ವಿದೇಶಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿಯರಿಂದ ಭಿಕ್ಷಾಟನೆ: ವಲಸಿಗರ ಬಗ್ಗೆ ಸೌದಿ, ಇರಾಕ್ ಆಕ್ಷೇಪ

Published : Sep 29, 2023, 07:24 AM ISTUpdated : Sep 29, 2023, 10:22 AM IST
ವಿದೇಶಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿಯರಿಂದ ಭಿಕ್ಷಾಟನೆ: ವಲಸಿಗರ ಬಗ್ಗೆ ಸೌದಿ, ಇರಾಕ್ ಆಕ್ಷೇಪ

ಸಾರಾಂಶ

ವಿವಿಧ ದೇಶಗಳಿಗ ಭಯೋತ್ಪಾದಕರನ್ನು ಮತ್ತು ಹಣಕ್ಕಾಗಿ ಚೀನಾಗೆ ಕತ್ತೆಗಳನ್ನು ರಫ್ತು ಮಾಡುತ್ತಿದ್ದ ಪಾಕಿಸ್ತಾನದಿಂದ ಇದೀಗ ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಭಿಕ್ಷುಕರ ರಫ್ತು ಹೆಚ್ಚಾಗಿದೆ.

 

ಇಸ್ಲಾಮಾಬಾದ್‌: ವಿವಿಧ ದೇಶಗಳಿಗ ಭಯೋತ್ಪಾದಕರನ್ನು ಮತ್ತು ಹಣಕ್ಕಾಗಿ ಚೀನಾಗೆ ಕತ್ತೆಗಳನ್ನು ರಫ್ತು ಮಾಡುತ್ತಿದ್ದ ಪಾಕಿಸ್ತಾನದಿಂದ ಇದೀಗ ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಭಿಕ್ಷುಕರ ರಫ್ತು ಹೆಚ್ಚಾಗಿದೆ. ಹೌದು. ಹಣದುಬ್ಬರದಿಂದ ಕಂಗೆಟ್ಟಿರುವ ಪಾಕಿಸ್ತಾನದ ಭಿಕ್ಷುಕರು ಹೆಚ್ಚಿನ ಸಂಖ್ಯೆಯಲ್ಲಿ ಈ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ.

ವಲಸೆ ಏಕೆ?

  • ಪಾಕ್ ಜನತೆಯನ್ನು ಕಾಡುತ್ತಿದೆ ಭೀಕರ ಹಣದುಬ್ಬರ. ವಸ್ತುಗಳೆಲ್ಲ ದುಬಾರಿ
  • ಹೀಗಾಗಿ, ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಧಾರ್ಮಿಕ ವೀಸಾ ಬಳಸಿ ವಲಸೆ
  • ಅಲ್ಲಿ ಹೋಗಿ ಭಿಕ್ಷಾಟನೆ. ಕೆಲವರಿಂದ ಕಳ್ಳತನ. ಸೌದಿ, ಇರಾಕ್ ಆಕ್ಷೇಪ
  •  ಈ ಕುರಿತು ದೂರು ಬಂದ ಬಗ್ಗೆ ಸ್ವತಃ ಪಾಕ್‌ ಅಧಿಕಾರಿಯಿಂದ ಮಾಹಿತಿ

