ಮಕ್ಕಳೇ ಇಲ್ಲ ಎಂದು ಕೊರಗುವವರ ಮಧ್ಯೆ ಹೆಣ್ಣು ಮಗು ಜನಿಸದ್ದಕ್ಕೆ ಬೇಸರಿಸಿ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಗರ್ತಲಾದಲ್ಲಿ ನಡೆದಿದೆ.
ಮಕ್ಕಳೇ ಇಲ್ಲ ಎಂದು ಕೊರಗುವವರ ಮಧ್ಯೆ ಹೆಣ್ಣು ಮಗು ಜನಿಸದ್ದಕ್ಕೆ ಬೇಸರಿಸಿ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಗರ್ತಲಾದಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ನೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯನ್ನು ಕಳೆದುಕೊಂಡ ಆಘಾತದಲ್ಲಿ ಪತ್ನಿಯೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.
23 ವರ್ಷದ ಸುಪ್ರಿಯಾ ದಾಸ್ ನಾಲ್ಕು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದಕ್ಕಾಗಿ ಸುಪ್ರಿಯಾಳ ಅತ್ತೆ ಮನೆಯವರು ತೀರಾ ಅಸಮಾಧಾನ ವ್ಯಕ್ತಪಡಿಸಿದ್ದರು. ಗಂಡು ಮಗು ಜನಿಸುತ್ತದೆ ಎಂದು ಬಯಸಿದ್ದ ಸುಪ್ರಿಯಾಳ ಪತಿ ಗೋವಿಂದ ದಾಸ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೊರ ರಾಜ್ಯದಿಂದ ಯುವತಿಯರ ಕರೆತಂದು ವೇಶ್ಯಾವಾಟಿಕೆ ದಂಧೆ: ಮಹಿಳೆ ಬಂಧನ
ಹೆಣ್ಣು ಮಗು ಜನಸಿದ್ದಕ್ಕೆ ಪತ್ನಿಯೊಂದಿಗೆ ಸತತವಾಗಿ ಜಗಳ ಮಾಡಿದ ಗೋವಿಂದ ದಾಸ್ ತನಗೆ ತಾನೇ ಬೆಂಕಿ ಸುಟ್ಟುಕೊಂಡು ಆತ್ಮಹತ್ಯೆ ಮಾಡಿದ್ದಾನೆ. ಹೆಣ್ಣು ಮಗು ಹೆತ್ತಿದ್ದಕ್ಕೆ ಚುಚ್ಚಿ ಮಾತನಾಡಿದ ಅತ್ತೆಯಿಂದಾಗಿ ಸುಪ್ರಿಯಾ ಅಗರ್ತಲಾದ ವೈದ್ಯಕೀಯ ಕಾಲೇಜಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.
ಗೌತಮನಗರದಲ್ಲಿ ಘಟನೆ ನಡೆದಿದ್ದು, ಅಗರ್ತಲಾದಿಂದ ದಕ್ಷಿಣಕ್ಕೆ 130 ಕಿಲೋ ಮೀಟರ್ ದೂರದಲ್ಲಿ ದಕ್ಷಿಣ ತ್ರಿಪುರಾ ಜಿಲ್ಲೆಯಲ್ಲಿ ಬೆಲೋನಿಯಾ ಉಪವಿಭಾಗದಲ್ಲಿ ಘಟನೆ ನಡೆದಿದೆ. ಮಗು ಹುಟ್ಟಿದಾಗಿನಿಂದಲೂ, ಹೆಣ್ಣು ಮಗು ಕುಟುಂಬಕ್ಕೆ ಅಶುಭ ಎಂದು ಸುಪ್ರಿಯಾಳ ಅತ್ತೆ ದೂಷಿಸುತ್ತಿದ್ದರು ಎಂದು ನೆರೆಹೊರೆಯ ಜನರು ತಿಳಿಸಿದ್ದಾರೆ.