
ದೆಹಲಿ(ಡಿ.10): ಸಿಂಧೂ ಕಣಿವೆ ನಾಗರೀಕರಿತಯೆ ಪ್ರದೇಶದಲ್ಲಿ ದನ ಹಾಗೂ ಎಮ್ಮೆ ಮಾಂಸಗಳನ್ನು ಬಳಸುತ್ತಿದ್ದರು ಅನ್ನೋದಕ್ಕೆ ಪ್ರಮುಖ ಸಾಕ್ಷಿ ದೊರೆತಿದೆ. 4,600 ವರ್ಷಗಳ ಹಿಂದಿನ ಸಿಂಧೂ ಕಣಿವೆ ನಾಗರೀಕತೆಯು ಬಳಸುತ್ತಿದ್ದ ದನ ಹಾಗೂ, ಎಮ್ಮೆ ಸೇರಿದಂತೆ ಪ್ರಾಣಿಗಳ ಮಾಂಸಗಳ ಅವಷೇಷಗಳು ಪಿಂಗಾಣಿ ಪಾತ್ರೆಯಲ್ಲಿ ಪತ್ತೆಯಾಗಿದೆ. ಸಿಂಧು ನಾಗರೀತೆಯಲ್ಲಿ ಬಳಸಿದಿ ಈ ಆವಶೇಷಗಳು ಪತ್ತೆಯಾಗಿರುವುದು ಈಗಿನ ಹರ್ಯಾಣ ಮತ್ತು ಉತ್ತರ ಪ್ರೇದಶದಲ್ಲಿ.
ಸಿಂಧೂ ನಾಗರಿಕತೆ ಜನರ ನಿಖರ ಮುಖ ರಚನೆ!
ಕೇಂಬ್ರಿಡ್ಡ್ ವಿಶ್ವವಿದ್ಯಾಲಯ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯ ನಡೆಸಿ Two rains( ಟು ರೈನ್ಸ್) ಪ್ರಾಜೆಕ್ಟ್ ಅಧ್ಯಯನದ ವೇಳೆ ಪತ್ತೆ ಹಚ್ಚಲಾದ ಈ ಪ್ರಾಣಿಗಳ ಮಾಂಸ ಬಳಕೆ ಕುರಿತು ಜರ್ನಲ್ ಆಫ್ ಆರ್ಕಿಯಾಲಜಿಕಲ್ ಸೈನ್ಸ್ ಲೇಖನದಲ್ಲಿ ಈ ಕುರಿತು ಅಧ್ಯಯನ ತಂಡ ಹೇಳಿದೆ.
ಉತ್ಖನನ ಹಾಗೂ ಅಧ್ಯಯನದ ವೇಳೆ ಶೇಕಡಾ 50 ರಿಂದ 60 ರಷ್ಟು ದೇಶಿ ಪ್ರಾಣಿಗಳ ಮೂಳೆಗಳು ಪತ್ತೆಯಾಗಿದೆ. ಸಿಂಧೂ ನಾಗರೀಕತೆಯಲ್ಲಿ ಬಳಸೂತ್ತಿದ್ದ ಸೆರಾಮಿಕ್ ಪಾತ್ರೆಯಲ್ಲಿ ಈ ಮೂಳೆಗಳು ಪತ್ತೆಯಾಗಿದೆ. ಹೆಚ್ಚಾಗಿ ದನ ಹಾಗೂ ಎಮ್ಮೆ ಮೂಳೆಗಳು ಪಾತ್ರೆಗಳಲ್ಲಿ ಕಂಡು ಬಂದಿದೆ. ಇದು ಸಿಂಧೂ ನಾಗರೀಕರತೆ ಜನ ದನ ಹಾಗೂ ಎಮ್ಮೆ ಮಾಂಸವನ್ನು ಪ್ರಮುಖ ಆಹಾರವಾಗಿ ಸೇವಿಸುತ್ತಿದ್ದರೂ ಅನ್ನೋ ಸೂಚನೆ ನೀಡಿದೆ.
ಇನ್ನು ಕುರಿ ಹಾಗೂ ಆಡಿನ ಮಾಂಸದ ಮೂಳೆಗಳು ಪತ್ತೆಯಾಗಿದೆ. ಆರ್ಕಿಯಾಲಾಜಿಕಲ್ ವಿಭಾಗದ ನೇತೃತ್ವ ವಹಿಸಿದ ಅಕ್ಷಯೆತಾ ಸೂರ್ಯನಾರಾಯಣ್ ಈ ಕುರಿತು ವಿವರಣೆ ನೀಡಿದ್ದಾರೆ. ಪ್ರಾಣಿಗಳ ಮಾಂಸಗಳ ಬಳಕೆ ನಮ್ಮ ಅಧ್ಯಯನಕ್ಕೆ ಹೊಸ ತಿರುವು ನೀಡಿದೆ ಎಂದಿದ್ದಾರೆ.
ಸೆರಾಮಿಕ್ ಪಾತ್ರೆಗಳಲ್ಲಿ ಮಾಂಸದ ಕೊಬ್ಬು ಹಾಗೂ ಎಣ್ಣೆಯನ್ನು ಹೊರತೆಗೆಯುತ್ತಿದ್ದರು. ಮಾಂಸಗಳನ್ನು ಆಹಾರವಾಗಿ ಬಳಸುತ್ತಿದ್ದರು ಅನ್ನೋದಕ್ಕೆ ಇದು ಪ್ರಮುಖ ಸಾಕ್ಷಿಯಾಗಿದೆ ಎಂದಿದ್ದಾರೆ. ಈ ಹಿಂದಿನ ಹಲವು ಉತ್ಖನನಗಳು, ಅಧ್ಯಯನದ ವೇಳೆ ಪಿಂಗಾಣಿ ಪಾತ್ರೆಗಳು, ಮಣ್ಣಿನ ಪಾತ್ರೆಗಳ ಅವಶೇಗಳಲ್ಲಿ ಪತ್ತೆಯಾಗಿದೆ. ಆದರೆ ಮಾಂಸದ ಅವಶೇಷಗಳು, ಮೂಳೆಗಳು ಪತ್ತೆಯಾಗಿರುವುದು ವಿರಳ ಎಂದು ಅಕ್ಷಯೆತಾ ಸೂರ್ಯನಾರಾಯಣ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