ಮನೆಗೆ ತೆರಳಲು ಸಿಗದ ವಾಹನ, ಸರ್ಕಾರಿ ಬಸ್‌ನ್ನೇ ಮನೆಗೆ ಕದ್ದೊಯ್ದ ಸಿಬ್ಬಂದಿ!

By Suvarna NewsFirst Published Feb 19, 2020, 3:14 PM IST
Highlights

ಮನೆಗೆ ಹೋಗಲು ವಾಹನ ಇಲ್ಲವೆಂದು ಸರ್ಕಾರಿ ಬಸ್‌ನ್ನೇ ಏರಿ ಮನೆಗೆ ತೆರಳಿದ ವ್ಯಕ್ತಿ| ದೂರು ದಾಖಲಿಸಿದ ನಿಗಮ, ಕಳ್ಳನಿಗಾಗಿ ಪೊಲೀಸರ ಹುಡುಕಾಟ

ಮರಾವತಿ[ಫೆ.19]: ಹೈದರಾಬಾದ್‌ನಲ್ಲೊಬ್ಬ ವ್ಯಕ್ತಿ ಮನೆಗೆ ತೆರಳಲು ಯಾವುದೇ ವಾಹನ ಸಿಗದಾಗ ಸರ್ಕಾರಿ ಬಸ್‌ನ್ನೇ ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. TSRTC ಚಾಲಕ ತಾನು ನಿಲ್ಲಿಸಿದ್ದ ಬಸ್ ಕಾಣೆಯಾದಾಗ ಈ ವಿಚಾರ ಬೆಳಕಿಗೆ ಬಂದಿದ್ದು, ಏನಾಗಿದೆ ಎಂದು ಆರಂಭದಲ್ಲಿ ಯಾರಿಗೂ ತೋಚಿಲ್ಲ.

ಹೌದು ಭಾನುವಾರದಂದು ಈ ಘಟನೆ ನಡೆದಿದೆ. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಒಂದನ್ನು ಸಿಬ್ಬಂದಿ ವಿಕಾರಾಬಾದ್ ಜಿಲ್ಲೆಯ ಒಂದು ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದರು.  ಆದರೆ ರಾತ್ರೋ ರಾತ್ರಿ ಕಳ್ಳತನವಾಗಿದೆ. ಇಲ್ಲಿ ಕೆಲಸಕ್ಕಿದ್ದ ಸಿಬ್ಬಂದಿಯೊಬ್ಬರು ಮನೆಗೆ ತೆರಳಲು ಯಾವುದೇ ವಾಹನ ಸಿಗದಾಗ ಬಸ್‌ನ್ನೇ ಕೊಂಡೊಯ್ದಿದ್ದಾರೆ. ಆದರೆ ಈ ವಿಚಾರ ತಿಳಿಯದ ನಿಗಮ ಸಿಬ್ಬಂದಿ, ಬಸ್‌ ಕಾಣೆಯಾಗಿರುವುದನ್ನು ಕಂಡು ಆತಂಕಕ್ಕೊಳಗಾಗಿದ್ದಾರೆ. ಏನಾಗಿದೆ ಎಂದು ಯಾರಿಗೂ ತಿಳಿಯಲಿಲ್ಲ. 

ನಂಬಿ ಬಂದಾಕೆ ಮೇಲೆ 8 ಸ್ನೇಹಿತರ ಜೊತೆ ಸೇರಿ ರೇಪ್!

ಇನ್ನು ಅತ್ತ ಬಸ್‌ ಕೊಂಡೊಯ್ದ ವ್ಯಕ್ತಿ, ಮನೆಗೆ ಹತ್ತಿರವಾಗುತ್ತಿದ್ದಂತೆಯೇ ಬಸ್ ನಿಲ್ಲಿಸಿ ಪರಾರಿಯಾಗಿದ್ದಾನೆ. ನಿಗಮ ದಾಖಲಿಸಿದ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಕಳ್ಳನನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ತನಿಖೆ ಮುಂದುವರೆಸಿರುವ ಪೊಲೀಸರು ಆತನನ್ನು ಪತ್ತೆ ಹಚ್ಚುವ ಕಾರ್ಯಕ್ಕಿಳಿದಿದ್ದಾರೆ. 

click me!