ಕ್ಯಾನ್ಸರ್‌ನಿಂದ ಬೀದಿಗೆ ಬಿದ್ದ ಕುಟುಂಬದ ಬ್ಯಾಂಕ್ ಸಾಲ ತೀರಿಸಿ ಮನೆ ಹಿಂದಿರುಗಿಸಿದ ಕೇಂದ್ರ ಸಚಿವ!

By Chethan KumarFirst Published Sep 16, 2024, 4:00 PM IST
Highlights

ತಾಯಿ, ಮಗಳು, ಮೊಮ್ಮಗಳು ಸೇರಿದಂತೆ ಕುಟುಂಬದ ಬಹುತೇಕರಿಗೆ ಕ್ಯಾನ್ಸರ್. ಚಿಕಿತ್ಸೆಗಾಗಿ ಮಾಡಿದ ಸಾಲ ಕಟ್ಟಲಾಗದೆ ಮನೆ ಬ್ಯಾಂಕ್ ಜಪ್ತಿ ಮಾಡಿತ್ತು. ಕುಟುಂಬ ಬೀದಿಗೆ ಬಿದ್ದಿತ್ತು. ಈ ಮಾಹಿತಿ ತಿಳಿದ ತಕ್ಷಣ ಕೇಂದ್ರ ಸಚಿವ ಸುರೇಶ್ ಗೋಪಿ, ಕುಟುಂಬದ ಬ್ಯಾಂಕ್ ಸಾಲ ತೀರಿಸಿ ಮನೆ ದಾಖಲೆ ಪತ್ರವನ್ನು ಕುಟುಂಬಕ್ಕೆ ನೀಡಿದ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
 

ತಿರುವನಂತಪುರಂ(ಸೆ.16) ತಾಯಿಗೆ ಕ್ಯಾನ್ಸರ್, ಮಗಳು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಇದೀಗ ಮೊಮ್ಮಗಳಿಗೂ ಕ್ಯಾನ್ಸರ್. ಬಡ ಕುಟುಂಬದ ಇದ್ದ ಸಂಪತ್ತು, ಹಣ ಎಲ್ಲವೂ ಚಿಕಿತ್ಸೆಗಾಗಿ ಖರ್ಚಾಗಿದೆ. ಆದರೆ ಆರೋಗ್ಯ ಸುಧಾರಿಸಿಲ್ಲ. ಮೊಮ್ಮಗಳ ಚಿಕಿತ್ಸೆಗೆ ಮನೆಯ ಮೇಲೆ ಸಾಲ ಮಾಡಿದ್ದಾರೆ. ಈ ಸಾಲ ಕಟ್ಟಲು ಸಾಧ್ಯವಾಗದೆ ಬ್ಯಾಂಕ್ ಅಧಿಕಾರಿಗಳು ಮನೆಯನ್ನೇ ಜಪ್ತಿ ಮಾಡಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಸುರೇಶ್ ಗೋಪಿ ಕುಟುಂಬದ ನೆರವಿಗೆ ಧಾವಿಸಿದ್ದಾರೆ. ಕುಟುಂಬ ಮಾಡಿದ್ದ ಬ್ಯಾಂಕ್ ಸಾಲವನ್ನು ತೀರಿಸಿ ಮನೆಯ ದಾಖಲೆ ಪತ್ರಗಳನ್ನು ಕುಟುಂಬಕ್ಕೆ ಹಿಂದಿರುಗಿಸಿದ್ದಾರೆ. ಇಷ್ಟೇ ಅಲ್ಲ ಈ ಕುಟುಂಬದ ಚಿಕಿತ್ಸೆ ಕುರಿತು ಮಾಹಿತಿ ಪಡೆದಿದ್ದಾರೆ.ಚಿಕಿತ್ಸೆ ನೆರವು ನೀಡಲು ಮುಂದಾಗಿದ್ದಾರೆ.

ಆಲಪುಝಾದೆ ಪೆರುಂಬಾಲಂ ಗ್ರಾಮದ ನಿವಾಸಿ ರಾಜಪ್ಪನ್ ಕುಟುಂಬ ಇದೀಗ ಸಚಿವ ಸುರೇಶ್ ಗೋಪಿ ನೆರವಿನಿಂದ ನೆಮ್ಮದಿ ನಿಟ್ಟುಸಿರು ಬಿಡುವಂತಾಗಿದೆ. ರಾಜಪ್ಪನ್ ಪತ್ನಿ ಮಿನಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪುತ್ರಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಇನ್ನು ಮೊಮ್ಮಗಳು ಆರಭಿ ಅಮೃತಾ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಭಿಗೆ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಯ ಅಗತ್ಯವಿದೆ.

Latest Videos

ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ 24 ವರ್ಷದ ಯುವಕ ನಿಫಾ ವೈರಸ್‌ಗೆ ಬಲಿ, ಎಲ್ಲೆಡೆ ಅಲರ್ಟ್!

