ಕೇಂದ್ರ ಸಚಿವರನ್ನು ಟಾರ್ಗೆಟ್ ಮಾಡಿದ ಪಾಕಿಸ್ತಾನದ ಐಎಸ್‌ಐ: ಕೇಂದ್ರ ಗೃಹ ಇಲಾಖೆಯಿಂದ ಭದ್ರತೆ ಹೆಚ್ಚಳ

Published : Dec 15, 2025, 07:36 AM IST
Z  security

ಸಾರಾಂಶ

ಚೌಹಾಣ್‌ ಅವರನ್ನು ಪಾಕ್‌ನ ಐಎಸ್‌ಐ ಗುರಿ ಮಾಡಿದೆ ಎಂಬ ಮಾಹಿತಿ ಲಭಿಸಿದ ತಕ್ಷಣವೇ ಕೇಂದ್ರ ಗೃಹ ಇಲಾಖೆಯು ಕೂಡಲೇ ಮಧ್ಯ ಪ್ರದೇಶ ಡಿಜಿಪಿ ಮತ್ತು ದೆಹಲಿಯ ವಿಶೇಷ ಕಮಿಷನರ್‌ರಿಗೆ ಪತ್ರ ಬರೆದು ಭದ್ರತೆ ಹೆಚ್ಚಿಸುವಂತೆ ಆದೇಶಿಸಿದೆ.

ನವದೆಹಲಿ/ಭೋಪಾಲ್‌: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಪಾಕಿಸ್ತಾನದ ಐಎಸ್‌ಐ ಗುರಿಯಾಗಿಸಿದೆ ಎಂದು ಗುಪ್ತಚರ ಮಾಹಿತಿ ಬಂದಿದೆ. ಇದರ ಬೆನ್ನಲ್ಲೇ ದೆಹಲಿ ಮತ್ತು ಭೋಪಾಲ್‌ನಲ್ಲಿರುವ ಸಚಿವರ ನಿವಾಸಗಳಿಗೆ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದೆ.

ಜೊತೆಗೆ ಈಗಾಗಲೇ ‘ಝಡ್‌’ ಭದ್ರತೆ ಹೊಂದಿರುವ ಚೌಹಾಣ್‌ ಅವರಿಗೆ ಮತ್ತಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಚೌಹಾಣ್‌ ಅವರನ್ನು ಪಾಕ್‌ನ ಐಎಸ್‌ಐ ಗುರಿ ಮಾಡಿದೆ ಎಂಬ ಮಾಹಿತಿ ಲಭಿಸಿದ ತಕ್ಷಣವೇ ಕೇಂದ್ರ ಗೃಹ ಇಲಾಖೆಯು ಕೂಡಲೇ ಮಧ್ಯ ಪ್ರದೇಶ ಡಿಜಿಪಿ ಮತ್ತು ದೆಹಲಿಯ ವಿಶೇಷ ಕಮಿಷನರ್‌ರಿಗೆ ಪತ್ರ ಬರೆದು ಭದ್ರತೆ ಹೆಚ್ಚಿಸುವಂತೆ ಆದೇಶಿಸಿದೆ. ಇದರ ಬೆನ್ನಲ್ಲೇ ಮತ್ತಷ್ಟು ಬ್ಯಾರಿಕೇಡ್‌ ಹಾಕಿ ಸಂದರ್ಶಕರ ಪರಿಶೀಲನೆ ನಡೆಸಲಾಗುತ್ತಿದೆ.

ರಾಹುಲ್‌ ಗಾಂಧಿ ಎದುರು ದೊಡ್ಡ ದೊಡ್ಡವರಿಗೂ ಜ್ವರ ಬರತ್ತೆ: ಶಾಗೆ ಕೈ ಟಾಂಗ್‌

ನವದೆಹಲಿ: ‘ರಾಹುಲ್‌ ಗಾಂಧಿ ಎದುರು ನಿಂತುಕೊಂಡರೆ ದೊಡ್ಡದೊಡ್ಡವರಿಗೂ ಜ್ವರ ಬರುತ್ತದೆ’ ಎಂದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ.

ಮತಗಳವಿನ ಬಗ್ಗೆ ಲೋಕಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಶಾ ಅವರ ಕೈಗಳು ನಡುಗುತ್ತಿದ್ದವು, ಮಾತು ತೊದಲುತ್ತಿತ್ತು ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದರು. ಆದರೆ ಆ ನಡುಕಕ್ಕೆ ಕಾರಣ ಶಾ ಅವರಿಗಿದ್ದ 102 ಡಿಗ್ರಿ ಜ್ವರ. ಅದಕ್ಕಾಗಿ ಅವರು ಔಷಧಿಯನ್ನು ತೆಗೆದುಕೊಂಡು ಸದನಕ್ಕೆ ಬಂದಿದ್ದರು ಎಂದು ಬಿಜೆಪಿ ಮೂಲಗಳು ತಿಳಿಸಿದ್ದವು.ಇದಕ್ಕೆ ಎಕ್ಸ್‌ನಲ್ಲಿ ತಿರುಗೇಟು ನೀಡಿರುವ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನೇತ್‌, ‘ರಾಹುಲ್‌ ಎದುರು ಎಷ್ಟೇ ದೊಡ್ಡವರು ನಿಂತರೂ ಜ್ವರ ಬಂದುಬಿಡುತ್ತದೆ. ಅದರಲ್ಲೂ ಮತಗಳವು ಮಾಡಿ, ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಕೊಂಡು ಆ ಬಗ್ಗೆ ಚರ್ಚಿಸಬೇಕು ಎಂದರೆ ಜ್ವರ ಬರುವುದು ಸಹಜ’ ಎಂದಿದ್ದಾರೆ.

ಇದನ್ನೂ ಓದಿ: ಗೋವಾ ದುರಂತದಿಂದ ಎಚ್ಚೆತ್ತ ಪೊಲೀಸ್, ಹೊಸವರ್ಷಕ್ಕೆ ಕ್ಲಬ್, ಬಾರ್, ಪಬ್‌ಗಳಲ್ಲಿ ಪಟಾಕಿ ಆಚರಣೆ ಬ್ಯಾನ್

ಇದನ್ನೂ ಓದಿ: ಮತಚೋರಿ ಬಗ್ಗೆ ದಿಲ್ಲೀಲಿ ಕೈ ನಾಯಕರ ರಣಕಹಳೆ: ಬಿಜೆಪಿ ವಿರುದ್ಧ ಖರ್ಗೆ, ರಾಗಾ, ಪ್ರಿಯಾಂಕಾ ಗುಡುಗು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೇಂದ್ರ ಸಚಿವರನ್ನು ಟಾರ್ಗೆಟ್ ಮಾಡಿದ ಪಾಕಿಸ್ತಾನದ ಐಎಸ್‌ಐ - ಕೇಂದ್ರ ಗೃಹ ಇಲಾಖೆಯಿಂದ ಭದ್ರತೆ ಹೆಚ್ಚಳ
ಮತಚೋರಿ ಬಗ್ಗೆ ದಿಲ್ಲೀಲಿ ಕೈ ನಾಯಕರ ರಣಕಹಳೆ: ಬಿಜೆಪಿ ವಿರುದ್ಧ ಖರ್ಗೆ, ರಾಗಾ, ಪ್ರಿಯಾಂಕಾ ಗುಡುಗು