ಶಾಲಾ ಯೂನಿಫಾರ್ಮ್‌ ಧರಿಸಿ, ಸೈಕಲ್‌ ಏರಿ ಸದನಕ್ಕೆ ಬಂದ ಶಾಸಕರು!

By Suvarna NewsFirst Published Feb 3, 2023, 5:58 PM IST
Highlights

ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್‌, ಯುನಿಫಾರ್ಮ್‌ ಹಾಗೂ ಲ್ಯಾಪ್‌ಟಾಪ್‌ಗಳನ್ನು ನೀಡುವಲ್ಲಿ ಸರ್ಕಾರ ವಿಳಂಬ ಧೋರಣೆ ಮಾಡುತ್ತಿದೆ ಎಂದು ಆರೋಪಿಸಿ ಶುಕ್ರವಾರ ಪಾಂಡಿಚೇರಿಯಲ್ಲಿ ಡಿಎಂಕೆ ಹಾಗೂ ಕಾಂಗ್ರೆಸ್‌ ಶಾಸಕರು ವಿಧಾನಸಭೆಗೆ ಯೂನಿಫಾರ್ಮ್‌ ಧರಿಸಿ, ಸೈಕಲ್‌ ಏರಿ ಆಗಮಿಸಿದ್ದರು. ಈ ವಿನೂತನ ಪ್ರತಿಭಟನೆ ದೇಶದ ಗಮನಸೆಳೆದಿದೆ.
 

ಪಾಂಡಿಚೇರಿ (ಫೆ.3): ಕರ್ನಾಟಕದಲ್ಲಿ ವಿನೂತನ ಪ್ರತಿಭಟನೆಗಳಿಗೆ ವಾಟಾಳ್‌ ನಾಗರಾಜ್‌ ಫೇಮಸ್‌. ಕತ್ತೆ, ಕುದುರೆಗಳೊಂದಿಗೆ ಮಾತ್ರವಲ್ಲ, ಟಾಯ್ಲೆಟ್‌ನ ಕಮೋಡ್‌ಗಳನ್ನು ಇರಿಸಿಕೊಂಡು ಅವರು ಪ್ರತಿಭಟನೆ ಮಾಡಿದ್ದನ್ನು ಕಂಡಿದ್ದೇವೆ. ಇದೇ ರೀತಿಯ ಒಂದು ಪ್ರತಿಭಟನೆ ಪಕ್ಕದ ಪಾಂಡಿಚೇರಿಯಲ್ಲೂ ಆಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ಸರ್ಕಾರ ಯೂನಿಫಾರ್ಮ್‌ಗಳು, ಸೈಕಲ್‌ ಹಾಗೂ ಲ್ಯಾಪ್‌ಟಾಪ್‌ ನೀಡಿಲ್ಲ ಎಂದು ಆರೋಪಿಸಿದ ಪ್ರತಿಪಕ್ಷವಾದ ಡಿಎಂಕೆ ಹಾಗೂ ಕಾಂಗ್ರೆಸ್‌ ಶಾಸಕರು, ವಿಧಾನಸಭೆಗೆ ವಿಭಿನ್ನ ರೀತಿಯಲ್ಲಿ ಆಗಮಿಸಿ ಪ್ರತಿಭಟಿಸಿದರು. ಸಾಮಾನ್ಯವಾಗಿ ಪಂಚೆ, ಶರ್ಟ್‌ ಧರಿಸಿ, ಕಾರ್‌ಗಳಲ್ಲಿ ಬರುತ್ತಿದ್ದ ಶಾಸಕರು ಡಿಫರೆಂಟ್‌ ಎನ್ನುವಂತೆ ಶಾಲಾ ಯೂನಿಫಾರ್ಮ್‌, ಐಡಿ ಕಾರ್ಡ್‌ ಧರಿಸಿ, ಸೈಕಲ್‌ ಏರಿ ವಿಧಾನಸಭೆಗೆ ಆಗಮಿಸಿದ್ದರು. ಅವರ ಈ ವಿನೂತನ ಪ್ರತಿಭಟನೆ ದೇಶದ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದಲ್ಲದೆ, ಶಾಲೆಗಳಲ್ಲಿ ಮಧ್ಯಾಹ್ನ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟ ಕೂಡ ರುಚಿಯಾಗಿರುವುದಿಲ್ಲ ಎಂದು ಹೇಳಿದ್ದಾರೆ. ಅದರೊಂದಿಗೆ ಪಾಂಡಿಚೇರಿಗೆ ರಾಜ್ಯ ಸ್ಥಾನಮಾನ ನೀಡುವ ವಿಚಾರದಲ್ಲಿ ನಿರ್ಣಯ ಮಂಡಿಸಲು ಸರ್ಕಾರಕ್ಕೆ ಮನಸ್ಸಿಲ್ಲದೆ ಇರೋದನ್ನ ವಿರೋಧಿಸಿ ವಿರೋಧಪಕ್ಷಗಳು ಶುಕ್ರವಾರದ ಕಲಾಪದಿಂದ ಹೊರನಡೆದವು.



ಬ್ರಿಟನ್‌ನ ರಾಣಿ ಎಲಿಜಬೆತ್‌ ಅವರ ನಿಧನಕ್ಕೆ ಸದನದಲ್ಲಿ ಸಂತಾಪ ಸೂಚಿಸಿದ ತಕ್ಷಣ, ವಿಧಾನಸಭೆಗೆ ಶಾಲಾ ಸಮವಸ್ತ್ರ ಧರಿಸಿ, ಸೈಕಲ್‌ ಏರಿ ಬಂದಿದ್ದ ಡಿಎಂಕೆ ಹಾಗೂ ಕಾಂಗ್ರೆಸ್‌ ಶಾಸಕರು, ರಾಜ್ಯತ್ವದ ಕುರಿತು ಸರ್ಕಾರ ನಿರ್ಣಯ ಮಂಡಿಸಬೇಕೆಂದು ಒತ್ತಾಯ ಮಾಡಿದರು.

ಪ್ರತಿಪಕ್ಷದ ನಾಯಕ ಆರ್.ಶಿವ ಮಾತನಾಡಿ, ನಿರ್ಣಯವನ್ನು ಕೈಗೆತ್ತಿಕೊಳ್ಳುವುದು ಮುಖ್ಯವಾಗಿದೆ ಮತ್ತು ಚರ್ಚಿಸಲು ಮತ್ತು ಅದನ್ನು ಅಂಗೀಕರಿಸಲು ಸಮಯ ನೀಡಾಗುತ್ತದೆ. ಈಗಿರುವ ಕಷ್ಟಗಳನ್ನು ನೆನಪಿಸಿಕೊಂಡು ಮುಖ್ಯಮಂತ್ರಿಗಳು ರಾಜ್ಯ ರಚನೆಯ ಅಗತ್ಯದ ಬಗ್ಗೆ ಮುಖ್ಯಮಂತ್ರಿಗಳು ಯೋಚನೆ ಮಾಡಿದ್ದರೆ, ಲೆಫ್ಟಿನೆಂಟ್‌ ಗವರ್ನರ್‌ ಮಾತ್ರ, ರಾಜ್ಯ ಸರ್ಕಾರವಾಗಿದ್ದರೆ ಪಾಂಡಿಚೇರಿ ಏನೆಲ್ಲಾ ಉಪಯೋಗಗಳನ್ನು ಪಡೆದುಕೊಳ್ಳುತ್ತಿವೆಯೋ ಅದೇ ಪ್ರಯೋಜನಗಳನ್ನು ಕೇಂದ್ರಾಡಳಿತ ಪ್ರದೇಶವಾಗಿಯೂ ಪಡೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

 

ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ: ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ಅಂತ್ಯ