ಪಾಕಿಸ್ತಾನದಲ್ಲಿ ಆರ್ಥಿಕತೆ (Pakistan Economy) ದುಸ್ಥಿತಿ ತಲುಪಿದ್ದು, ಆಹಾರದ ಬೆಲೆ (Food Price) ಗಗನಕ್ಕೇರಿದೆ. ಹೀಗಾಗಿ ಜನರಿಗೆ ಜೀವನ ಮಾಡುವುದು ಕಷ್ಟವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಜನರು ಪಶ್ಚಿಮ ಏಷ್ಯಾದ ರಾಷ್ಟ್ರಗಳಿಗೆ ವಲಸೆ ಹೋಗಲು ಆರಂಭಿಸಿದ್ದಾರೆ. ಇವರೆಲ್ಲರೂ ಉಮ್ರಾ ವೀಸಾ (ಪವಿತ್ರ ಸ್ಥಳಗಳ ಭೇಟಿಗಾಗಿ ಕೊಡುವ ವೀಸಾ)ಗಳನ್ನು ಪಡೆದುಕೊಂಡು ಸೌದಿ ಅರೇಬಿಯಾಗೆ ತೆರಳಿ ಬಳಿಕ ಅಲ್ಲಿ ಭಿಕ್ಷೆ ಬೇಡಲು ಆರಂಭಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮೆಕ್ಕಾದ ಗ್ರಾಂಡ್‌ ಮಸೀದಿಯ ಬಳಿ ಜೇಬುಗಳ್ಳತನ ಆರೋಪದಡಿ ಬಂಧನಕ್ಕೊಳಪಟ್ಟ ಬಹುತೇಕ ಕಳ್ಳರು ಪಾಕಿಸ್ತಾನಿಯರೇ ಆಗಿದ್ದಾರೆ. ಹೀಗೆ ವಿದೇಶಗಳಿಗೆ ಹೋದ ಭಿಕ್ಷುಕರಲ್ಲಿ ಶೇ.90ರಷ್ಟು ಮಂದಿ ಸೌದಿ ಅರೇಬಿಯಾ ಮತ್ತು ಇರಾಕ್‌ನಲ್ಲಿ(Iraq) ಜೈಲು ಪಾಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ದಾರಿಮಧ್ಯೆ ಸಂಕಷ್ಟಕ್ಕೊಳಗಾದ ಒಡತಿಯ ಸುರಕ್ಷಿತವಾಗಿ ಕರೆತಂದ ಶ್ವಾನ: ಕ್ಯಾಮರಾದಲ್ಲಿ ದೃಶ್ಯ ಸೆರೆ

ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿರುವ ಭಿಕ್ಷುಕರನ್ನು ತಡೆಗಟ್ಟುವಂತೆ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ (Saudi Arabia) ಮತ್ತು ಇರಾಕ್‌ ದೇಶಗಳು ಈಗಾಗಲೇ ಎಚ್ಚರಿಕೆಯನ್ನು ನೀಡಿದೆ. ಪಾಕಿಸ್ತಾನದ ಬಡವರು ಯಾತ್ರಿಕರ ವೇಷದಲ್ಲಿ ನಮ್ಮ ದೇಶಗಳನ್ನು ಪ್ರವೇಶಿಸುತ್ತಿದ್ದಾರೆ. ಬಳಿಕ ಇಲ್ಲೇ ಉಳಿದುಕೊಂಡು ರಸ್ತೆಗಳಲ್ಲಿ ಭಿಕ್ಷೆ (begging on the road)ಬೇಡುತ್ತಿದ್ದಾರೆ ಎಂದು ಈ ದೇಶಗಳು ಪಾಕಿಸ್ತಾನಕ್ಕೆ ದೂರು ಸಲ್ಲಿಸಿವೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 1 ಕೋಟಿ ಪಾಕಿಸ್ತಾನಿಯರು ವಿದೇಶಗಳಲ್ಲಿ ವಾಸಿಸುತ್ತಿದ್ದು, ಇವರೆಲ್ಲರೂ ಭಿಕ್ಷೆ ಬೇಡುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಹಲವು ಬಾರಿ ಪಾಕಿಸ್ತಾನದಿಂದ ಮಧ್ಯಪ್ರಾಚ್ಯಕ್ಕೆ ತೆರಳುವ ವಿಮಾನಗಳು ಈ ಭಿಕ್ಷುಕರಿಂದಲೇ ತುಂಬಿರುತ್ತದೆ ಎಂದು ಸಾಗರೋತ್ತರ ಪಾಕಿಸ್ತಾನಿಯ ಸಮಿತಿಯ ಕಾರ್ಯದರ್ಶಿ ಜೀಶನ್‌ ಖಾನ್‌ಜಾದಾ (Zeeshan Khanzada) ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು