ಮಂಗಳೂರು ರೈಲ್ವೆ ವಿಭಾಗ ನೈಋತ್ಯ ರೈಲ್ವೆ ವ್ಯಾಪ್ತಿಗೆ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಹೇಳಿಕೆ

Kannadaprabha News   | Kannada Prabha
Published : Sep 22, 2026, 09:00 AM IST
Mangaluru railway division

ಸಾರಾಂಶ

ಕಾರ್ಯಾಚರಣೆಯ ಸಮಸ್ಯೆಗಳನ್ನು ಬಗೆಹರಿಸಲು ಮಂಗಳೂರು ರೈಲ್ವೆ ಪ್ರದೇಶವನ್ನು ಸಂಪೂರ್ಣವಾಗಿ ನೈಋತ್ಯ ರೈಲ್ವೆ ವ್ಯಾಪ್ತಿಗೆ ತರಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ. ಕೇರಳ ಸಂಸದರ ವಿರೋಧದ ನಡುವೆಯೂ, ಅನಗತ್ಯ ವಿಳಂಬ ತಪ್ಪಿಸಲು ಈ ನಿರ್ಧಾರ ಎಂದು ಅವರು ತಿಳಿಸಿದ್ದಾರೆ.

ಪಿಟಿಐ ನವದೆಹಲಿ (ಸೆ.22): ಕಾರ್ಯಾಚರಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಮಂಗಳೂರು ರೈಲ್ವೆ ಪ್ರದೇಶದ ಸಂಪೂರ್ಣ ಭಾಗವನ್ನು ನೈಋತ್ಯ ರೈಲ್ವೆ ವ್ಯಾಪ್ತಿಗೆ ತರುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಸ್ಪಷ್ಟಪಡಿಸಿದರು.

ಮಂಗಳೂರು ವಿಭಾಗ ನೈಋತ್ಯ ರೈಲ್ವೆಗೆ ಸೇರ್ಪಡೆ

ಮಂಗಳೂರು ವಿಭಾಗವನ್ನು ನೈಋತ್ವ ರೈಲ್ವೆಗೆ ಸೇರಿಸುವ ನಿರ್ಧಾರಕ್ಕೆ ನೆರೆಯ ಕೇರಳದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ, ತಮ್ಮನ್ನು ಭೇಟಿ ಮಾಡಿದ ಅಲ್ಲಿನ ಸಂಸದರನ್ನು ಉದ್ದೇಶಿಸಿ ವೈಷ್ಣವ್‌ ಈ ಹೇಳಿಕೆ ನೀಡಿದರು.

‘ಮಂಗಳೂರು ರೈಲ್ವೆ ಪ್ರದೇಶವನ್ನು ಹಿಂದೆ 3 ವಿಭಿನ್ನ ವಲಯಗಳಾಗಿ ವಿಂಗಡಿಸಲಾಗಿತ್ತು, ಇದರಿಂದಾಗಿ ಗಂಭೀರ ಕಾರ್ಯಾಚರಣೆಯ ಸಮಸ್ಯೆಗಳು ಉಂಟಾಗಿದ್ದವು. ಮಂಗಳೂರನ್ನು ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿಯೇ ಉಳಿಸಿಕೊಳ್ಳುವ ನಿರ್ಧಾರವು ಈ ಕಾರ್ಯಾಚರಣೆಯ ಸಮಸ್ಯೆಗಳನ್ನು ಬಗೆಹರಿಸಲಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ, ‘ಮಂಗಳೂರನ್ನು ನೈಋತ್ಯ ರೈಲ್ವೆ ವಲಯಕ್ಕೆ ವರ್ಗಾಯಿಸುವ ಹಾಗೂ ರಾಜ್ಯದಲ್ಲಿ ರೈಲು ಜಾಲದ ಅಭಿವೃದ್ಧಿಯ ಕುರಿತು ಚರ್ಚಿಸಲು ಕೇರಳದ ಸಂಸದರನ್ನು ಭೇಟಿಯಾಗಿದ್ದೇನೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ರೈಲ್ವೆ ಸಚಿವಾಲಯ ಪ್ರಕಟಣೆ:

ಮಂಗಳೂರು ರೈಲ್ವೆ ಪ್ರದೇಶವನ್ನು 3 ವಿವಿಧ ರೈಲ್ವೆ ವಲಯಗಳಾಗಿ ವಿಭಜಿಸಿರುವುದರಿಂದ ಉಂಟಾಗಿರುವ ಕಾರ್ಯಾಚರಣೆಯ ಸವಾಲುಗಳ ಕುರಿತು ರೈಲ್ವೆ ಸಚಿವಾಲಯ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ.

‘ಗೋವಾ ಅಥವಾ ಹಾಸನ ಭಾಗದಿಂದ ಮಂಗಳೂರಿಗೆ ಬರುವ ರೈಲು ನಿಲ್ದಾಣವನ್ನು ತಲುಪುವ ಮುನ್ನ 3 ಕಾರ್ಯಾಚರಣಾ ವಲಯಗಳು ಮತ್ತು ಬದಲಾವಣೆ ಕೇಂದ್ರಗಳನ್ನು ದಾಟಬೇಕಿತ್ತು. ಇದರಿಂದಾಗಿ ಅನಗತ್ಯ ವಿಳಂಬ ಹಾಗೂ ದಟ್ಟಣೆ ಉಂಟಾಗುತ್ತಿತ್ತು. ಹೀಗಾಗಿ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸಂಪೂರ್ಣ ಮಂಗಳೂರು ಪ್ರದೇಶವನ್ನು ನೈಋತ್ಯ ರೈಲ್ವೆ ಎಂಬ ಒಂದೇ ವಲಯದ ಅಡಿಯಲ್ಲಿ ತರುತ್ತಿದ್ದೇವೆ ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈಲು 8 ತಾಸು ತಡ, ಪ್ರಯಾಣಿಕಗೆ ₹35,000 ಪರಿಹಾರಕ್ಕೆ ಆದೇಶ, ತಡ ಏಕೆ ಎಂಬ ಕಾರಣ ನೀಡಲು ವಿಫಲವಾದ ರೈಲ್ವೆ ಇಲಾಖೆ
ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಮಾಡೋಕೆ ಹೋಗಿ ತಾನೇ ಸಿಕ್ಕಿಬಿದ್ದ ಪೂಜಾ; ₹20 ಲಕ್ಷಕ್ಕೆ ಬೇಡಿಕೆಯಿಟ್ಟು ಲಾಕ್!