ಬಿಜೆಪಿ ಅಭ್ಯರ್ಥಿ ಉಜ್ವಲ್ ನಿಕಮ್ ಅವರು ಹೊಟೇಲ್ ಸೌಕರ್ಯಕ್ಕಾಗಿ ರಾಜ್ಯ ಸರ್ಕಾರದಿಂದ ₹ 17 ಲಕ್ಷ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಆರೋಪಿಸಿದ್ದಾರೆ.
ಮುಂಬೈ (ಮೇ.18): ಮುಂಬೈ ಮೇಲೆ ದಾಳಿ ಮಾಡಿದ್ದ ಉಗ್ರ ಅಜ್ಮಲ್ ಕಸಬ್ ವಿರುದ್ಧ ವಾದ ಮಾಡಿ ಆತನಿಗೆ ಗಲ್ಲು ಶಿಕ್ಷೆ ವಿಧಿಸುವಲ್ಲಿ ಕೋರ್ಟ್‌ನಲ್ಲಿ ಹೋರಾಟ ಮಾಡಿದ್ದ ಸರ್ಕಾರಿ ವಕೀಲ ಹಾಗೂ ಹಾಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಂಬೈ ಉತ್ತರ ಕೇಂದ್ರ ವಿಭಾಗದ ಅಭ್ಯರ್ಥಿ ಉಜ್ವಲ್ ನಿಕಮ್ ಹಾಗೂ ಕಾಂಗ್ರೆಸ್ ನಡುವೆ ಜಟಾಪಟು ನಡೆಯುತ್ತಿದೆ. ಅದೂ ಕೇವಲ 17 ಲಕ್ಷದ ವಿಚಾರವಾಗಿ ಇವರ ನಡುವೆ ಮಾತುನ ಸಮರ ನಡೆಯುತ್ತಿದೆ. ಉಜ್ವಲ್ ನಿಕಮ್ ಅವರು 2010ರ 26/11 ದಾಳಿ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಹಾಜರಾಗಿದ್ದಾಗ ಹೋಟೆಲ್‌ನಲ್ಲಿ ವಸತಿಗಾಗಿ ರಾಜ್ಯ ಸರ್ಕಾರದಿಂದ ₹ 17 ಲಕ್ಷ ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಗುರುವಾರ ಆರೋಪಿಸಿದ್ದಾರೆ. ಆದರೆ ಅವರಿಗೆ 2010 ರಲ್ಲಿ ರಾಜ್ಯ ಸರ್ಕಾರವು ತನ್ನ ಕೋಟಾದ ಮೂಲಕ ವರ್ಸೋವಾದಲ್ಲಿ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (MHADA) ಫ್ಲಾಟ್ ಅನ್ನು ಮಂಜೂರು ಮಾಡಿತ್ತು. ಈಗಾಗಲೇ ಮುಂಬೈನಲ್ಲಿ ನಿಕಮ್ ಮನೆ ಹೊಂದಿರುವಾಗ ರಾಜ್ಯದ ಬೊಕ್ಕಸದಿಂದ ಹಣವನ್ನು ಏಕೆ ತೆಗೆದುಕೊಂಡರು ಎಂಬುದನ್ನು ಸ್ಪಷ್ಟಪಡಿಸುವಂತೆ ಕಾಂಗ್ರೆಸ್ ಕೇಳಿದೆ.
ನಿಕಮ್ ಅವರು ವಿಶೇಷ ಅಭಿಯೋಜಕರಾಗಿ ನೇಮಕಗೊಂಡಾಗ ಒಪ್ಪಿಕೊಂಡ ಷರತ್ತುಗಳ ಭಾಗವಾಗಿದೆ ಮತ್ತು ಅವರು ಸಾರ್ವಜನಿಕ ಸೇವಕನಲ್ಲದ ಕಾರಣ ನೈತಿಕತೆಯ ಪ್ರಶ್ನೆಯೇ ಇಲ್ಲ ಎಂದು ನಿಕಮ್ ಆರೋಪಗಳನ್ನು ತಳ್ಳಿಹಾಕಿದರು.
undefined
26/11ರ ಮುಂಬೈ ದಾಳಿಯ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಇವರನ್ನು ನೇಮಕ ಮಾಡಲಾಗಿತ್ತು. ಪ್ರತಿ ವಿಚಾರಣೆಗೆ ₹ 50,000 ಮತ್ತು ಇತರ ಹಲವು ಸವಲತ್ತುಗಳನ್ನು ನೀಡಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರ ಎಂದು ಸಾವಂತ್ ಹೇಳಿದ್ದಾರೆ. ಆದರೆ ಅವರು 2011 ಮತ್ತು 2014 ರ ನಡುವಿನ ಹೋಟೆಲ್ ವಾಸ್ತವ್ಯದ ಬಿಲ್ ಅನ್ನು ರಾಜ್ಯ ಸರ್ಕಾರವು ನಂತರ ಅಂಗೀಕರಿಸಿತ್ತು ಎಂದು ಹೇಳಿದ್ದಾರೆ.
“ನಾನು ಸಾರ್ವಜನಿಕ ಸೇವಕನಲ್ಲ ಮತ್ತು ಹಲವಾರು ಷರತ್ತುಗಳ ಮೇಲೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿದ್ದೆ. ಎಲ್ಲಿ ಉಳಿಯಬೇಕು ಮತ್ತು ಎಲ್ಲಿ ಉಳಿಯಬಾರದು ಎಂಬುದು ನನ್ನ ಆಯ್ಕೆಯಾಗಿತ್ತು. ಆ ಎಲ್ಲ ಷರತ್ತುಗಳನ್ನು ಅಂದಿನ ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಾತ್ರವನ್ನು ಸಚಿನ್ ಸಾವಂತ್ ಅರ್ಥಮಾಡಿಕೊಳ್ಳಬೇಕು. ಇಲ್ಲಿ ನೈತಿಕತೆಯ ಪ್ರಶ್ನೆಯೇ ಇಲ್ಲ’ ಎಂದು ನಿಕಮ್ ಹೇಳಿದರು.
ಮುಂಬೈನ ಹೈ ಪ್ರೊಫೈಲ್ ಕ್ಷೇತ್ರಕ್ಕೆ ಬಿಜೆಪಿಯಿಂದ ಉಗ್ರ ಕಸಬ್ ಗಲ್ಲಿಗೆ ಕಾರಣವಾದ ವಕೀಲ ನಿಕಂ ಅಭ್ಯರ್ಥಿ
ಹಾಲಿ ಸಂಸದೆ ಪೂನಂ ಮಹಾಜನ್ ಅವರ ಬದಲಿಗೆ ಮುಂಬೈ ನಾರ್ತ್ ಸೆಂಟ್ರಲ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿಕಮ್ ಅವರನ್ನು ಕಣಕ್ಕಿಳಿಸಿದೆ. ಅವರ ಎದುರಾಳಿ ಮುಂಬೈ ಕಾಂಗ್ರೆಸ್ ಮುಖ್ಯಸ್ಥೆ ವರ್ಷಾ ಗಾಯಕ್ವಾಡ್ ಆಗಿದ್ದಾರೆ.
ಉಗ್ರ ಅಜ್ಮಲ್ ಕಸಾಬ್ ಅಮಾಯಕ, ಅಧಿಕಾರಿ ಕರ್ಕೆರೆ ಹತೈ ಹಿಂದೆ ಆರ್‌ಎಸ್‌ಎಸ್ ಕೈವಾಡ ಎಂದ ಕಾಂಗ್ರೆಸ್!