Asianet Suvarna News Asianet Suvarna News

ಉಗ್ರ ಅಜ್ಮಲ್ ಕಸಾಬ್ ಅಮಾಯಕ, ಅಧಿಕಾರಿ ಕರ್ಕೆರೆ ಹತೈ ಹಿಂದೆ ಆರ್‌ಎಸ್‌ಎಸ್ ಕೈವಾಡ ಎಂದ ಕಾಂಗ್ರೆಸ್!

2008ರ ಮುಂಬೈ ದಾಳಿಯಲ್ಲಿ 175 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಕೂಡ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಆದರೆ ಕರ್ಕರೆ ಹತ್ಯೆ ಹಿಂದೆ ಅಜ್ಮಲ್ ಕಸಬ್ ಸೇರಿದಂತೆ ಆತನ ಜೊತೆ ಬಂದ ಉಗ್ರರ ನೆಡೆಸಿದ ಕೃತ್ಯವಲ್ಲ, ಇದು ಆರ್‌ಎಸ್‌ಎಸ್ ಕೈವಾಡ ಎಂದು ಕಾಂಗ್ರೆಸ್ ನಾಯಕ ನೀಡಿದ ಹೇಳಿಕೆ ಕೋಲಾಹಲ ಸೃಷ್ಟಿಸಿದೆ.
 

Hemant karkare killed by RSS not terrorist like Ajmal Kasab says Congress leader Vijay Wadettiwar ckm
Author
First Published May 5, 2024, 3:39 PM IST

ಮುಂಬೈ(ಮೇ.05) ಮುಂಬೈ ಮೇಲಿನ ಉಗ್ರ ದಾಳಿ ಭಾರತದ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ಭಯೋತ್ಪಾದಕ ದಾಳಿಗಳಲ್ಲೊಂದು. ದಾಳಿ ನಡೆದು 16 ವರ್ಷಗಳು ಉರುಳಿಸಿದರೂ ನೋವು ಇನ್ನು ಮಾಸಿಲ್ಲ. ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಮುಂಬೈಗೆ ಲಗ್ಗೆ ಇಟ್ಟ 10 ಲಷ್ಕರ್ ಇ ತೋಯ್ಬಾ ಉಗ್ರರು ಸಿಕ್ಕ ಸಿಕ್ಕರ ಮೇಲೆ ಗುಂಡು ಹಾರಿಸಿ 175 ಮಂದಿ ಹತ್ಯೆಗೈದಿದ್ದರು. 300ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಉಗ್ರ ದಾಳಿಯಲ್ಲಿ ಮುಂಬೈ ಭಯೋತ್ಪಾದನಾ ನಿಗ್ರಹ ದಳ ಮುಖ್ಯಸ್ಥ ಹೇಮಂತ್ ಕರ್ಕರೆ ಕೂಡ ಹುತಾತ್ಮರಾಗಿದ್ದರು. ಆದರೆ ಇದೀಗ ಕಾಂಗ್ರೆಸ್ ಲಷ್ಕರ್ ಇ ತೋಯ್ಬಾ ಹಾಗೂ ಅಜ್ಮಲ್ ಕಸಬ್ ಪರ ಬ್ಯಾಟ್ ಬೀಸಿದೆ. ಹೇಮಂತ್ ಕರ್ಕರೆಗೆ ಗುಂಡಿಕ್ಕಿದ್ದು ಅಜ್ಮಲ್ ಕಸಬ್ ಹಾಗೂ ಆತನ ಜೊತೆಗೆ ಬಂದ ಉಗ್ರರಲ್ಲ. ಇದು ಆರ್‌ಎಸ್‌ಎಸ್ ವ್ಯಕ್ತಿಗಳು ಹಾರಿಸಿದ ಗುಂಡೇಟಿಗೆ ಕರ್ಕರೆ ಹತ್ಯೆಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ, ಮಹಾರಾಷ್ಟ್ರ ವಿಧಾನಸಭಾ ವಿರೋಧ ಪಕ್ಷದ ನಾಯಕ ವಿಜಯ್ ವಡೆಟ್ಟಿವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಜ್ಮಲ್ ಕಸಬ್ ಹಾಗೂ ಲಷ್ಕರ್ ಇ ತೋಯ್ಬಾದ ಇನ್ನುಳಿದ 9 ಉಗ್ರರು ಅಮಾಯಕರು ಎಂಬ ಕಿರೀಟವನ್ನು ಮಹಾರಾಷ್ಟ್ರ ಕಾಂಗ್ರಸ್ ನಾಯಕ ತೊಡಿಸಿದ್ದಾರೆ. ಹೇಮಂತ್ ಕರ್ಕೆರೆಗೆ ಪಕ್ಕದಲ್ಲಿದ್ದ ಪೊಲೀಸ್ ಆಪ್ತರೇ ಗಂಡಿಕ್ಕಿದ್ದಾರೆ. ಆರ್‌ಎಸ್‌ಎಸ್ ಸಂಪರ್ಕಿತ ಈ ಪೊಲೀಸ್ ಕೈಯಿಂದ ಕರ್ಕೆರೆ ಮೃತಪಟ್ಟಿದ್ದಾರೆ ಎಂದು ನಾಯಕ ವಿಜಯ್ ಆರೋಪಿಸಿದ್ದಾರೆ. 

