ಉಜ್ಜಯಿನಿ ರೇಪ್ ಕೇಸ್: ಪೋಷಕರೊಂದಿಗೆ ಮುನಿಸಿಕೊಂಡು ಮನೆ ತೊರೆದಿದ್ದ ರೇಪ್‌ ಸಂತ್ರಸ್ತೆ

Published : Sep 29, 2023, 09:49 AM ISTUpdated : Sep 29, 2023, 10:08 AM IST
ಉಜ್ಜಯಿನಿ ರೇಪ್ ಕೇಸ್: ಪೋಷಕರೊಂದಿಗೆ ಮುನಿಸಿಕೊಂಡು ಮನೆ ತೊರೆದಿದ್ದ ರೇಪ್‌ ಸಂತ್ರಸ್ತೆ

ಸಾರಾಂಶ

ಅತ್ಯಾಚಾರ ಸಂತ್ರಸ್ತೆ ಬಾಲಕಿ ತಾನು ಉತ್ತಮ ಜೀವನ ಅರಸಿ ತನ್ನ ಮನೆಯನ್ನು ತೊರೆದು ಹೊರ ಬಂದಿದ್ದಾಗಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.

ಉಜ್ಜಯಿನಿ: ಅತ್ಯಾಚಾರ ಸಂತ್ರಸ್ತೆ ಬಾಲಕಿ ತಾನು ಉತ್ತಮ ಜೀವನ ಅರಸಿ ತನ್ನ ಮನೆಯನ್ನು ತೊರೆದು ಹೊರ ಬಂದಿದ್ದಾಗಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ. ಪ್ರಕರಣ ಸಂಬಂಧ ಬಾಲಕಿಯನ್ನು ಆಪ್ತಸಮಾಲೋಚನೆಗೆ ಒಳಪಡಿಸಿದ ವೇಳೆ ಪೋಷಕರ ಜೊತೆ ವೈಮನಸ್ಯ ಉಂಟಾದ ಹಿನ್ನೆಲೆಯಲ್ಲಿ ಉತ್ತಮ ಜೀವನ ಅರಸಿ ಸತ್ನಾ(Satna) ತೊರೆದು ಉಜ್ಜಯಿನಿಗೆ ಬಂದಿದ್ದೆ. ಆದರೆ ಸೋಮವಾರ ರಿಕ್ಷಾ ಚಾಲಕ ಅತ್ಯಾಚಾರಗೈದ ಎಂದು ಅತ್ಯಾಚಾರ ಸಂತ್ರಸ್ತೆ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದರು.

ರಿಕ್ಷಾ ಚಾಲಕ ವಶಕ್ಕೆ, 5 ಶಂಕಿತರ ವಿಚಾರಣೆ
ಅಪ್ರಾಪ್ತ ಬಾಲಕಿ ಮೇಲೆ ನಡೆದ ಭೀಕರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿರುವ ಸ್ಥಳೀಯ ಪೊಲೀಸರು ಓರ್ವ ಆಟೋ ರಿಕ್ಷಾ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಇತರೆ ಐವರು ಶಂಕಿತರನ್ನು ವಿಚಾರಣೆ ನಡೆಸುತ್ತಿದ್ದಾರೆ. ಸೋಮವಾರ ಇಲ್ಲಿನ ರಸ್ತೆಗಳಲ್ಲಿ 12 ವರ್ಷದ ಅತ್ಯಾಚಾರ ಸಂತ್ರಸ್ತೆ ಬಾಲಕಿ (minor girl) ರಕ್ತಸ್ರಾವದ ಸ್ಥಿತಿಯಲ್ಲಿ ಸಹಾಯಕ್ಕಾಗಿ ಓಡಾಡುತ್ತಿದ್ದ ಭೀಕರ ಘಟನೆ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟೀವಿ ದೃಶ್ಯಾವಳಿ ಆಧರಿಸಿ ಆಟೋ ರಿಕ್ಷಾ ಚಾಲಕನನ್ನು ಬಂಧಿಸಿದ ಪೊಲೀಸರು, ಆತನ ರಿಕ್ಷದ ಸೀಟಿನಲ್ಲಿ ರಕ್ತದ ಕಲೆ ಪತ್ತೆಹಚ್ಚಿದ್ದಾರೆ. ಇದೇ ವೇಳೆ ಬಾಲಕಿಗೆ ಚಿಕಿತ್ಸೆ ಕೊಡಿಸಿ ಸಮಾಲೋಚನೆ ನಡೆಸಿದಾಗ ಆಕೆ ಸತ್ನಾ ಜಿಲ್ಲೆಯವಳು ಎಂಬುದು ತಿಳಿದು ಬಂದಿತ್ತು.

