ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಿ ಮತ್ತೆ ವಾಪಸ್ಸು ಪಡೆದ ಮನೆ ಅಳಿಯ

By Suvarna NewsFirst Published Jan 27, 2021, 8:09 PM IST
Highlights

ಪ್ರಿಯಾಂಕ ಗಾಂಧಿ ಪತಿ ರಾಬರ್ಟ್ ವಾದ್ರಾ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ದೆಹಲಿ ರೈತ ಗಲಭೆ ಕುರಿತು ರಾಬರ್ಟ್ ವಾದ್ರಾ ಟ್ವಿಟರ್‌ ಪೋಸ್ಟ್ ಮಾಡಿದ್ದಾರೆ. ಆದರೆ ಈ ಪೋಸ್ಟ್‌ನಲ್ಲಿ ವಾದ್ರಾ ಬಹುದೊಡ್ಡ ತಪ್ಪು ಮಾಡಿದ್ದಾರೆ. 
 

ನವದೆಹಲಿ(ಜ.27): ರೈತರ ಟ್ರಾಕ್ಟರ್  ರ್ಯಾಲಿ ಹಿಂಸಾ ರೂಪ ಪಡೆದು ಭಾರಿ ನಷ್ಟ ಸಂಭವಿಸಿದೆ.  ಕೆಂಪು ಕೋಟೆ ಮೇಲೆ ದಾಳಿ, ರಾಷ್ಟ್ರಧ್ವಜಕ್ಕೆ ಅವಮಾನ, 300ಕ್ಕೂ ಹೆಚ್ಚು ಪೊಲೀಸರಿಗೆ ಗಾಯ, ಸಾರ್ವಜನಿಕ ವಾಹನ ಜಖಂ ಸೇರಿದಂತೆ ರೈತರ ಹೆಸರಿನಲ್ಲಿ ನಡೆದ ಗಲಭೆ ದೇಶದ ಮಾನ ಹರಾಜು ಹಾಕಿದೆ. ರಾಬರ್ಟ್ ವಾದ್ರ ಇದೀಗ ಹೊಸ ವಿವಾದ ಸೃಷ್ಟಿಸಿದ್ದಾರೆ.

ನಾನು ಸಂಸತ್‌ನಲ್ಲಿರಬೇಕಿತ್ತು' ರಾಜಕಾರಣಕ್ಕೆ ಬರುವ ಸೂಚನೆ  ನೀಡಿದ ಸೋನಿಯಾ ಅಳಿಯ!

ದೆಹಲಿ ಹೊತ್ತಿ ಉರಿದ ಬೆನ್ನಲ್ಲೇ ದೇಶದ ಮುಕುಟ ಮಣಿಯಾಗಿರುವ ಕಾಶ್ಮೀರವನ್ನು ರಾಬರ್ಟ್ ವಾದ್ರ ಪಾಕಿಸ್ತಾನಕ್ಕೆ ನೀಡಿದ್ದಾರೆ. ದೆಹಲಿ ಗಲಭೆ ಕುರಿತು ರಾಬರ್ಟ್ ವಾದ್ರಾ ಕೇಸರಿ, ಬಿಳಿ, ಹಸಿರು ಬಣ್ಣದ ದೇಶದ ಭೂಪಟವನ್ನು ಟ್ವೀಟ್ ಮಾಡಿದ್ದಾರೆ. ಆದರೆ ಈ ಚಿತ್ರದಲ್ಲಿ ರಾಬರ್ಟ್ ವಾದ್ರಾ ಕಾಶ್ಮೀರ ಕೈಬಿಟ್ಟಿದ್ದಾರೆ.

ಕಾಶ್ಮೀರವನ್ನು ರಾಬರ್ಟ್ ವಾದ್ರಾ ಪಾಕಿಸ್ತಾನಕ್ಕೆ ನೀಡಿರುವ ಭೂಪಟವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಗಡಿ ವಿಚಾರದಲ್ಲಿ ಗೊಂದಲ ಹಾಗೂ ಕಾಶ್ಮೀರ ಭಾರತದ ಭಾಗ ಅಲ್ಲ ಎಂದು ಬಿಂಬಿಸುವ ಪ್ರಯತ್ನ  ಮಾಡಲಾಗಿದೆ.ವಿವಾದ ಹೆಚ್ಚಾಗುತ್ತಿದ್ದಂತೆ ರಾಬರ್ಟ್ ವಾದ್ರಾ ಟ್ವೀಟ್ ಡಿಲೀಟ್ ಮಾಡಿದ್ದಾರೆ

ರಾಬರ್ಟ್ ವಾದ್ರ ಪ್ರಕಾರ ಕಾಶ್ಮೀರ ಭಾರತದ ಅಂಗ ಅಲ್ಲ, ಕಾರಣ ಈ ರೀತಿಯ ಭೂಪಟ ಟ್ವೀಟ್ ಮಾಡುತ್ತಿರುವುದು ಇದು ಮೊದಲಲ್ಲ. ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆ, ಚೀನಾ ಜೊತೆ ಘರ್ಷಣೆ ಬಳಿಕ ವಾದ್ರಾ ಇದೇ ರೀತಿ ಟ್ವೀಟ್ ಮಾಡಿದ್ದರು. 20 ಹುತಾತ್ಮ ಭಾರತೀಯ ಯೋಧರಿಗೆ ಸಂತಾಪ ಸೂಚಿಸುವ ಭರದಲ್ಲಿ ಭಾರತದ ಭೂಪಟ ಪೋಸ್ಟ್ ಮಾಡಿದ್ದರು. ಈ ಭೂಪಟದಲ್ಲಿ ವಾದ್ರಾ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಿದ್ದರು.

click me!