
ದೆಹಲಿ(ಜು.28): ಪ್ರಧಾನಿ ನಮ್ಮ ಫೋನ್‌ಗಳಲ್ಲಿ ಆಯುಧವನ್ನು ಸೇರಿಸಿದ್ದಾರೆ. ಅದನ್ನು ಭಾರತದ ಪ್ರಜಾಪ್ರಭುತ್ವದ ಆತ್ಮಕ್ಕೆ ಹೊಡೆಯಲು ಬಳಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪೆಗಾಸಸ್ ಬಗ್ಗೆ ಪ್ರತಿಕ್ರಿಸಿದ ಅವರು, ಈಗ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಬೇಡಿಕೆಗಳ ಬಾಯಿ ಮುಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದಿದ್ದಾರೆ. ವಿರೋಧ ಪಕ್ಷಗಳ ಸಭೆಯ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ್ದಾರೆ.
ಸಂಸತ್ತಿನಲ್ಲಿ ನಮ್ಮ ಧ್ವನಿಯನ್ನು ಅಡಗಿಸಲಾಗುತ್ತಿದೆ. ಪೆಗಾಸಸ್ ಸಾಫ್ಟ್‌ವೇರ್ ಖರೀದಿಸಲಾಗಿದೆಯೇ ? ಭಾರತದ ಕೆಲವು ವ್ಯಕ್ತಿಗಳ ವಿರುದ್ಧ ಬಳಸಲಾಗಿದೆಯೇ ಎಂದು ಮಾತ್ರ ನಾವು ಕೇಳುತ್ತಿದ್ದೇವೆ ಎಂದು ಅವರು ಪ್ರಶ್ನಿಸಿದ್ದಾರೆ.
ಏನಿದು ಪೆಗಾಸಸ್ ಸ್ಪೈವೇರ್? ಹೇಗೆ ಫೋನ್ ಒಳಗೆ ನುಸುಳುತ್ತದೆ?: ತಜ್ಞರ ಉತ್ತರ
ನಿಮ್ಮ ಫೋನ್‌ಗಳಲ್ಲಿ ನರೇಂದ್ರ ಮೋದಿ ಅವರು ನೆಟ್ಟಿರುವ ಆಯುಧವಿದೆ. ವಿರೋಧ ಪಕ್ಷದ ನಾಯಕರು, ಪತ್ರಕರ್ತರು, ಕಾರ್ಯಕರ್ತರ ವಿರುದ್ಧ ಬಳಸಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಮತ್ತು ಶಿವಸೇನೆ ಹೊರತುಪಡಿಸಿ, ಸಿಪಿಐ ಮತ್ತು ಸಿಪಿಎಂ, ರಾಷ್ಟ್ರೀಯ ಜನತಾದಳ, ಎಎಪಿ, ಡಿಎಂಕೆ, ಎನ್‌ಸಿಪಿ, ರಾಷ್ಟ್ರೀಯ ಸಮ್ಮೇಳನ ಮತ್ತು ಸಮಾಜವಾದಿ ಪಕ್ಷ ಇಂದಿನ ಸಭೆಯಲ್ಲಿ ಭಾಗವಹಿಸಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