ದಾರಿಮಧ್ಯೆ ಸಂಕಷ್ಟಕ್ಕೊಳಗಾದ ಒಡತಿಯ ಸುರಕ್ಷಿತವಾಗಿ ಕರೆತಂದ ಶ್ವಾನ: ಕ್ಯಾಮರಾದಲ್ಲಿ ದೃಶ್ಯ ಸೆರೆ

ಹಸಿವು, ಭಯದಿಂದ ಕಂಗೆಟ್ಟಿದ್ದ ಬಾಲಕಿ
ನೆರವು ಯಾಚಿಸಿ ಅಲೆದಾಡುವ ವೇಳೆ ಆಶ್ರಮವೊಂದರ ಅರ್ಚಕ ರಾಹುಲ್‌ ಶರ್ಮಾ (Rahul Sharma) ಆಕೆಗೆ ನೆರವಾಗಿದ್ದರು. ಆ ಕ್ಷಣದ ಕುರಿತು ಬೆಳಕು ಚೆಲ್ಲಿಸುವ ರಾಹುಲ್‌, ‘ಆಕೆ ಆಶ್ರಮಕ್ಕೆ ಬಂದ ಸ್ಥಿತಿ ಹೇಳಲಾಗದು. ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಆಕೆ ಸಂಪೂರ್ಣವಾಗಿ ಬೆದರಿದ್ದಳು. ಏನೂ ಹೇಳುವ ಸ್ಥಿತಿಯಲ್ಲಿ ಆಕೆ ಇರಲಿಲ್ಲ. ಹೀಗಾಗಿ ಮೊದಲಿಗೆ ಆಕೆಗೆ ಬಟ್ಟೆ ಕೊಟ್ಟು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದೆ. ನಂತರ ಆಕೆಗೆ ಸಂಜ್ಞೆ ಮೂಲಕ ತಿನ್ನಲು ಏನಾದರೂ ಬೇಕಾ ಎಂದು ಕೇಳಿದೆ. ಆಕೆ ಹೌದು ಎಂದಳು. ಬಳಿಕ ಆಕೆಗೆ ಆಹಾರ ನೀಡಿದಾಗ ತಿನ್ನದೇ ಎಷ್ಟೋ ದಿನ ಆಯಿತು ಅನ್ನುವ ಹಾಗೆ ಆಹಾರ ತಿಂದಳು. ಆಹಾರ ತಿನ್ನುವ ವೇಳೆ ಮತ್ತು ಪೊಲೀಸರು ಸ್ಥಳಕ್ಕೆ ಬಂದ ವೇಳೆ ಆಕೆ ಹೆದರಿಕೊಂಡು ನನ್ನ ಹಿಂದೆ ಅವಿತುಕೊಂಡಿದ್ದಳು ಎಂದು ರಾಹುಲ್‌ ಮಾಹಿತಿ ನೀಡಿದ್ದಾರೆ. ಈ ನಡುವೆ ನೊಂದ ಅಪರಿಚಿತ ಬಾಲಕಿಗೆ ನೆರವು ನೀಡಿದ ರಾಹುಲ್‌ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಜಾಗತಿಕ ನಾವಿನ್ಯತಾ ಸೂಚ್ಯಂಕ: 2015ರಲ್ಲಿ 81ನೇ ಸ್ಥಾನದಲ್ಲಿದ್ದ ಭಾರತಕ್ಕೆ 40ನೇ ಸ್ಥಾನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!