ಡಿಎಂಕೆ ಸಂಸದ ಎ.ರಾಜಾಗೆ ಸೇರಿದ 55 ಕೋಟಿ ರು. ಮೌಲ್ಯದ ಬೇನಾಮಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಜಪ್ತಿ ಮಾಡಿಕೊಂಡಿದೆ
ಕೊಯಮತ್ತೂರು: ಡಿಎಂಕೆ ಸಂಸದ ಎ.ರಾಜಾಗೆ ಸೇರಿದ 55 ಕೋಟಿ ರು. ಮೌಲ್ಯದ ಬೇನಾಮಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಜಪ್ತಿ ಮಾಡಿಕೊಂಡಿದೆ. ಎ. ರಾಜಾ ಅವರಿಗೆ ಸೇರಿದ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿರುವ 45 ಎಕರೆ ಜಾಗವನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಜಪ್ತಿ ಮಾಡಿಕೊಳ್ಳಲಾಗಿದೆ. 2004 ರಿಂದ 2007ರ ಅವಧಿಯಲ್ಲಿ ರಾಜಾ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವರಾಗಿದ್ದಾಗ ಗುರುಗ್ರಾಮ ಮೂಲದ ರಿಯಲ್ ಎಸ್ಟೇಟ್ ಕಂಪನಿಯೊಂದಕ್ಕೆ ಪರಿಸರ ಪರವಾನಗಿ ನೀಡಿದ್ದಕ್ಕೆ ಬದಲಾಗಿ ಈ ಜಾಗವನ್ನು ರಾಜಾ ಅವರಿಗೆ ಸೇರಿದ ಕಂಪನಿಗೆ ಮಾರಾಟ ಮಾಡಲಾಗಿತ್ತು.
ಪ್ರಸ್ತುತ ಈ ಭೂಮಿ ರಾಜಾ (A Raja) ಅವರಿಗೆ ಸೇರಿದ ‘ಬೇನಾಮಿ’ ಕಂಪನಿಯ ಹೆಸರಿನಲ್ಲಿದೆ ಎಂದು ಎಂದು ಇ.ಡಿ (ED) ಹೇಳಿದೆ. ಈ ಕಂಪನಿ ಆರಂಭದಿಂದಲೂ ಯಾವ ವ್ಯವಹಾರದಲ್ಲೂ ತೊಡಗಿಸಿಕೊಂಡಿಲ್ಲ. ಕಂಪನಿಯ ಹೆಸರಲ್ಲಿ ಕೇವಲ 55 ಕೋಟಿ ಮೌಲ್ಯದ 45 ಎಕರೆ ಭೂಮಿಯನ್ನು ಮಾತ್ರ ಅಕ್ರಮ ಹಣ ಬಳಸಿ ಖರೀದಿಸಲಾಗಿದೆ. ಹೀಗಾಗಿ 2007ರಲ್ಲಿ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಬಳಸುವ ಏಕೈಕ ಉದ್ದೇಶದಿಂದ ರಾಜಾ ತಮ್ಮ ಕುಟುಂಬದ ಸದಸ್ಯರು ಹಾಗೂ ಆಪ್ತರ ಹೆಸರಿನಲ್ಲಿ ಕಂಪನಿ ಸ್ಥಾಪಿಸಿದ್ದಾರೆ ಎಂದು ಇ.ಡಿ ಆರೋಪಿಸಿದೆ. ಈ ಹಿಂದೆ ಎ. ರಾಜಾ ಅವರ 2ಜಿ ಸ್ಪೆಕ್ಟ್ರಂ (2G Spectrum) ತರಂಗಾಂತರ ಹಗರಣದಲ್ಲೂ ಭಾಗಿಯಾಗಿ 2011ರಲ್ಲಿ ಜೈಲು ಸೇರಿದ್ದರು.
ಎ. ರಾಜಾ ಹಳೆಯ 2ಜಿ ಕ್ಷಿಪಣಿ: ಮೋದಿ ಕಿಡಿ
2ಜಿ ಹಗರಣ: ವಿಚಾರಣೆ ಮುಂದಕ್ಕೆ ಕೋರಿದಕ್ಕೆ 16000 ಮರ ನೆಡುವ ಶಿಕ್ಷೆ!