Mumbai attack ಉಗ್ರ ಅಜ್ಮಲ್ ಕಸಬ್ ಪಾಕಿಸ್ತಾನಿ, ಸತ್ಯ ಬಹಿರಂಗ ಪಡಿಸಿದ ಪಾಕ್ ಗೃಹ ಸಚಿವ ಶೇಕ್ ರಶೀದ್!

ವಿಚಾರಣೆಯಲ್ಲಿ ಈ ಸಾಕ್ಷ್ಯಗಳ ಕುರಿತು ವಕೀಲ ಉಜ್ವಲ್ ನಿಕಮ್ ಸೊಲ್ಲೆತ್ತಿಲ್ಲ. ಇದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ್ದಾರೆ. ಇದೀಗ ಇದೇ ಉಜ್ವಲ್ ನಿಕಮ್‌ಗೆ ಬಿಜೆಪಿ ಮುಂಬೈ ನಾರ್ತ್ ಸೆಂಟ್ರಲ್‌ನಿಂದ ಟಿಕೆಟ್ ನೀಡಿದೆ ಎಂದು ವಿಜಯ್ ವಡೆವಟ್ಟಿವರ್ ಆರೋಪಿಸಿದ್ದಾರೆ. ಮುಂಬೈ ದಾಳಿ ಕುರಿತು ಸಾಕ್ಷಿ ಆಧಾರಗಳನ್ನು ಕಲೆ ಹಾಕಿ ಕೋರ್ಟ್‌ನಲ್ಲಿ ವಾದ ಮಾಡಿ ಪಾಕಿಸ್ತಾನದ ಕೈವಾಡ ಬಟಾ ಬಯಲು ಮಾಡಿದ ಉಜ್ವಲ್ ನಿಕಮ್, ಉಗ್ರ ಅಜ್ಮಲ್ ಕಸಬ್‌ಗೆ ಗಲ್ಲು ಶಿಕ್ಷೆ ನೀಡುವಲ್ಲೂ ಯಶಸ್ವಿಯಾಗಿದ್ದರು. ಇದೀಗ ಮಹಾರಾಷ್ಟ್ರಯ ಕಾಂಗ್ರೆಸ್ ನಾಯಕನ ಪ್ರಕಾರ, ಉಜ್ವಲ್ ನಿಕಮ್ ವಕೀಲ ಅಲ್ಲ ದೇಶದ್ರೋಹಿ, ಕಸಬ್ ಅಮಾಯಕ ಎಂದಿದ್ದಾರೆ.

 

 

ಕಾಂಗ್ರೆಸ್ ನಾಯಕ ವಿಜಯ್ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ರಾಜಕೀಯ ಏನೇ ಇರಬಹುದು, ಲೋಕಸಭಾ ಚುನಾವಣೆಗೆ ಮತ ಕೇಳಲು, ಬಿಜೆಪಿ ಮೇಲೆ ವಾಗ್ದಾಳಿ ನಡೆಸಲು ಸಾಕಷ್ಟು ವಿಚಾರಗಳು ಇರಬಹುದು. ಆದರೆ ದೇಶದ ಮೇಲೆ ನಡೆದ ಭಯೋತ್ಪಾದನಾ ದಾಳಿ, ಉಗ್ರರಿಗೆ ಅಮಾಯಕ ಹಣೆ ಪಟ್ಟಿ ಕಟ್ಟುವುದು ದೇಶದ್ರೋಹದ ಕೆಲಸ ಎಂದು ಬಿಜೆಪಿ ಹೇಳಿದೆ. ಉಗ್ರರಿಗೆ ಅಮಾಯಕ ಪಟ್ಟ ಕಟ್ಟುವುದು ಕಾಂಗ್ರೆಸ್ ಮಾಡಿಕೊಂಡು ಬಂದಿರುವ ಪರಿಪಾಠ. ಕಾಂಗ್ರೆಸ್ ಪಾಕಿಸ್ತಾನದಲ್ಲಿ ಮತ ಕೇಳುತ್ತಿದೆಯಾ ಎಂದು ಬಿಜೆಪಿ ಪ್ರಶ್ನಿಸಿದೆ.

26/11 ಉಗ್ರ ಕಸಬ್‌ ಬಂಧನಕ್ಕೆ ಈಕೆ ಪ್ರಮುಖ ಕಾರಣ: ಗುಂಡೇಟು ಬಿದ್ದು 6 ಬಾರಿ ಆಪರೇಷನ್‌ಗೊಳಗಾದ ಬಾಲಕಿ!

ಮತಬ್ಯಾಂಕ್‌ಗಾಗಿ ಕಾಂಗ್ರೆಸ್ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ ಅನ್ನೋದಕ್ಕೆ ಈ ರೀತಯ ಹಲವು ಸಾಕ್ಷ್ಯಗಳಿವೆ. ಇದೇ ಕಾರಣಕ್ಕೆ ಪಾಕಿಸ್ತಾನ ಕಾಂಗ್ರೆಸ್ ಸೋಲಿಗೆ ಅಳುತ್ತಿದೆ ಎಂದು ಬಿಜೆಪಿ ನಾಯಕರು ಸರಣಿ ವಾಗ್ದಾಳಿ ನಡೆಸಿದ್ದಾರೆ.
 

Follow Us:
Download App:
  • android
  • ios