ಚೀನಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಕೋವಿಡ್ ಸ್ಪೋಟಗೊಂಡಿರುವ ಕಾರಣ ಭಾರತದಲ್ಲಿ ಮುನ್ನಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಧಾನಿ ಮೋದಿ ತುರ್ತು ಸಭೆ ಬಳಿಕ ಇದೀಗ ಕೇಂದ್ರ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ನವದೆಹಲಿ(ಡಿ.22): ವಿದೇಶಗಳಲ್ಲಿ ಕೋವಿಡ್ ಅಬ್ಬರ ಆರಂಭಗೊಂಡಿದೆ. ಚೀನಾ, ಅಮೆರಿಕ, ಬ್ರೆಜಿಲ್, ಜಪಾನ್ ಸೇರಿದಂತೆ ಕೆಲ ದೇಶಗಳಲ್ಲಿನ ಪ್ರತಿ ದಿನದ ಕೋವಿಡ್ ಪ್ರಕರಣ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಿದೆ. ಒಮಿಕ್ರಾನ್ ಬಿಎಫ್.7 ಉಪತಳಿ ಮಾರಣಾಂತಿಕವಾಗಿ ಪರಿಣಮಿಸಿದೆ. ಇದೇ ತಳಿ ಭಾರತದಲ್ಲೂ ಪತ್ತೆಯಾಗಿರುವುದು ಅತಂಕ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಸೇರಿದಂತೆ ಪ್ರಮಖರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಮೋದಿ ಮಹತ್ವದ ಸಲಹೆ ನೀಡಿದ್ದಾರೆ. ಈ ಸಭೆ ಬಳಿಕ ಕೇಂದ್ರ ಆರೋಗ್ಯ ಇಲಾಖೆ ಕೋವಿಡ್ ಹರಡದಂತೆ ತಡೆಯಲು ಹೊಸ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮಾರ್ಗಸೂಚಿ ಪ್ರಕಟಿಸಿದೆ.
ಕೇಂದ್ರ ಸರ್ಕಾರ ಪ್ರಕಟಿಸಿದ ಮಾರ್ಗಸೂಚಿ ವಿವರ ಇಲ್ಲಿದೆ.
undefined
• ಎಲ್ಲಾ ಆಸ್ಪತ್ರೆಗಳಲ್ಲಿ ಬರುವ ILI ಮತ್ತು SARI ಪ್ರಕರಣಗಳಗೆ ಕೋವಿಡ್ 19 ಪರೀಕ್ಷೆ ಮಾಡುವುದು ಕಡ್ಡಾಯ
• ಸೋಂಕಿನ ಲಕ್ಷಣಗಳನ್ನು ಹೊಂದಿದವರಿಗೆ ಹಾಗೂ ಖಚಿತ ಪ್ರಕರಣಗಳ ಸಂಪರ್ಕಿತರು. ಕೋವಿಡ್ 19 ಪರೀಕ್ಷೆಗೆ ಒಳಪಡುವುದನ್ನು ಖಚಿತಪಡಿಸಿಕೊಳ್ಳಬೇಕು
• ಬೂಸ್ಟರ್ ಡೋಸ್ ಪ್ರಕ್ರಿಯೆಗೆ ವೇಗ ನೀಡುವುದು. ಡಿಸೆಂಬರ್ 2022 ರಿಂದ ಜನವರಿ 2023ರ ವರೆಗೆ 50% ರಷ್ಟು ಸಾಧಿಸಬೇಕು
ಕ್ರಿಸ್‌ಮಸ್, ನ್ಯೂ ಇಯರ್‌ಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಆರೋಗ್ಯ ಇಲಾಖೆ
• ಇದಕ್ಕಾಗಿ, ಎಲ್ಲಾ ಹಂತಗಳಲ್ಲೂ ಲಸಿಕಾಕರಣದ ಕ್ಯಾಂಪ್‌ಗಳನ್ನು ಆಯೋಜಿಸುವುದು.
• ಎಲ್ಲಾ ಕೋವಿಡ್ 19 ಪಾಸಿಟಿವ್ ಫಲಿತಾಂಶ ಬಂದ ಮಾದರಿಗಳನ್ನು (ct value < 25) ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಡ್ಡಾಯವಾಗಿ ಕಳುಹಿಸಬೇಕು.
• ಸೋಂಕಿನ ಲಕ್ಷಣಗಳನ್ನು ಹೊಂದಿರುವವರನ್ನು ಪರೀಕ್ಷೆ ಒಳಪಡಿಸಲು ಅಗತ್ಯ ಸಂಖ್ಯೆಯ ಟೀಂಗಳನ್ನು ಬಿಬಿಎಂಪಿ
ಹಾಗೂ ಜಿಲ್ಲೆಗಳು ಕಾರ್ಯೋನ್ಮುಖಗೊಳಿಸುವುದು
• ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮಂಗಳೂರು ವಿಮಾನ ನಿಲ್ದಾಣಗಳಲ್ಲಿ, ಅಂತರ ರಾಷ್ಟ್ರೀಯ ಪ್ರಯಾಣಿಕರ ಪೈಕಿ 2% ಪ್ರಯಾಣಿಕರನ್ನ ರ್ಯಾಂಡಮ್ ಟೆಸ್ಟ್ ಮಾಡುವುದು
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ತಯಾರಿ
• ಕೋವಿಡ್-19 ಪ್ರಕರಣಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕನಿಷ್ಠ ಸಂಖ್ಯೆಯ ಐಸೋಲೇಷನ್ ಬೆಡ್‌ಗಳನ್ನು ಮೀಸಲಿಡುವುದು.
• ಕೋವಿಡ್-19 ಪ್ರಕರಣಗಳು ಏರಿಕೆಯಾದ ಪಕ್ಷದಲ್ಲಿ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಸನ್ನದ್ಧವಾಗಿರಿಸುವುದು
• ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆ, ಔಷಧಿ ಹಾಗೂ ಬೆಡ್ ಇತ್ಯಾದಿಗಳ ಕುರಿತು ಮಾಹಿತಿ ಪಡೆದು ಸಿದ್ಧವಾಗಿರಿಸುವುದು.
• ಆಕ್ಟಿನ್ ಪೂರೈಕೆ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು, ಜಿಲ್ಲಾಸ್ಪತ್ರೆ ಹಾಗೂ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರತಿ 15 ದಿನಗಳಗೊಮ್ಮೆ ಡ್ರೈ ರನ್ ಮಾಡುವುದು
• ಆರೋಗ್ಯ ಸಂಸ್ಥೆಗಳ ವೈದ್ಯರು ಹಾಗೂ ಸಿಬ್ಬಂದಿ, ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳು, ಆರೈಕೆ ಮಾಡುವವರು ಮತ್ತು ಸಂದರ್ಶಕರು ಮಾಸ್ಕ್ ಧರಿಸುವುದು ಕಡ್ಡಾಯ
• ಆರೋಗ್ಯ ಸಿಬ್ಬಂದಿಗಳು ಬೂಸ್ಡರ್ ಡೋಸ್ ಅನ್ನು ಶೀಘ್ರವೇ ಪಡೆಯುವಂತೆ ಸಲಹೆ .