Delhi Riots : "ಬೆಂಕಿ ಹಚ್ಚೋಕೆ ನಾವು ಸಿದ್ಧ", ಉಮರ್ ಖಾಲಿದ್ ಬಗ್ಗೆ ಕೋರ್ಟ್ ನಲ್ಲಿ ಸಾಕ್ಷಿ ಸಮೇತ ವಿವರ ನೀಡಿದ ವಕೀಲರು!

By Contributor Asianet  |  First Published Feb 2, 2022, 5:52 PM IST

2020ರ ದೆಹಲಿ ಗಲಭೆ ಪೂರ್ವನಿಯೋಜಿತ
ಉಮರ್ ಖಾಲೀದ್ ಹಾಗೂ ಅವರ ಸ್ನೇಹಿತರು ಮಾಡಿದ ಕೃತ್ಯ
ಕೋರ್ಟ್ ವಿಚಾರಣೆಯಲ್ಲಿ ಸಾಕಷ್ಟು ಸಾಕ್ಷ್ಯ ನೀಡಿದ ಹಿರಿಯ ವಕೀಲ ಅಮಿತ್ ಪ್ರಸಾದ್


ನವದೆಹಲಿ (ಫೆ.2): 2020ರಲ್ಲಿ ದೆಹಲಿಯಲ್ಲಿ ನಡೆದ ಭೀಕರ ಹಿಂಸಾಚಾರ ಪ್ರಕರಣ ಸಂಪೂರ್ಣವಾಗಿ ಉಮರ್ ಖಾಲಿದ್ ನ (Umar Khalid) ಪಿತೂರಿ, ಇದರೊಂದಿಗೆ ಅವರ ಸ್ನೇಹಿತರ ಪಾತ್ರವೂ ಇದೆ ಎನ್ನುವ ಹಲವಾರು ವ್ಯಾಟ್ಸಾಪ್ ಚಾಟ್ ಗಳು (Whatsapp Chat), ಸಾಕ್ಷಿಗಳ ಹೇಳಿಕೆಗಳು ಹಾಗೂ ಸಿಸಿಟಿವಿ ದೃಶ್ಯಗಳನ್ನು (CCTV) ಸರ್ಕಾರಿ ಪರವಾಗಿ ವಾದ ಮಾಡುತ್ತಿರುವ ಹಿರಿಯ ವಕೀಲ ಅಮಿತ್ ಪ್ರಸಾದ್ (Amit Prasad) ಕರ್ಕರ್ ಧೂಬಾ ನ್ಯಾಯಾಲಯದಲ್ಲಿ ಬುಧವಾರ ಹಾಜರುಪಡಿಸಿದರು. ಶಾಂತಿಯುತ ಪ್ರತಿಭಟನೆಯ ಹೆಸರಲ್ಲಿ ಉಮರ್ ಖಾಲಿದ್, ಗಲಭೆಗಳನ್ನು ಪ್ರಚೋದಿಸಲು ಯೋಜಿತವಾದ ಸಂಚು ರೂಪಿಸಿದ್ದ ಎನ್ನುವುದು ಈ ಸಾಕ್ಷಿಗಳಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ.

