
ನವದೆಹಲಿ: ನೆರೆಯ ಚೀನಾ ಮತ್ತು ಪಾಕಿಸ್ತಾನದಿಂದ ಗಡಿಯಲ್ಲಿ ಸದಾ ಕ್ಯಾತೆಯ ನಡುವೆಯೇ ಭಾರತೀಯ ಸೇನೆಗೆ ಭರ್ಜರಿ ಬಲ ತುಂಬುವ 84328 ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಕೇಂದ್ರ ಸರ್ಕಾರ ಗುರುವಾರ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಒಟ್ಟು ಮೊತ್ತದ ಪೈಕಿ 82127 ಕೋಟಿ ರು.ಮೌಲ್ಯದ ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿಯೇ ಖರೀದಿಸಲಾಗುವುದು. ಇದು ಮೇಕ್ ಇನ್ ಇಂಡಿಯಾ ಯೋಜನೆಗೆ ಇನ್ನಷ್ಟುಬಲ ತುಂಬಲಿದೆ ಎಂದು ಸರ್ಕಾರ ಹೇಳಿದೆ.
ಗುರುವಾರ ಅನುಮೋದನೆ ಅನ್ವಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಲಘು ಟ್ಯಾಂಕ್, ಯುದ್ಧನೌಕೆ ಧ್ವಂಸ ಕ್ಷಿಪಣಿ (missiles), ದೂರ ನಿರ್ದೇಶಿತ ಬಾಂಬ್, ಅತ್ಯಾಧುನಿಕ ವಾಹನಗಳು, ಬಹು ಉದ್ದೇಶಿತ ನೌಕೆಗಳು, ಸಾಕಷ್ಟು ದೂರ ಸಾಗಬಲ್ಲ ಹೊಸ ಕ್ಷಿಪಣಿ ವ್ಯವಸ್ಥೆ (Air Force), ಅತ್ಯಾಧುನಿಕ ಕರಾವಳಿ ಕಾವಲು ನೌಕೆಗಳು, ಬ್ಯಾಲೆಸ್ಟಿಕ್ ಹೆಲ್ಮೆಟ್, ಸೇರಿವೆ ಎಂದು ಮೂಲಗಳು ತಿಳಿಸಿವೆ.
ಭಾರತ-ಚೀನಾ ನಡುವೆ ಸೇನಾ ಮಾತುಕತೆ
ನವದೆಹಲಿ: ಅರುಣಾಚಲದ ತವಾಂಗ್‌ನಲ್ಲಿ (Tawang) ಇತ್ತೀಚೆಗೆ ಚೀನಾ ನಡೆಸಿದ ಅತಿಕ್ರಮಣದಿಂದ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ನಡುವೆಯೇ ಪೂರ್ವ ಲಡಾಖ್ (East Ladakh) ಬಿಕ್ಕಟ್ಟು ಇತ್ಯರ್ಥ ಸಂಬಂಧ ಉಭಯ ದೇಶಗಳ ಸೇನೆಗಳು ಡಿ.20ರಂದು ಉನ್ನತ ಮಟ್ಟದ ಮಾತುಕತೆ ನಡೆಸಿವೆ. ಭಾರತ-ಚೀನಾ ಕಾರ್ಪ್ ಕಮಾಂಡರ್ ಮಟ್ಟದ 17ನೇ ಸಭೆಯು ಚೀನಾದ ಕರೆಯಿರುವ ಚುಹ್ಶುಲ್-ಮೊಲ್ಡೊ ಗಡಿ ಸಭಾ ಸ್ಥಾನದಲ್ಲಿ ಡಿ.20ರಂದು ನಡೆದಿತ್ತು. ಗಡಿ ಬಿಕ್ಕಟ್ಟು ಹಾಗೂ ಇನ್ನಿತರೆ ವಿಚಾರಗಳನ್ನು ಶೀಘ್ರ ಪರಿಹರಿಸಲು ಉಭಯ ದೇಶದ ನಾಯಕರು ಒದಗಿಸಿದ ಮಾರ್ಗದರ್ಶನದ ಅನುಸಾರ ಮಾತುಕತೆಗಳು ನಡೆದಿವೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.
ಜಗತ್ತಿಗೆ ಎದುರಾಗಿದ್ದ ಕಂಟಕ ತಪ್ಪಿಸಿದ್ದರು ನಮೋ: ಇದು ಸಿಐಎ ಮುಖ್ಯಸ್ಥ ಹೇಳಿದ ರಹಸ್ಯ
ಈ ಸಭೆಯಲ್ಲಿ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳಲು ಹಾಗೂ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಗಾಗಿ ಮುಕ್ತ ಹಾಗೂ ರಚನಾತ್ಮಕ ರೀತಿಯಲ್ಲಿ ಚರ್ಚೆಗಳು ನಡೆದಿವೆ. ಉಭಯ ದೇಶಗಳು ಪರಸ್ಪರ ಸೇನೆ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆ ಮುಂದುವರೆಸಲು ಹಾಗೂ ಸಮಸ್ಯೆಗಳಿಗೆ ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಶೀಘ್ರ ರೂಪಿಸಲು ಒಪ್ಪಿಕೊಂಡಿವೆ ಎಂದು ತಿಳಿಸಿದ್ದಾರೆ.
ಭಾರತೀಯ ಸೇನೆಗೆ ಬರಲಿದೆ ಸೂಸೈಡ್ ಡ್ರೋನ್, ಇದರ ಸಾಮರ್ಥ್ಯಕ್ಕೆ ಸಾಟಿಯೇ ಇಲ್ಲ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