* ಕೇಂದ್ರದಿಂದ ಕೋವಿಡ್ ಮಾರ್ಗಸೂಚಿ ವಿಸ್ತರಣೆ
* ಆಗಸ್ಟ್ 31ರವರೆಗೂ ವಿಸ್ತರಣೆ ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯದಿಂದ ಆದೇಶ
*ಆದೇಶ ಹಿನ್ನೆಲೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಬಲ್ಲ ಪತ್ರ
ನವದೆಹಲಿ,(ಜು.28): ದೇಶದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ತಗ್ಗಿದ್ದು, ಮೂರನೇ ಅಲೆ ಬರಲಿದೆ ಎನ್ನುವ ವರದಿ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋವಿಡ್ ಮಾರ್ಗಸೂಚಿ ವಿಸ್ತರಣೆ ಮಾಡಿದೆ.
ಆಗಸ್ಟ್ 31ರವರೆಗೂ ಕೋವಿಡ್ ಮಾರ್ಗಸೂಚಿ ವಿಸ್ತರಣೆ ಮಾಡಿ ಕೇಂದ್ರ ಆರೋಗ್ಯ ಸಚಿವಾಲಯ ಇಂದು (ಜು.28) ಆದೇಶ ಹೊರಡಿಸಿದೆ. ಆದೇಶ ಪತ್ರವನ್ನ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಬಲ್ಲ ಅವರು ರಾಜ್ಯ ಸರ್ಕಾರಗಳಿಗೆ ರವಾನಿಸಿದ್ದಾರೆ.
ಮತ್ತೆ ಏರಿದ ಕೊರೋನಾ-ಸಾವು ಹೆಚ್ಚಳ: ಪಾಸಿಟಿವಿಟಿ 10 ದಿನದ ಗರಿಷ್ಠ
undefined
ಕೋವಿಡ್ ಇನ್ನು ಕಡಿಮೆಯಾಗಿಲ್ಲ, ಕೇಸ್ ಕಡಿಮೆಯಾಗಿದೆ ಎಂದು ಮೈಮರೆಯಬೇಡಿ. ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೆಲವು ರಾಜ್ಯದಲ್ಲಿ ಕೋವಿಡ್ ಕಡಿಮೆಯಾಗಿಲ್ಲ. ಕೊರೋನಾ ಸೋಂಕು ಹೆಚ್ಚಳ ಇರುವ ಜಿಲ್ಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಿ ಎಂದು ಆದೇಶದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಇನ್ನು ಹಬ್ಬಗಳಲ್ಲಿ ಜನ ಸಮೂಹ ಸೇರದಂತೆ ನೋಡಿಕೊಳ್ಳಬೇಕು. ಅಲ್ಲದೇ 5 ಟಿ ಸೂತ್ರ ಪಾಲಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.