ಡಿಎಂಕೆ ಮತ್ತು ಕಾಂಗ್ರೆಸ್ ಶಾಸಕರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸೈಕಲ್ ಮತ್ತು ಲ್ಯಾಪ್‌ಟಾಪ್ ನೀಡಲು ವಿಳಂಬ ಮತ್ತು ಶಾಲಾ ಬಸ್‌ಗಳ ಕಾರ್ಯಾಚರಣೆಯನ್ನು ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿದರು. ಸರ್ಕಾರಿ ಶಾಲೆಗಳಲ್ಲಿ ಒದಗಿಸುವ ಊಟವೂ ರುಚಿಯಾಗಿಲ್ಲ ಎಂದು ಹೇಳಿದ್ದಲ್ಲದೆ, ಸರ್ಕಾರದಿಂದ ಈ ಕುರಿತಾದ ಉತ್ತರವನ್ನು ಕೇಳಿದ್ದಾರೆ.

Tumakuru: ರೈಲ್ವೇ ಬಿಡ್ಜ್ ನಿರ್ಮಿಸುವಂತೆ ಒತ್ತಾಯಿಸಿ ಹಳಿ ಮೇಲೆ‌ ಕುಳಿತು ಗ್ರಾಮಸ್ಥರ ಪ್ರತಿಭಟನೆ

ಆದರೆ, ಇದಕ್ಕೆ ಮುಖ್ಯಮಂತ್ರಿ ಎನ್‌.ರಂಗಸ್ವಾಮಿ ಹಾಗೂ ಅವರ ಸಚಿವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಕಾರಣ, ಕಾಂಗ್ರೆಸ್‌ ಶಾಸಕರಾದ ಎಂ. ವೈದ್ಯನಾಥನ್‌ ಹಾಗೂ ರಮೇಶ್‌ ಪರಂಬತ್‌ ಅವರು ಸಭಾತ್ಯಾಗ ಮಾಡಿ ಹೊರನಡೆದರು. ಡಿಎಂಕೆ ಶಾಸಕರು ಕೂಡ ಇದೇ ವಿಚಾರ ಪ್ರಸ್ತಾಪ ಮಾಡುತ್ತಿದ್ದರು. ಆದರೆ, ಸ್ಪೀಕರ್‌ ಬೇರೆ ವಿಷಯ ಚರ್ಚಿಸಲು ಪ್ರಸ್ತಾಪಿಸಿದಾಗ ಡಿಎಂಕೆಯ ಆರು ಶಾಸಕರಾದ, ಶಿವ, ಎಎಂಎಚ್‌ ನಜೀಮ್‌, ಅನಿಬಲ್‌ ಕೆನೆಡಿ, ಆರ್‌.ಸಂಬತ್‌, ಆರ್‌.ಸೆಂಥಿಲ್‌ ಕುಮಾರ್‌ ಹಾಗೂ ಎಂ.ನಾಗತಿಯಾಗ್ರಜನ್ ಸಹ ಸಭಾತ್ಯಾಗ ಮಾಡಿದರು.
ನಂತರ ಕಾರೈಕಲ್‌ನ ಡಿಎಂಕೆ ಸದಸ್ಯ ಮತ್ತು ಮಾಜಿ ಆರೋಗ್ಯ ಸಚಿವ ಎ ಎಂ ಎಚ್ ನಜೀಮ್ ಮಾತನಾಡಿ, ಕಟಾವಿನ ಸಮಯದಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯನ್ನು ನಿರ್ಣಯಿಸಲು ಮತ್ತು ರೈತರಿಗೆ ಪರಿಹಾರ ನೀಡಲು ಸರ್ಕಾರವು ಸಮಿತಿಯನ್ನು ರಚಿಸಬೇಕು. ತಕ್ಷಣ ಸ್ವತಂತ್ರ ಸದಸ್ಯ ಪಿ.ಶಿವ ಎದ್ದುನಿಂತು ಅದೇ ಬೇಡಿಕೆ ಮುಂದಿಟ್ಟರು.

click me!