ದೆಹಲಿ ಗಲಭೆಗೆ (Delhi Riots) ಸಂಬಂಧಿಸಿದಂತೆ ಜೆಎನ್ ಯು ಮಾಜಿ ವಿದ್ಯಾರ್ಥಿ ( Former JNU student) ಉಮರ್ ಖಾಲಿದ್ ಅವರ ಜಾಮೀನು ಅರ್ಜಿ ವಿಚಾರಣೆ ಹಾಗೂ ಅವರ ಪಿತೂರಿಯ ಕುರಿತಾಗಿ ವಕೀಲರು ದೊಡ್ಡ ಪ್ರಮಾಣದ ಸಾಕ್ಷ್ಯವನ್ನು ಕರ್ಕರ್ ಧೂಬಾ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿದರು. ವ್ಯಾಟ್ಸ್ ಆಪ್ ಚಾಟ್ ನಲ್ಲಿ ದೆಹಲಿಯ ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸುವ ಎಲ್ಲಾ ಯೋಜನೆಗಳೂ ರೂಪಿತವಾಗಿದ್ದವು ಎನ್ನುವುದು ಬಹಿರಂಗಗೊಂಡಿದೆ. "ಆಗ್ ಲಗ್ವಾನೇ ಕೀ ಪೂರಿ ತಯಾರಿ ಕರ್ ಚುಕೇ ಹೇ" (ಬೆಂಕಿ ಹಚ್ಚೋಕೆ ನಾವು ಸಂಪೂರ್ಣವಾಗಿ ತಯಾರಾಗಿದ್ದೇವೆ), "ದಂಡೇ, ಪತ್ತರ್, ಲಾಲ್ ಮಿರ್ಚ್, ತೇಜಾಬ್ ಇಕಟ್ಟೆ ಕಿಯೇ ಜಾಯೇ" (ದೊಣ್ಣೆ, ಕಲ್ಲು, ಖಾರದ ಪುಡಿ ಎಲ್ಲವನ್ನು ಸಿದ್ಧ ಮಾಡಿಕೊಳ್ಳಿ), "ಫಾರ್ ನೌ ವೀ ನೀಡ್ ಟು ಸ್ಟಾಪ್ ವಯಲೆನ್ಸ್ (ಈಗ ನಾವು ಹಿಂಸಾಚಾರವನ್ನು ಕೊನೆ ಮಾಡಬೇಕು)" ಎನ್ನುವ ಸಂದೇಶಗಳು ಈ ಗ್ರೂಪ್ ನಲ್ಲಿ ಹರಿದಾಡಿವೆ.

ಶಾಂತಿ ಸಭೆಯಲ್ಲಿ ಆಸಿಡ್, ಲಾಠಿ ಹಾಗೂ ದೊಣ್ಣೆಗಳನ್ನು ಒಟ್ಟುಗೂಡಿಸಿದ್ದರು:  ನ್ಯಾಯಮೂರ್ತಿ ಅಮಿತಾಭ್ ರಾವತ್ ಮಧ್ಯಾಹ್ನ 12 ಗಂಟೆಗೆ ವರ್ಚುವಲ್ ವಿಚಾರಣೆ ಪ್ರಾರಂಭಿಸಿದ್ದರು. ಈ ವೇಳೆ ದೆಹಲಿ ಪೊಲೀಸ್, ಜನವರಿ 15 ಹಾಗೂ 16 ರಂದು ಶಾಂತಿ ಸಭೆ ಎನ್ನುವ ಹೆಸರಿನಲ್ಲಿ ಚಾಂದ್ ಭಾಘ್ ನಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯ ಮೂಲಕ ದೊಣ್ಣೆ, ಕಲ್ಲು, ಖಾರದ ಪುಡಿ ಹಾಗೂ ಆಸಿಡ್ ಗಳನ್ನು ಸಂಗ್ರಹಣೆ ಮಾಡಲಾಗಿತ್ತು. ಶಾಂತಿಪೂರ್ವಕವಾಗಿ ನಡೆಯುವ ಸಭೆ ಆಗಿದ್ದಲ್ಲಿ ಇಂಥ ವಸ್ತುಗಳನ್ನು ಏಕೆ ಸಂಗ್ರಹಣೆ ಮಾಡಲಾಗುತ್ತಿತ್ತು ಎಂದು ವಕೀಲರು ಪ್ರಶ್ನೆ ಮಾಡಿದ್ದಾರೆ. ಓವೈಸ್ ಹೆಸರಿನ ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೋರ್ಟ್ ನಲ್ಲಿ ಪ್ರಸ್ತುತ ವಕೀಲು ಪ್ರಸ್ತುತ ಪಡಿಸಿದರು. ಸ್ಕ್ರೀನ್ ಶಾಟ್ ನಲ್ಲಿ ಓವೈಸ್ ಎನ್ನುವ ವ್ಯಕ್ತಿ, ಪೋಲೀಸರ ಮೇಲೆ ಹಲ್ಲೆ ಮಾಡಲು ಖಾರದ ಪುಡಿಯನ್ನು ಜನರಿಗೆ ನೀಡುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದರಲ್ಲಿ ಅನಾಸ್ ತನ್ವೀರ್ ಎನ್ನುವ ವಕೀಲ, ಒವೈಸ್ ಮಾತಿಗೆ ಸಹಮತಿ ವ್ಯಕ್ತಪಡಿಸಿದ್ದಾರೆ. ನಮ್ಮ ಸಮಾಧಿಯನ್ನು ನಾವೇ ತೋಡಿಕೊಳ್ಳುತ್ತಿರುವುದೇಕೆ ಎಂದು ಅವರು ಹೇಳಿರುವ ಸಾಲುಗಳು ಸ್ಕ್ರೀನ್ ಶಾಟ್ ನಲ್ಲಿದೆ. ಇನ್ನೊಂದು ಸಂದೇಶದಲ್ಲಿ ಮತ್ತೊಬ್ಬ ವ್ಯಕ್ತಿ, "ಇದು ಹಿಂದುಸ್ತಾನದ ಹೋರಾಟಕ್ಕಿಂತ ಮುಸ್ಲಿಂ ಹೋರಾಟವಾಗಿ ಯಾಕೆ ಬದಲಾಗುತ್ತಿದೆ' ಎಂದು ಪ್ರಶ್ನೆ ಮಾಡಿದ್ದು, ಇದರ ಬೆನ್ನಲ್ಲಿಯೇ ರಾಹುಲ್ ರಾಯ್ ಎನ್ನುವ ವ್ಯಕ್ತಿ, ರಣತಂತ್ರದಲ್ಲಿ ಬದಲಾವಣೆ ಆಗಿದೆ ಎಂದು ಹೇಳುತ್ತಾನೆ ಎಂದು ವಕೀಲರು ಸಾಕ್ಷಿಗಳ ವಿವರವನ್ನು ಬಿಚ್ಚಿಟ್ಟರು.
 

of 2020 were a pre-planned conspiracy, allegedly, bolstered at behest of Umar Khalid, Khalid Saifi, Safoora Zargar, Devangana Kalita, Natasha Badhwar, others. Undercurrents of violence apparent: Prosecutor https://t.co/0wCW09FJrQ

— LawBeat (@LawBeatInd)


ಒಟ್ಟಾರೆ ದೆಹಲಿ ಗಲಭೆಯಲ್ಲಿ ದೊಡ್ಡ ಮಟ್ಟದ ಪಿತೂರಿ ಇರುವುದು ಸಾಬೀತಾಗಿದೆ. ಒಬ್ಬ ವ್ಯಕ್ತಿಯ ಹೇಳಿಕೆಯಲ್ಲಿ, "ಅಂದು ಮಹಿಳೆಯರು ಹಾಗೂ ಗಂಡಸರಿಗೆ ಲಾಠಿ ಹಾಗೂ ಕಲ್ಲುಗಳನ್ನು ನೀಡಲಾಗಿತ್ತು' ಎಂದು ತಿಳಿಸಿದ್ದಾರೆ. ಶಾಂತಿ ಸಭೆಯಲ್ಲಿ ಮಾತನಾಡಿದ್ದ ಉಮರ್ ಖಾಲಿದ್, "ಸರ್ಕಾರ ಮುಸ್ಲೀಮರ ವಿರುದ್ಧವಾಗಿದೆ. ಭಾಷಣಗಳು ಕೆಲಸ ಮಾಡುವುದಿಲ್ಲ. ನಾವು ರಕ್ತವನ್ನು ಹರಿಸಬೇಕಿದೆ" ಎಂದು ಹೇಳಿದ್ದರು. ಸಾಕ್ಷಿಯೊಬ್ಬರು ನೀಡಿದ ಹೇಳಿಕೆಯನ್ನು ವಕೀಲರು ಕೋರ್ಟ್ ನಲ್ಲಿ ಓದಿದ್ದಾರೆ.

