ಹಿಂದೂಗಳು ತಮ್ಮ ಧರ್ಮದವರೊಂದಿಗೆ ಮಾತ್ರ ಆಸ್ತಿ ವ್ಯವಹಾರದಲ್ಲಿ ತೊಡಗಬೇಕು’ ಎಂದು ಬಿಜೆಪಿ ಶಾಸಕ ನಿತೇಶ್ ರಾಣೆ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ.
ಮುಂಬೈ (ಸೆ.16): ‘ಹಿಂದೂಗಳು ತಮ್ಮ ಧರ್ಮದವರೊಂದಿಗೆ ಮಾತ್ರ ಆಸ್ತಿ ವ್ಯವಹಾರದಲ್ಲಿ ತೊಡಗಬೇಕು’ ಎಂದು ಬಿಜೆಪಿ ಶಾಸಕ ನಿತೇಶ್ ರಾಣೆ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ.
ಮಹಾರಾಷ್ಟ್ರದ ಉಲ್ವೆಯಲ್ಲಿ ಗಣೇಶ ಪಂಡಾಲ್ ಪೂಜೆಯಲ್ಲಿ ಭಾಗವಹಿಸಿದ ರಾಣೆ, ‘ಒಂದು ಧರ್ಮದ ಗ್ರಂಥಗಳು ಮತಾಂತರ ಅಥವ ಹಿಂದೂಗಳ ಹತ್ಯೆಯನ್ನು ಪ್ರತಿಪಾದಿಸುತ್ತವೆ. ಹಾಗಾಗಿ ಆಸ್ತಿ ವ್ಯವಹಾರ ನಡೆಸುವ ಮೊದಲು ಆಧಾರ್ ಕಾರ್ಡ್ ಪರಿಶೀಲಿಸಬೇಕು ಹಾಗೂ ‘ಹಿಂದೂ ಅಲ್ಲದವರೊಂದಿಗೆ ಯಾವುದೇ ವ್ಯವಹಾರ ನಡೆಸುವುದಿಲ್ಲ’ ಎಂದು ಪ್ರಮಾಣ ಸ್ವೀಕರಿಸಬೇಕು’ ಎಂದು ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೆ ಆಗ್ರಹಿಸಿದರು.
undefined
ದೇಶದ ಮೊದಲ 2 ನಗರಗಳ ನಡುವೆ ಸಂಪರ್ಕದ ವಂದೇ ಮೆಟ್ರೋ ರೈಲು ಸೇವೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ
ಎಐಎಂಐಎಂ ಕಿಡಿ: ಶಾಸಕರ ಹೇಳಿಕೆ ದೇಶದ ಜಾತ್ಯತೀತತೆ ಹಾಗೂ ಸಂವಿಧಾನದ ವಿರುದ್ಧವಾಗಿದೆ ಎಂದು ಆರೋಪಿಸಿ ಎಐಎಂಐಎಂ ಪ್ರತಿಭಟನೆಗಿಳಿದಿದೆ.
ಕೆಲ ದಿನಗಳ ಹಿಂದೆ ಸಾಧು ರಾಮಗಿರಿ ಮಹಾರಾಜ್ ವಿರುದ್ಧ ಮಾತನಾಡಿದರೆ ಮಸೀದಿಗೆ ನುಗ್ಗಿ ಮುಸ್ಲಿಮರಿಗೆ ಹೊಡೆಯುವುದಾಗಿ ಹೇಳಿದ್ದ ರಾಣೆ ಹೇಳಿದ್ದರು.