ಬಡ ಕುಟುಂಬ ಈಗಾಗಲೇ ಸಾಲ ಸೋಲ ಮಾಡಿ ಚಿಕಿತ್ಸೆ ನೀಡಿದೆ. ಮೊಮ್ಮಗಳ ಚಿಕಿತ್ಸೆಗೆ ವಿಪರೀತ ಖರ್ಚುಾಗುತ್ತಿದ್ದ ಕಾರಣ ಮನೆಯನ್ನೇ ಅಡವಿಟ್ಟು ಸಾಲ ಪಡೆದಿದ್ದಾರೆ. ಈ ಸಾಲ ಕಟ್ಟಲು ಸಾಧ್ಯವಾಗದೆ ಬ್ಯಾಂಕ್ ಅಧಿಕಾರಿಗಳು ಮನೆ ಜಪ್ತಿ ಮಾಡಿದ್ದರು. ಇದರಿಂದ ಕುಟುಂಬ ಬೀದಿ ಬಿದ್ದಿತ್ತು. ಮಾಹಿತಿ ಸಿಕ್ಕ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಕೇಂದ್ರ ಸಚಿವ ಸುರೇಶ್ ಗೋಪಿ ನೆರವಿನ ಅಭಯ ನೀಡಿದ್ದಾರೆ. ಇದೇ ವೇಳೆ ಬ್ಯಾಂಕ್‌ನಿಂದ ಪಡೆದ 1,70,000 ರೂಪಾಯಿ ಸಾಲ ಹಾಗೂ ಅದರ ಬಡ್ಡಿ ತೀರಿಸಿ ಬ್ಯಾಂಕ್‌ನಲ್ಲಿದ್ದ ಮನೆಯ ದಾಖಲೆ ಪತ್ರಗಲನ್ನು ಕುಟುಂಬಕ್ಕೆ ಹಿಂದಿರುಗಿಸಿದ್ದಾರೆ.

ಇದೇ ವೇಳೆ ಬೋನ್ ಮ್ಯಾರೋ ಚಿಕತ್ಸೆ ಅಗತ್ಯವಿರುವ ಬಾಲಕಿಗೆ ಚಿಕಿತ್ಸೆಗಾಗಿ ಸುರೇಶ್ ಗೋಪಿ ಅಧಿಕಾರಿಳು ಹಾಗೂ ವೆಲ್ಲೂರಿನ ವೈದ್ಯ ಡಾ. ವಿಕ್ರಮ್ ಮ್ಯಾಥ್ಯೂಸ್ ಜೊತೆ ಮಾತನಾಡಿದ್ದಾರೆ. ಡೋನರ್ ಸಿಕ್ಕ ಬೆನ್ನಲ್ಲೇ ಬಾಲಕಿಯ ಚಿಕಿತ್ಸೆ ನಡಯಲಿದೆ. ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಮೊದಲೇ ಕುಟುಂಬ ಆರೋಗ್ಯ ಸಂಕಷ್ಟಕ್ಕೆ ಸಿಲುಕಿದೆ. ಹೀಗಿರುವಾಗ ನೆಮ್ಮದಿಯಿಂದ ಮಲಗಲ, ವಿಶ್ರಾಂತಿ ಪಡೆಯವ ಅಗತ್ಯವಿದೆ. ಆದರೆ ಇದ್ದ ಮನೆ ಜಪ್ತಿಯಾಗಿದೆ ಎಂದರೆ ಇಡೀ ಕುಟುಂಬ ಪರಿಸ್ಥಿತಿ ಊಹಿಸಿಕೊಳ್ಳಿ. ಇದೀಗ ಕುಟುಂಬಕ್ಕೆ ಎಲ್ಲಾ ನೆರವು ನೀಡುತ್ತೇನೆ ಎಂದು ಸುರೇಶ್ ಗೋಪಿ ಹೇಳಿದ್ದಾರೆ.

ಹಬ್ಬದ ತಿನ್ನುವ ಸ್ಪರ್ಧೆ ಗೆಲ್ಲಲು ಹೋದ ವ್ಯಕ್ತಿ 3 ಇಡ್ಲಿ ಗಬಕ್ಕನೆ ನುಂಗಿ ಸಾವು!

ಕೇಂದ್ರ ಬಿಜೆಪಿ ಸಚಿವ ಸುರೇಶ್ ಗೋಪಿ ಸಹಾಯಹಸ್ತ ಚಾಚುವುದರಲ್ಲಿ, ಅಗತ್ಯಬಿದ್ದವರಿಗೆ ನೆರವು ನೀಡುವದರಲ್ಲಿ ಎತ್ತಿದ ಕೈ. ಈಗಾಗಲೇ ತಮ್ಮ ಸ್ವಂತ ಹಣದಿಂದ ಹಲವು ಕುಟುಂಗಳಿಗೆ ನೆರವಾಗಿದ್ದಾರೆ. ದಾಖಲೆ ಪತ್ರಗಳಿಲ್ಲದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿರುವ ಹಲವು ಕುಟುಂಬಗಳಿಗೆ ಸುರೇಶ್ ಗೋಪಿ ಶೌಚಾಲಯ ಸೇರಿದಂತೆ ಹಲವು ವ್ಯವಸ್ಥೆಗಳನ್ನು ತಮ್ಮ ಸ್ವಂತ ಖರ್ಚಿನಿಂದ ಕಲ್ಪಿಸಿಕೊಟ್ಟಿದ್ದಾರೆ. 
 

click me!