CAAಗೆ ವಿರೋಧ: ದೆಹಲಿ ದಂಗೆ ಆರೋಪಿಗಳಿಗೆ ಬೇಲ್, ಜೈಲಿನಿಂದ ರಿಲೀಸ್!
ಉಮರ್ ಖಾಲಿದ್, ಖಾಲಿದ್ ಸೈಫಿ ಹಾಗೂ ಅವರ ಇತರ ಸ್ನೇಹಿತರು ಹಿಂಸಾಚಾರವನ್ನು ಕೊನೆ ಮಾಡುವ ಬದಲಿಗೆ, ಬೆಂಕಿ ಹೊತ್ತಿಸುವ ಕೆಲಸ ಮಾಡಿದ್ದರು. ವಿಲಿಯಂ ಎನ್ನುವ ಸಾಕ್ಷಿಯ ಹೇಳಿಕೆಯನ್ನು ಕೋರ್ಟ್ ನಲ್ಲಿ ಈ ವೇಳೆ ಓದಲಾಯಿತು. 10 ಬಸ್ ಗಳ ವ್ಯವಸ್ಥೆ ಮಾಡಲಾಗುತ್ತದೆ, 250 ಮಹಿಳೆಯರು ಹಾಗೂ ಮಕ್ಕಳು ಜಂತರ್ ಮಂತರ್ ಗೆ ಹೋಗಿ ಪ್ರತಿಭಟನೆ ಮಾಡಬೇಕು ಎಂದು ಹೇಳಲಾಗಿತ್ತು. ನಾನು ಉಮರ್ ಖಾಲಿದ್ ಅವರನ್ನು ಅಲ್ಲಿ ಭೇಟಿ ಮಾಡಿದೆ. ಜಹಾಂಗಿರ ಪುರಿಯಲ್ಲಿ ಸಾಕಷ್ಟು ಬಾಂಗ್ಲಾದೇಶಿಗಳಿದ್ದಾರೆ ಅವರಿಗೆ ಸಿಎಎ ಹಾಗೂ ಎನ್ ಆರ್ ಸಿ ಬಗ್ಗೆ ತಿಳಿಸಿ ಹೇಳುವಂತೆ ಹೇಳಿದ್ದ. ಯಾವುದೇ ಸ್ಥಳೀಯ ಮಹಿಳೆಯರು ಪ್ರತಭಟನೆಯ ಭಾಗವಾಗುವ ಅಗತ್ಯವಿಲ್ಲ ಎಂದು ಸೂಚಿಸಲಾಗಿತ್ತು.

'ಹಿಂದೂಸ್ತಾನ್ ಜಿಂದಾಬಾದ್; ಪಾಕಿಸ್ತಾನ್ ಮುರ್ದಾಬಾದ್' ಘೋಷಣೆ ಕೂಗು ಎಂದು ಹಲ್ಲೆ
ಜಾನ್ಹವಿ, ನತಾಶಾ, ಉಮರ್ ಖಾಲಿದ್ ಮತ್ತು ತಬರೇಜ್ ಅವರ ದೊಡ್ಡ ಪಾತ್ರ ಈ ಗಲಭೆಯಲ್ಲಿದೆ. ದೆಹಲಿ ಗಲಭೆ ಒಟ್ಟಾರೆ ಪೂರ್ವ ನಿಯೋಜಿತ ಎನ್ನುವುದು ಇದರಲ್ಲಿ ಸ್ಪಷ್ಟವಾಗುತ್ತದೆ. ಗಲಭೆಯ ಕುರಿತಾದ ಕೆಲ ಸಿಸಿಟಿವಿ ದೃಶ್ಯಾವಳಿಗಳನ್ನೂ ಈ ವೇಳೆ ಪ್ರಸ್ತುತಪಡಿಸಲಾಗಿದ್ದು, ಗುರುವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ.

