ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅಸ್ತಂಗತ

By Suvarna NewsFirst Published Dec 29, 2019, 9:20 AM IST
Highlights

ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು (89) ದೈವಾದೀನ|ಅನಾರೋಗ್ಯದಿಂದ ಕೊನೆಯುಸಿರೆಳೆದ ಶ್ರೀಗಳು|  ಉಸಿರಾಟದ ತೊಂದರೆ, ನ್ಯುಮೋನಿಯಾದಿಂದ ಬಳಲುತ್ತಿದ್ದ ಶ್ರೀಗಳು| ಕಳಚಿತು ಉಡುಪಿ ಮಾಧ್ವ ಪರಂಪರೆಯ ಹಿರಿಯ ಕೊಂಡಿ| ಶೋಕ ಸಾಗರದಲ್ಲಿ ಕೋಟ್ಯಂತರ ಭಕ್ತ ವೃಂದ

 

ಉಡುಪಿ [ಡಿ.29] :  ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ದೈವಾಧೀನರಾಗಿದ್ದಾರೆ.  ಅವರ ಕೊನೆಯ ಆಸೆಯಂತೆ ಉಡುಪಿ ಮಠದಲ್ಲೇ ಶ್ರೀಗಳು ಬೆಳಗ್ಗೆ 9.20ಕ್ಕೆ ಅಸ್ತಂಗತರಾಗಿದ್ದಾರೆ. ಶ್ರೀಗಳಿಗೆ 89 ವರ್ಷ ವಯಸ್ಸಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಉಡುಪಿಯ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು.

"

ಉಡುಪಿಯ ಮಠದಲ್ಲಿ ಗೋವಿಂದ ನಾಮಸ್ಮರಣೆಯ ಮೂಲಕ ಶ್ರೀಗಳು ಕೊನೆಯುಸಿರೆಳೆದರೆಂದು ಘೋಷಣೆ ಮಾಡಲಾಗಿದೆ. ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಉಡುಪಿಯಿಂದ 120 ಕಿಲೋ ಮೀಟರ್ ದೂರ ಇರುವ ಸುಬ್ರಮಣ್ಯ ಸಮೀಪದ ಹಳ್ಳಿ ರಾಮಕುಂಜದಲ್ಲಿ  1931ರ ಏಪ್ರಿಲ್ 27 ರಂದು ಪೇಜಾವರ ಶ್ರೀಗಳ ಜನನವಾಯಿತು.  ತಂದೆ ನಾರಾಯಣಚಾರ್ಯ, ತಾಯಿ ಕಮಲಮ್ಮ, ಹುಟ್ಟಿದ ಎರಡನೇ ಗಂಡು ಮಗುವಿಗೆ ವೆಂಕಟರಮಣ ಎಂದು ಹೆಸರಿಟ್ಟರು.  ರಾಮಕುಂಜದ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದರು.

1938ರಲ್ಲಿ ತಮ್ಮ 7ನೇ ವಯಸ್ಸಿನಲ್ಲಿಯೇ ಸ್ವಾಮೀಜಿ ಅವರಿಗೆ ಮಾರ್ಗಶಿರ ಶುದ್ಧ ಪಂಚಮಿಯಂದು  ಹಂಪೆಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ದೀಕ್ಷೆ ನೀಡಲಾಯಿತು.

ಪೇಜಾವರ ಶ್ರೀಗಳ ಬಗೆಗಿನ ಕ್ಷಣ ಕ್ಷಣದ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ಕಿಸಿ

ಪೂರ್ವಾಶ್ರಮದ ಹೆಸರು ವೆಂಕಟರಮಣ ಎಂದಿದ್ದು, ಸಂಸ್ಥಾನದ ಉತ್ತರಾಧಿಕಾರಿಯಾದ ಬಳಿಕ, ಮಠದ ಪರಂಪರೆಯ 32ನೆ ಯತಿಯಾದಾಗ ವಿಶ್ವೇಶ ತೀರ್ಥರಾದರು.  ಉಡುಪಿಗೆ ಆಗಮಿಸಿದ ಸ್ವಾಮೀಜಿ ಮಾಧ್ವ ಯತಿಗಳನ್ನೇ ಅಗ್ರಮಾನ್ಯ ಪಂಡಿತರೆಂದು ಖ್ಯಾತರಾಗಿದ್ದು,  ಹಿರಿಯ ಸಾಧಕರೆನಿಸಿಕೊಂಡವರು.

ಪೇಜಾವರ ಶ್ರೀಗಳ ಬಗೆಗಿನ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪೇಜಾವರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರು ಪೇರಾದಾಗ ಪ್ರಧಾನಿ ನರೇಂದ್ರ  ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಆದಿಯಾಗಿ  ಹಲವಾರು ನಾಯಕರು ಆರೋಗ್ಯ ವಿಚಾರಸಿದ್ದರು.

ತಿರುಪತಿ ತಿಮ್ಮಪ್ಪನ ದರ್ಶನದ ಬಳಿಕ ಶ್ರೀಗಳ ಆರೋಗ್ಯ ಏರುಪೇರಾಗಿತ್ತು. ಡಿಸೆಂಬರ್ 18ರಂದು ತಿರುಪತಿ ತಿಮ್ಮಪ್ಪನ ದರ್ಶನ  ಪಡೆದಿದ್ದ ಶ್ರೀ ಡಿಸೆಂಬರ್ 20ರಂದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಡಿ.18ಕ್ಕಿಂತ ಮುನ್ನ ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದರು.  ಶ್ರೀಗಳ ನಿಧನದ ಸುದ್ದಿ ತಿಳಿದ ಉಡುಪಿಯಲ್ಲಿ ಮೌನ ಆವರಿಸಿದೆ.

ಡಿಸೆಂಬರ್ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!