ಕೊನೆಗೂ ಸಿನಿಮಾ ಮಂದಿಗೆ ಗುಡ್ ನ್ಯೂಸ್...ಫುಲ್ ಹೌಸ್  ಬೋರ್ಡ್!

By Suvarna NewsFirst Published Jan 27, 2021, 9:42 PM IST
Highlights

ಕೇಂದ್ರ ಗೃಹ ಸಚಿವಾಲಯದಿಂದ ಹೊಸ ಮಾರ್ಗಸೂಚಿ / ಸಿನಿಮಾ ಪ್ರೇಕ್ಷಕರಿಗೆ ಕೇಂದ್ರ ಸರ್ಕಾರದಿಂದ ಗುಡ್​​ ನ್ಯೂಸ್ / ಈ ಮೊದಲು ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವಿತ್ತು / ಇದೀಗ ಥಿಯೇಟರ್ ಭರ್ತಿಗೆ ಕೇಂದ್ರ ಸರ್ಕಾರ ಅನುಮತಿ / ಫ್ರೆಬ್ರವರಿ 1ರಿಂದ ಹೊಸ ಮಾರ್ಗಸೂಚಿ ಅನ್ವಯ

ನವದೆಹಲಿ (ಜ.  27) ಕೊರೋನಾ ಪ್ರಕರಣಗಳು ಒಂದು ಹಂತದ ನಿಯಂತ್ರಣಕ್ಕೆ ಬಂದಿರುವ ಕಾರಣ ಕೇಂದ್ರ ಸರ್ಕಾರ ಮತ್ತೊಂದು ಮಾರ್ಗಸೂಚಿ ಹೊರಡಿಸಿದೆ.  ಸಿನಿಮಾ ಮಂದಿರದಲ್ಲಿ ಹೆಚ್ಚುವರಿ ಪ್ರೇಕ್ಷಕರಿಗೆ ಇನ್ನು ಮುಂದೆ ಅವಕಾಶ ಲಭ್ಯವಾಗಲಿದೆ.

ಕೇಂದ್ರ ಸರ್ಕಾರ ಹೊಸ ನಿಯಮಾವಳಿ ಬಿಡುಗಡೆ ಮಾಡಿದ್ದು ಕ್ರೀಡೆ, ಶಿಕ್ಷಣ, ಧಾರ್ಮಿಕ ಮತ್ತು ಸಿನಿಮಾ ವಿಭಾಗದಲ್ಲಿ ಕೆಲ ವಿನಾಯಿತಿ ಘೋಷಣೆ ಮಾಡಿದೆ. ಶೇ.  50  ಇದ್ದ ಪ್ರೇಕ್ಷಕರ ಸ್ಥಾನ ಹೆಚ್ಚಳ ಮಾಡಲು ಒಪ್ಪಿಗೆ ನೀಡಿದೆ.

ಕೊರೋನಾ ಮಾಯೆ; ಬೆಳಕು  ಕಾಣದೇ ಶತದಿನ ಕಂಡ ಚಿತ್ರಮಂದಿರಗಳು

ಈಜುಕೋಳ, ಪ್ರದರ್ಶನ ಕೇಂದ್ರಗಳಿಗೂ ಸಡಿಲಿಕೆ ನೀಡಲಾಗಿದೆ.   ಉಳಿದ ಕೊರೋನಾ ನಿಯಮಾವಳಿ ಪಾಲಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ .  ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಕೆಲ ರಾಜ್ಯಗಳು ಶೇ.  100 ಸೀಟು  ಭರ್ತಿಗೆ ಮೊದಲೆ ಅವಕಾಶ ನೀಡಿದ್ದವು

 

click me!