ಕೃಷಿ ಕಾಯಿದೆ ವಿರೋಧಿಸಿ ರೈತರ ಹೋರಾಟ/ ರೈತರ ಪ್ರತಿಭಟನೆ ಹಿಂದೆ ಪಾಕಿಸ್ತಾನ, ಚೀನಾ/ ಕೇಂದ್ರ ಸಚಿವರ ಹೇಳೀಕೆಗೆ ವ್ಯಾಪಕ ವಿರೋಧ/ ರೈತರನ್ನು ದೇಶದ್ರೋಹಿಗಳು ಎಂದು ಕರೆಯುತ್ತೀರಾ
ನವದೆಹಲಿ (ಡಿ. 10) ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೂರು ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ರೈತರು ನಡೆಸುತ್ತಿರುವ ಪ್ರತಿಭಟನೆಯ ಹಿಂದೆ ಚೀನಾ ಮತ್ತು ಪಾಕಿಸ್ತಾನಗಳ ಕೈವಾಡವಿದೆ ಎಂದು ಕೇಂದ್ರ ಸಚಿವ ರೌಸಾಹೇಬ್ ದಾನ್ವೆ ವಿವಾದಾತ್ಮಕ ಹೇಳಿಕೆ ನೀಡಿದ್ದು ರೈತ ಸಂಘಟನೆಗಳು ಖಂಡಿಸಿವೆ.
undefined
ವ್ಯಾಪಕ ಆಕ್ರೋಶ ವ್ಯಕ್ತಪಡಿಸಿರುವ ಡೆಲ್ಲಿ ಸಿಖ್ ಗುರುದ್ವಾರಾ ಮ್ಯಾನೇಜ್ ಮೆಂಟ್ ಕಮೀಟಿ ನೀವು ರೈತರನ್ನು ದೇಶ ವಿರೋಧಿಗಳು ಎಂದು ಕರೆಯುತ್ತೀರಾ? ಎಂದು ಪ್ರಶ್ನೆ ಮಾಡಿದೆ.
ರೈತರು ರಸ್ತೆ ಮಧ್ಯೆಯೇ ಕುಳಿತು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ನ್ಯಾಯ ಕೊಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ರೈತ ಕುಟುಂಬಳು ಇವೆ. ರೈತರಿಗೆ ರಾಷ್ಟ್ರ ವಿರೋಧಿ ಪಟ್ಟ ಕಟ್ಟಲು ಬರಬೇಡಿ ಎಂದು ಸಂಘಟನೆಯ ಅಧ್ಯಕ್ಷ ಎಸ್. ಮಜಿಂದರ್ ಸಿಂಗ್ ಸಿರ್ಸಾ ಕೆಂಡ ಕಾರಿದ್ದಾರೆ.
ಯಾರಪ್ಪನ ದುಡ್ಡಲ್ಲಿ ಸಾಲ ಮನ್ನಾ ಮಾಡಿದ್ರಿ?
ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಬದ್ನಾಪುರ ತಾಲೂಕಿನ ಕೋಲ್ಟೆ ತಕ್ಲಿಯಲ್ಲಿ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಸಚಿವರು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯ ಬಗ್ಗೆ ಮುಸ್ಲಿಮರನ್ನು ಈ ಹಿಂದೆ ದಾರಿ ತಪ್ಪಿಸಲಾಗಿತ್ತು. ಅದು ಅವರ ಲೆಕ್ಕದಲ್ಲಿ ಯಶಸ್ವಿಯಾಗದ ಕಾರಣ ಈಗ ರೈತರ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು.
ಈ ಆಂದೋಲನವು ರೈತರದ್ದಲ್ಲ. ಚೀನಾ ಮತ್ತು ಪಾಕಿಸ್ತಾನಗಳು ಈ ಪ್ರತಿಭಟನೆಯ ಹಿಂದಿವೆ. ದೇಶಾದ್ಯಂತ ನಡೆಯುತ್ತಿರುವ ರೈತ ಪ್ರತಿಭಟನೆ ಪಾಕಿಸ್ತಾನಕ್ಕೆ ಉತ್ತೇಜನ ನೀಡುತ್ತಿದೆ . ಪಾಲ್ಗೊಂಡವರು ದೇಶ ವಿರೋಧಿಗಳಾಗುತ್ತಾರೆ ಎಂದು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.