕಾದರೆ ನಿಮ್ಮಲ್ಲಿ ಪಾಸ್‌ಪೋರ್ಟ್, ವೀಸಾ ಇರಲೇಬೇಕು. ಈ ರೈಲು ನಿಲ್ದಾಣ ಭಾರತದ ಪಂಜಾಬ್‌ನಲ್ಲಿದೆ.  

Latest Videos

ರೈಲ್ವೇಯಿಂದ ಗುಡ್ ನ್ಯೂಸ್, ಹಿರಿಯ ನಾಗರೀಕರಿಗೆ ಶೇ.50 ರಷ್ಟು ಡಿಸ್ಕೌಂಟ್ ಯೋಜನೆ ಶೀಘ್ರದಲ್ಲೇ ಜಾರಿ!

ಇದು ಭಾರತದ ಗಡಿಯಲ್ಲಿರುವ ಕೊನೆಯ ನಿಲ್ದಾಣ. ಭಾರತ ಪಾಕಿಸ್ತಾನ ನಡುವಿನ ಅಮೃತಸರ ಲಾಹೋರ್ ರೈಲು ಹಳಿಯಲ್ಲಿ ಬರುವ ಭಾರತದ ಕೊನೆಯ ನಿಲ್ದಾಣವಾಗಿದೆ. ವಾಘ ಗಡಿಯಿಂದ ಅಟ್ಟಾರಿ ರೈಲು ನಿಲ್ದಾಣಕ್ಕೆ ಕೇವಲ 3.4 ಕಿಲೋಮೀಟರ್ ದೂರವಿದೆ.  ಈ ನಿಲ್ದಾಣದ ಬಳಿಕ ರೈಲು ಪಾಕಿಸ್ತಾನ ಪ್ರವೇಶ ಪಡೆಯಲಿದೆ. ಭಾರತೀಯ ರೈಲ್ವೇಯ ಸಮ್ಜೋತಾ ಎಕ್ಸ್‌ಪ್ರೆಸ್ ರೈಲು ಇದೇ ರೈಲು ನಿಲ್ದಾಣದಿಂದ ಪಾಕಿಸ್ತಾನದ ಲಾಹೋರ್‌ಗೆ ಸೇವೆ ನೀಡುತ್ತಿತ್ತು. ಆದರೆ ಇಂಡೋ ಪಾಕ್ ಸಂಬಂಧ ಹಳಸಿದ ಬೆನ್ನಲ್ಲೇ ಈ ರೈಲು ಸೇವೆ ರದ್ದಾಗಿದೆ.

ಅಟ್ಟಾರಿ ಶ್ಯಾಮ್ ಸಿಂಗ್ ರೈಲು ನಿಲ್ದಾಣ ಭಾರತದ ಗಡಿಯಲ್ಲಿರುವ ಕಾರಣ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಭಾರತೀಯ ರೈಲ್ವೇ ಈ ಒಂದು ನಿಲ್ದಾಣದಲ್ಲಿ ವಿಶೇಷ ನಿಯಮ ಜಾರಿಗೊಳಿಸಿದೆ. ಈ ನಿಲ್ದಾಣ ಭಾರತದ ಒಳಗೆ ಇದೆ, ಭಾರತೀಯ ರೈಲ್ವೇ ಈ ನಿಲ್ದಾಣ ನಿರ್ವಹಣೆ ಮಾಡುತ್ತಿದೆ. ಭಾರತೀಯ ರೈಲ್ವೇ ರೈಲುಗಳು ಈ ನಿಲ್ದಾಣದಿಂದ ಸಂಚರಿಸುತ್ತಿದೆ. ಆದರೆ ಭಾರತೀಯರಾಗಿದ್ದರೂ ಹೈಸೆಕ್ಯೂರಿಟಿ ಕಾರಣದಿಂದ ಪಾಸ್‌ಪೋರ್ಟ ಹಾಗೂ ವೀಸಾ ಅವಶ್ಯಕತೆ ಇದೆ. ಈ ಕುರಿತು ಕೇಂದ್ರ ಸರ್ಕಾರದ ಅಮೃತಮಹೋತ್ಸವ ಟ್ವಿಟರ್ ಖಾತೆಯಲ್ಲೂ ಮಾಹಿತಿ ಹಂಚಿಕೊಂಡಿದೆ. 

 

Uniqueness is not strange to our country. But what if we told you there exists a railway station in the country where even Indian citizens need a visa to enter!? (1/2) pic.twitter.com/5eV94wNwNy

— Amrit Mahotsav (@AmritMahotsav)

 

ರೈಲು ಪ್ರಯಾಣದಲ್ಲಿ ಇನ್ನು ಊಟ-ತಿಂಡಿ ತಲೆ ಬಿಸಿ ಇಲ್ಲ; ಕುಳಿತಲ್ಲಿಗೆ ಜೊಮ್ಯಾಟೋ ಡೆಲಿವರಿ!

ಈ ರೈಲು ನಿಲ್ದಾಣದ ಮೇಲೆ ಭಾರತೀಯ ಸೇನೆ ದಿನದ 24 ಗಂಟೆ ಹದ್ದಿನ ಕಣ್ಣಿಟ್ಟಿದೆ. ಎಲ್ಲೆಡೆ ಸಿಸಿಟಿವಿ ಅಳವಡಿಸಲಾಗಿದೆ. ಈ ರೈಲು ನಿಲ್ದಾಣಕ್ಕೆ ಪಾಸ್‌ಪೋರ್ಟ್ ವೀಸಾ ಇಲ್ಲದೆ ಪ್ರವೇಶವಿಲ್ಲ. ಇಲ್ಲಿ ಯಾವುದೇ ಇನ್‌ಫ್ಲುಯೆನ್ಸ್ ನಡೆಯಲ್ಲ. ಉಲ್ಲೇಖಿಸಿದ ದಾಖಲೆ ಇದ್ದರೆ ಮಾತ್ರ ಪ್ರವೇಶ.  ಭಾರತ ಪಾಕಿಸ್ತಾನ ನಡುವಿನ ಸಂಬಂಧ ಹಳಸಿರುವ ಕಾರಣ ಈ ನಿಯಮ ಮತ್ತಷ್ಟು ಬಿಗಿಯಾಗಿದೆ. ಭಯೋತ್ಪಾದಕರ ನಸುಳುವಿಕೆ, ರಾಜಕೀಯ ಸಂಬಂಧ, ರಕ್ಷಣಾ ಸಂಬಂಧ ಸೇರಿದಂತೆ ಹಲವು ಸಂಬಂಧಗಳು ಹಳಸಿದೆ. ದೇಶದ ಯಾವುದೇ ರೈಲು ನಿಲ್ದಾಣಕ್ಕೆ ಸುಲಭವಾಗಿ ತೆರಳಬಹುದು. ಆದರೆ ಅಟ್ಟಾರಿ ಮಾತ್ರ ಭಿನ್ನ.
 

click me!