ಸಾಕಷ್ಟು ದೂರವಾಣಿ ಕರೆಗಳು: ದೆಹಲಿ ಗಲಭೆಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಸಾವಿಗೀಡಾದ ಬಳಿಕ, ಪಿತೂರಿ ಮಾಡಿದವರ ನಡುವೆ ಸಾಕಷ್ಟು ದೂರವಾಣಿ ಕರೆಗಳು ನಡೆದಿವೆ ಎನ್ನುವುದಕ್ಕೆ ಸಾಕ್ಷ್ಯಗಳನ್ನು ತೋರಿಸಲಾಗಿದ.ೆ ಅದರೊಂದಿಗೆ ಸಾಕ್ಷಿಗಳನ್ನು ಅಳಿಸಿಹಾಕುವ ಪ್ರಯತ್ನಗಳೂ ನಡೆದಿವೆ. ಮರಿಯಾ ಸಲೀಂ ಎನ್ನುವ ವ್ಯಕ್ತಿ, "ಈ ಗ್ರೂಪ್ ಅನ್ನು ಡಿಲೀಟ್ ಮಾಡಿ ಸಿಗ್ನಲ್ (ಮತ್ತೊಂದು ಚಾಟಿಂಗ್ ಅಪ್ಲಿಕೇಶನ್) ಅಲ್ಲಿ ಜೊತೆಯಾಗೋಣ' ಎಂದಿದ್ದರು. ಯಾವುದನ್ನೂ ಮರೆಮಾಚುವ ಪ್ರಯತ್ನ ಇಲ್ಲದಿದ್ದಲ್ಲಿ, ಗ್ರೂಪ್ ಅನ್ನು ಡಿಲೀಟ್ ಮಾಡುವ ಪ್ರಶ್ನೆ ಏನಿದೆ ಎಂದು ಕೇಳಿದ್ದಾರೆ. ಇನ್ನು ರಾಹುಲ್ ರಾಯ್ ಅವರಿಂದ ಬಂದ ಸಂದೇಶದಲ್ಲಿ, "ಪ್ರತಿ ವ್ಯಕ್ತಿಗಳೂ ವೈಯಕ್ತಿಕವಾಗಿ ತಮ್ಮ ಚಾಟ್ ಗಳನ್ನು ಡಿಲೀಟ್ ಮಾಡಬೇಕು' ಎನ್ನುವ ಸೂಚನೆ ಹೊಂದಿತ್ತು ಎಂದಿದ್ದಾರೆ.

ಇನ್ನು ಪೀಸ್ ಕಮೀಟಿ ಗ್ರೂಪ್ ನಲ್ಲಿ ಹರ್ಷ ಮಂದರ್ ಎನ್ನುವ ವ್ಯಕ್ತಿ, ಪ್ರತಿ ಪ್ರತಿಭಟನಾ ಸ್ಥಳದಲ್ಲೂ ಮುಸ್ಲೀಂ ಅಲ್ಲದ ವ್ಯಕ್ತಿಗಳು ಬೇಕು ಎಂದು ಹೇಳಿದ್ದಾರೆ. ಪ್ರತಿಭಟನೆ ಮಾಡುವವರೇ ಮುಸ್ಲೀಂ ಹಾಗೂ ಮುಸ್ಲಿಂ ಹೊರತಾದ ವ್ಯಕ್ತಿಗಳು ಎಂದು ಭೇದ ತೋರಿಸುತ್ತಿದ್ದಾರೆ. ಇದನ್ನು ಚಾರ್ಜ್ ಶೀಟ್ ನಲ್ಲಿ ದಾಖಲಿಸಿದರೆ, ತನಿಖಾಧಿಕಾರಿ ಕಮ್ಯುನಲ್ ಎನಿಸಿಕೊಳ್ಳುತ್ತಾನೆ ಎಂದು ವಕೀಲರು ಹೇಳಿದ್ದಾರೆ.

Tap to resize

Latest Videos

 

click me!